ಬಡ ಮಕ್ಕಳಿಗೆ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿ ವಿತರಣೆ

Distribution of notebooks, stationery to poor children


ಬಡ ಮಕ್ಕಳಿಗೆ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿ ವಿತರಣೆ 

ಕಂಪ್ಲಿ 15: ಕಾಂಗ್ರೆಸ್ ಮುಖಂಡ ಗುಜ್ಜಲ್ ನಾಗರಾಜ ಅವರ ಜನ್ಮದಿನದ ಅಂಗವಾಗಿ ಅವರ ಸಮ್ಮುಖದಲ್ಲೇ ಕರವೇ ಕಂಪ್ಲಿ ಕ್ಷೇತ್ರ ಹಾಗೂ ತಾಲೂಕು ಘಟಕ ನೇತೃತ್ವದಲ್ಲಿ ಪಟ್ಟಣದ ಅತಿಥಿ ಗೃಹದ ಆವರಣದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ, ಬಡ ಮಕ್ಕಳಿಗೆ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿ ವಿತರಿಸಲಾಯಿತು.  

ನಂತರ ಕರವೇ ಕ್ಷೇತ್ರ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ಹಲವು ವರ್ಷಗಳಿಂದ ಶಿಸ್ತಿನ ಸಿಪಾಯಿಯಂತೆ ಕಾಂಗ್ರೆಸ್ ಏಳಿಗೆಗೆ ಶ್ರಮಿಸುತ್ತಾ ಬಂದಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ತಾಲೂಕಿನ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ತಾಪಂ ಎ.ಪಿ.ಎಂ.ಸಿ ಸೇರಿದಂತೆ ಇತರೆ ಇಲಾಖೆಯಲ್ಲಿ ಕಾರ್ಯಕರ್ತರಿಗೆ ನಾಮ ನಿರ್ದೇಶಿಸಿತ ಸದಸ್ಯರನ್ನಾಗಿ ನೇಮಕ ಮಾಡಿ, ಒಳ್ಳೆಯ ಸ್ಥಾನಮಾನಗಳನ್ನು ಕಲ್ಪಿಸಿದ್ದಾರೆ ಗುಜ್ಜಲ್ ನಾಗರಾಜ ದೇವರು ಆಯಸ್ಸು, ಆರೋಗ್ಯ ಕಲ್ಪಿಸಲಿ ಎಂದರು ತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ ಮಾತನಾಡಿ, ಜನಪರ ಕಾರ್ಯಗಳೊಂದಿಗೆ ಗುಜ್ಜಲ್ ನಾಗರಾಜ ಅವರು ಕಂಪ್ಲಿ ಜನರ ಮನಸ್ಸಿನಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ. ಅವರ ಸೇವೆಗಳು ಯುವಕರಿಗೆ ಮಾರ್ಗದರ್ಶನವಾಗಿವೆ ಗುಜ್ಜಲ್ ನಾಗರಾಜ ದೇವರು ಆಯಸ್ಸು, ಆರೋಗ್ಯ ಕಲ್ಪಿಸುವ ಜತೆಗೆ ಕಾಂಗ್ರೆಸ್ ದೊಡ್ಡ ಮಟ್ಟದ ಉನ್ನತ ಸ್ಥಾನಸಿಗಲಿ ಎಂದರು.  

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವೀರಾಂಜನೇಯ, ಮೆಟ್ರಿ ಸೊಸೈಟಿ ಅಧ್ಯಕ್ಷ ಹೊಸಕೋಟೆ ಜಗದೀಶ, ಕರವೇ ತಾಲೂಕು ಉಪಾಧ್ಯಕ್ಷ ವಿ.ಬಿ.ನಾಗರಾಜ, ಮುಖಂಡರಾದ ಟಿ.ಹನುಮಂತಪ್ಪ, ಬಿ.ನಾರಾಯಣಪ್ಪ, ಹೊನ್ನಳ್ಳಿ ಗಂಗಾಧರ, ಕೆ.ಷಣ್ಮುಕಪ್ಪ, ಬಡಿಗೇರ್ ಜಿಲಾನ್‌ಸಾಬ್, ದೊಡ್ಡ ಯರಿ​‍್ರಸ್ವಾಮಿ, ಬಿ.ವಿ.ಗೌಡ, ಕಂಬಳಿ ರಾಮಕೃಷ್ಣ, ಬಳ್ಳಾಪುರ ಮೌನೇಶ, ಹೆಚ್‌.ಶ್ರೀನಿವಾಸ, ರಾಮಣ್ಣ, ಸುರೇಶ, ಪ್ರಶಾಂತ, ಮಹೇಶ, ರುದ್ರ​‍್ಪ, ಹೆಚ್‌.ಹುಲುಗಪ್ಪ, ಸೇರಿದಂತೆ ಇತರರು ಇದ್ದರು.