ದಿನಸಿ ಸಾಮಗ್ರಿಗಳ ಪೊಟ್ಟಣ ವಿತರಿಸಿದ ಸಚಿವ ವಿ.ಸೋಮಣ್ಣ

ಬೆಂಗಳೂರು, ಮಾ.  30,ಲಾಕ್‌ಡೌನ್‌ನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿರುವುದರಿಂದ ಆಹಾರದ  ಕೊರತೆಯಾಗದಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ವಸತಿ ಸಚಿವ ವಿ.ಸೋಮಣ್ಣ  ಕ್ಷೇತ್ರದ ಬಡಜನರಿಗೆ ಇಂದು ಉಚಿತ ದಿನಸಿ ಸಾಮಾಗ್ರಿ ವಿತರಿಸಿದರು.ವಿಜಯನಗರದ ಬಿಜಿಎಸ್  ಮೈದಾನದಲ್ಲಿ  ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳ ಜನತೆಗೆ ಸಾಮಾಜಿಕ ಅಂತರ  ಕಾಯ್ದುಕೊಂಡು ಅಕ್ಕಿ, ಗೋದಿ, ಎಣ್ಣೆ, ತೊಗರಿ ಬೇಳೆ ಸೇರಿದಂತೆ ಇತರೆ ದಿನಸಿ  ಸಾಮಾಗ್ರಿಗಳನ್ನೊಳಗೊಂಡ ಪೊಟ್ಟಣಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ  ವಿ.ಸೋಮಣ್ಣ, ಸುಮಾರು ಹತ್ತು ಸಾವಿರ ಬಡವರಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸುವ ಗುರಿ  ಹೊಂದಲಾಗಿದೆ. ಬಿ ಜಿ ಎಸ್ ಮೈದಾನದಲ್ಲಿ ಕೆಲವರಿಗೆ ಸಾಂಕೇತಿಕವಾಗಿ ದಿನಸಿ ವಿತರಣೆ  ಮಾಡಲಾಗಿದ್ದು, ಬಳಿಕ ಮನೆ ಮನೆ ತೆರಳಿ ದಿನಸಿ ಸಾಮಾಗ್ರಿಗಳ ವಿತರಿಸಲಾಗುವುದು ಎಂದರು.