ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿಗಳವರ ಜನ್ಮ ದಿನೋತ್ಸವ
ರನ್ನ ಬೆಳಗಲಿ: ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ದಂದು ಇತ್ತೀಚಿಗೆ ಜರುಗಿದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಧುರೈ ಬ್ರಹ್ಮವಿದ್ಯಾನಗರ ಸುಕ್ಷೇತ್ರದ ಶ್ರೀಮದ್ ಜಗದ್ಗುರು ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯಸಿಂಹಾಸನ ಭಗೀರಥ ಗುರುಪೀಠ ಮಹಾಸಂಸ್ಥಾನದ ಪರಮ್ ಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದಪುರಿ ಮಹಾ ಸ್ವಾಮೀಜಿಗಳವರ 56ನೇ ಜನ್ಮ ದಿನೋತ್ಸವ ಸಮಾರಂಭ ಪ್ರಯುಕ್ತ ಶಾಲೆಯ ವಿದ್ಯಾರ್ಥಿ ಸಮೂಹಕ್ಕೆ ಉಚಿತ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ಭಾಗವಹಿಸಿದ ಉಪ್ಪಾರ ಸಮಾಜದ ಯುವ ನೇತಾರರಾದ ರಾಘವೇಂದ್ರ ನೀಲಣ್ಣವರ ಯೋಗ ಶಿಕ್ಷಕರು ತಮ್ಮ ಗುರುಪೀಠ ದಿಂದ ಕೊಡ ಮಾಡಿದ ಶಾಲಾ ಬ್ಯಾಗ್ ಗಳನ್ನು ಶಾಲೆಯ ಎಲ್ಲ ಮಕ್ಕಳಿಗೆ ಉಚಿತವಾಗಿ ನೀಡುವುದರೊಂದಿಗೆ ಜಗತ್ತು ಜ್ಞಾನಕ್ಕೆ ತಲೆಬಾಗುತ್ತದೆ. ಎಲ್ಲ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಾಧನೆಗೈಲೆಂದು ಗುರುಗಳು ಆಶೀರ್ವಾದ ರೂಪದಲ್ಲಿ ಸ್ಕೂಲ್ ಬ್ಯಾಗ್ ನೀಡಿದ್ದಾರೆ ಎಂದು ತಿಳಿಸಿ, ಎಲ್ಲ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿ ಸ್ಕೂಲ್ ಬ್ಯಾಗ್ ವಿತರಣೆ ಮಾಡಿದರು.ಆರ್ ಡಿ ಬಂಡಿ ಶಿಕ್ಷಕಿಯರು ಅವರು ಶ್ರೀ ಭಗೀರಥ ಗುರುಪೀಠ ಪೂಜ್ಯರ ಕಾರ್ಯ ಅಮೋಘವಾಗಿದೆ. ತಮ್ಮ 56ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದುರ್ಗ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಸ್ಥರಗಳ ಶಾಲಾ ಸುಮಾರು 56000 ಕಿಂತಲು ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಉಚಿತವಾಗಿ ನೀಡುವುದರೊಂದಿಗೆ ನಮ್ಮ ಶಾಲಾ ಮಕ್ಕಳಿಗೂ ಸಹ ಉಚಿತವಾಗಿ ಸ್ಕೂಲ್ ಬ್ಯಾಗ್ ನೀಡಿದ್ದು ಸಂತಸ ತಂದಿದೆ. ಅನೇಕ ಮಠಮಾನ್ಯಗಳ ಮಧ್ಯೆ ಶ್ರೀ ಭಗಿರಥ ಪೀಠವು ಮಾದರಿಯಾಗಿದೆ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯರಾದ ಎಸ್ ಎಲ್ ಕಠಾರೆ, ಶಾಲಾ ಸಿಬ್ಬಂದಿಗಳಾದ ಎಸ್. ಪಿ. ಜೋಶಿ, ಎಸ್. ಹೆಚ್. ಮಾದರ, ಎಚ್ ಬಿ ಜಮಾದಾರ, ಕುಮಾರಿ ರೂಪಾ ದಂಡಿನ,ಶೋಭಾ ವೀರಘಂಟಿ, ಭಾರತಿ ಮಳ್ಳಿಗೇರಿ, ಕಾಳಮ್ಮ ಬಡಿಗೇರ ಹಾಗೂ ಪ್ರಶಿಕ್ಷಣಾರ್ಥಿಗಳಾದ ಸಾಕ್ಷಿ ಹೊಸಪೇಟೆ, ಲಕ್ಕವ್ವ ತರಗೊಲ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.