ಜಿಲ್ಲಾಡಳಿತದಿಂದ ಮಾಧ್ಯಮ ಪ್ರತಿನಿಧಿಗಳಿಗೆ ಆಹಾರ ಕಿಟ್ ವಿತರಣೆ

ಕಲಬುರಗಿ,  ಮೇ 12,ಜಿಲ್ಲಾಡಳಿತದ ಕೋವಿಡ್-19 ಆಹಾರ ಸಮಿತಿ ವತಿಯಿಂದ ಕಲಬುರಗಿ  ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು/ಪತ್ರಕರ್ತರಿಗೆ ಜಿಲ್ಲಾಧಿಕಾರಿ ಶರತ್.ಬಿ  ಮಂಗಳವಾರ ಆಹಾರ ಕಿಟ್ ಗಳನ್ನು ವಿತರಿಸಿದರು.ಒಟ್ಟು  350 ಕಿಟ್ ಗಳನ್ನು ವಿತರಿಸಲಾಗುತ್ತಿದ್ದು, 10 ಕೆಜಿ ಅಕ್ಕಿ, ಎರಡೂವರೆ ಕೆಜಿ ಗೋಧಿ, 1  ಕೆಜಿ ಬೇಳೆ,1 ಲೀಟರ್ ಎಣ್ಣೆ, ಉಪ್ಪು, ಖಾರ, ಅರಿಶಿಣ, ದನಿಯಾ ಪೌಡರ್, ಬಟ್ಟೆ ಸೋಪು, ಮೈ  ಸೋಪು ಮುಂತಾದ ಆಹಾರ ಸಾಮಾಗ್ರಿಗಳು ಈ ಕಿಟ್‌ನಲ್ಲಿವೆ.ಈ ಸಂದರ್ಭದಲ್ಲಿ ಆಹಾರ  ಸಮಿತಿ ಅಧ್ಯಕ್ಷ  ಎಚ್ ಕೆ ಆರ್ ಡಿ ಬಿ ಜಂಟಿ ನಿರ್ದೇಶಕ ಪ್ರವೀಣ್ ಪ್ರಿಯಾ  ಡೇವಿಡ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರ ಪ್ಪ.  ಜಿ.ಬಿ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ದೀಪಕ್, ಕಲಬುರಗಿ ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್, ವೇದಾ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಡಾ.  ರವಿ ಎಸ್. ಮಾಲಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.