ಲೋಕದರ್ಶನ ವರದಿ
ಕೊಪ್ಪಳ 06: ನಗರದ ಕಿನ್ನಾಳ ರಸ್ತೆಯ ವಿಜಯನಗರ ಬಡಾವಣೆಯಲ್ಲಿ ಸೈಯದ್ ಫೌಂಡೇಶನ್ ಚಾರಿಟೇಬಲ್ ಅಧ್ಯಕ್ಷ ಕೆ.ಎಂ.ಸೈಯದ್ ಅವರು ಬಡ ಕೂಲಿಕಾರರ ಕುಟುಂಬಗಳಿಗೆ ದಿನಬಳಕೆಯ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ದೇಶದಲ್ಲಿ ಕೊರೊನಾ ವೈರಸ್ ಹರಡದಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಲಾಕ್ ಡೌನ್ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ತೀವ್ರ ಸಂಕಷ್ಟದಲ್ಲಿರುವ ಬಡ ಕೂಲಿಕಾರರಿಗೆ ಉದ್ಯೋಗವಿಲ್ಲದೇ ಇರುವ ಬಡ ಕುಟುಂಬಗಳಿಗೆ ಫೌಂಡೇಶನ್ನಿಂದ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಖಾಜಾವಲಿ ಬನ್ನಿಕೊಪ್ಪ, ಯುವ ಮುಖಂಡರಾದ ಸಲೀಂ ಅಳವಂಡಿ, ಎಫ್.ಎ.ನೂರಭಾಷ,ಜಾಫರ ಸಾದೀಕ, ಆಸ್ಫಾಕ್ ಗದಗ, ಅನ್ವರಪಾಶಾ, ಕುಮಾರ ಜೆಪಿ ಮಾಕರ್ೇಟ್, ಇಬ್ರಾಹಿಂ, ಜಾವೀದ್ ಮಂಗಳಾಪುರು, ಅಜೀಮ್ ಅತ್ತಾರ್, ಅನ್ವರ್ ಬಾಷ ಮುದಗಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.