ಚಿಕ್ಕೋಡಿ: ಶಾಲಾ ಪ್ರಾರಂಭೋತ್ಸವದ ದಿನದಂದೇ ಮಕ್ಕಳಿಗೆ ವಿತರಣೆ

ಲೋಕದರ್ಶನ ವರದಿ

ಮಾಂಜರಿ 25: ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯಗಳ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸಲ್ಲಿಸಿದ ಪಠ್ಯಪುಸ್ತಕಗಳ ಬೇಡಿಕೆಯ ಶೇ.80.03 ರಷ್ಟು ಸರಬರಾಜು ಆಗಿದ್ದು, ಇಲಾಖೆಯು ಶಾಲಾ ಪ್ರಾರಂಭೋತ್ಸವದ ದಿನವೇ ಮಕ್ಕಳಿಗೆ ಪಠ್ಯಪುಸ್ತಕಗಳ ವಿತರಣೆಗೆ ವ್ಯವಸ್ಥೆ ಮಾಡಿಕೊಂಡಿದೆ.  

ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಇದೇ 29 ರಂದು ಆರಂಭಗೊಳ್ಳಲಿದೆ. ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಂದ ಎಸ್ಎಟಿಎಸ್ (ಸ್ಟುಡೆಂಟ್ ಅಟೆಂಡೆನ್ಸ್ ಸೀಟ್)ಅನ್ವಯ ಬೇಡಿಕೆ ಸಲ್ಲಿಸಲಾದ ಪ್ರಮಾಣದಲ್ಲಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದ್ದು, ಇನ್ನು ಕೇವಲ ಶೇ.20 ರಷ್ಟು ಪಠ್ಯ ಪುಸ್ತಕಗಳ ಸರಬರಾಜು ಆಗಬೇಕಾಗಿದೆ.  

ಆಯಾ ವಲಯಗಳಿಗೆ ಪಠ್ಯಪುಸ್ತಕ ಪೂರೈಕೆ: 

ಅಥಣಿ ವಲಯದಿಂದ 5,21,384 ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿದ್ದು, 4,38,718 ಪುಸ್ತಕಗಳು ಸರಬರಾಜು ಆಗಿವೆ.ಚಿಕ್ಕೋಡಿ ವಲಯದಿಂದ 4,01,820 ಪಠ್ಯ ಪುಸ್ತಕಗಳ ಬೇಡಿಕೆ ಪೈಕಿ 3,54,661 ಸರಬರಾಜು ಆಗಿವೆ. ಗೋಕಾಕ ವಲಯದಿಂದ ಸಲ್ಲಿಸಲಾದ 3,78,661 ಪಠ್ಯಪುಸ್ತಕಗಳ ಬೇಡಿಕೆ ಪೈಕಿ 3,22,357 ಪುಸ್ತಕಗಳು ಸರಬರಾಜು ಆಗಿವೆ. ಹುಕ್ಕೇರಿ ವಲಯದಲ್ಲಿ ಸಲ್ಲಿಸಲಾದ 4,98,661 ಬೇಡಿಕೆ ಪೈಕಿ 4,37,249 ಪುಸ್ತಕಗಳು ಸರಬರಾಜು ಆಗಿವೆ. ಕಾಗವಾಡ ವಲಯದಲ್ಲಿ 1,77,705 ಪಠ್ಯಪುಸ್ತಕಗಳ ಬೇಡಿಕೆ ಪೈಕಿ 1,44,014 ಪುಸ್ತಕಗಳು ಸರಬರಾಜು ಆಗಿವೆ. ಮೂಡಲಗಿ ವಲಯದಿಂದ 5,39,489 ಪಠ್ಯಪುಸ್ತಕಗಳ ಬೇಡಿಕೆ ಪೈಕಿ 4,81,808 ಪಠ್ಯಪುಸ್ತಕಗಳು ಸರಬರಾಜು ಆಗಿವೆ. ನಿಪ್ಪಾಣಿ ವಲಯದಿಂದ 3,20,370 ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿದ್ದು, 2,43,907 ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ರಾಯಬಾಗ ವಲಯದಿಂದ 5,45,622 ಪಠ್ಯಪುಸ್ತಕಗಳ ಬೇಡಿಕೆ ಪೈಕಿ 4,78,809 ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಎಂಟೂ ವಲಯಗಳಿಂದ ಸಲ್ಲಿಸಲಾದ ಒಟ್ಟಾರೆ 33,83,712 ಪಠ್ಯಪುಸ್ತಕಗಳ ಪೈಕಿ 29,01,523 ಪಠ್ಯಪುಸ್ತಕಗಳು ಸರಬರಾಜು ಆಗಿದ್ದು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 27,07,845 ಪಠ್ಯ ಪುಸ್ತಕಗಳನ್ನು ಒದಗಿಸಲಾಗಿದೆ. ಸರಾಸರಿ 80.03 ರಷ್ಟು ಪಠ್ಯಪುಸ್ತಕಗಳು ಸರಬರಾಜು ಆಗಿವೆ. 

ಶಾಲಾ ಪ್ರಾರಂಭೋತ್ಸವದಂದೇ ಪುಸ್ತಕಗಳ ವಿತರಣೆ: 

ರಜೆಯ ಮಜೆ ಕಳೆದು ಮರಳಿ ಶಾಲೆಗೆ ತೆರಳಲು ಮಕ್ಕಳು ಸಜ್ಜಾಗುತ್ತಿದ್ದಾರೆ. ಅದರಂತೆ ಶಿಕ್ಷಣ ಇಲಾಖೆಯೂ ಶಾಲೆ ಪ್ರಾರಂಭೋತ್ಸವದ ದಿನದಂದೇ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವ ನಿಟ್ಟಿನಲ್ಲಿ ಆಯಾ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡುತ್ತಿದೆ.  

ಪ್ರತಿ ವರ್ಷ ಶಾಲೆ ತರಗತಿಗಳು ಆರಂಭಗೊಂಡು ಮೂನರ್ಾಲ್ಕು ತಿಂಗಳು ಕಳೆದರೂ ಮಕ್ಕಳಿಗೆ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಲಭಿಸುತ್ತಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಶಾಲೆ ಪ್ರಾರಂಭಕ್ಕೂ ಮುನ್ನವೇ ಆಯಾ ವಲಯಗಳ ಮೂಲಕ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗುತ್ತಿದೆ.  

'ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ 29 ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದೆ. ಅಂದು ಶಾಲಾ ಬಂಡಿ ಏರ್ಪಡಿಸಿ ಆಯಾ ಗ್ರಾಮಗಳಲ್ಲಿ ಶಾಲಾ ಬಂಡಿ ಸಂಚರಿಸಲಿದ್ದು, ಮಕ್ಕಳಿಗೆ ಸಿಹಿ ಊಟ ನೀಡಲಾಗುವುದು. ಸ್ಥಳೀಯ ಜನಪ್ರತಿನಿಧಿಗಳಿಂದ ಮಕ್ಕಳಿಗೆ ಪಠ್ಯಪುಸ್ತಕ ಮತ್ತಿತರ ಸಕರ್ಾರದ ಸವಲತ್ತುಗಳನ್ನು ವಿತರಿಸಲಾಗುವುದು. ಒಂದು ವಾರದಲ್ಲಿ ಸಮವಸ್ತ್ರಗಳೂ ಪೂರೈಕೆಯಾಗಲಿವೆ. ಅವುಗಳನ್ನೂ ಮಕ್ಕಳಿಗೆ ವಿತರಿಸಲಾಗುವುದು. ಈಗಾಗಲೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ.80.03 ರಷ್ಟು ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳಿಗೆ ತಲುಪಿಸಲಾಗಿದೆ. ಹಂತ ಹಂತವಾಗಿ ಪಠ್ಯಪುಸ್ತಕಗಳ ಸರಬರಾಜು ಆಗುತ್ತಿವೆ. ಶೀಘ್ರದಲ್ಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸುವ ವ್ಯವಸ್ಥೆ ಆಗಲಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಎಂ.ಜಿ.ದಾಸರ ತಿಳಿ.