ಮೇಕಲಮರಡಿ ಗ್ರಾಮದ ಹಿರಿಯ ಸದಸ್ಯರಿಗೆ ವಾತ್ಸಲ್ಯ ಕಿಟ್ ವಿತರಣೆ

Distribution of Vatsalya Kit to senior members of Mekalamaradi village

ನೇಸರಗಿ 28: ಬೈಲಹೊಂಗಲ ವಲಯದ ಸಮೀಪದ   ಮೇಕಲಮರಡಿ ಗ್ರಾಮದ ಕಾರ್ಯಕ್ಷೇತ್ರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ  ಮಾಶಾಸನ ಸದಸ್ಯರಾದ ದೊಡ್ಡವ್ವ ಗೋರನ್ನವರ, ಜಾನಮ್ಮ ಕಡಚಿ  ಇವರಿಗೆ  ಡಾ.  ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ  ಮಾತೃಶ್ರೀ ಹೇಮಾವತಿ  ಅಮ್ಮನವರು ಕಳಿಸಿ ಕೊಟ್ಟಿರುವ ವಾತ್ಸಲ್ಯ ಕಿಟ್  ವಿತರಣೆಯನ್ನು ಮಾಜಿ  ಜಿಲ್ಲಾ ಪಂಚಾಯತ   ಸದಸ್ಯರಾದ ನಿಂಗಪ್ಪ ಅರಿಕೇರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಖಾಸಿಂ ಜಮಾದಾರ ಹಾಗೂ ಗ್ರಾಮದ ಹಿರಿಯರು ಸಮ್ಮುಖದಲ್ಲಿ    ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೈಲಾ ಸೇವಾ ಪ್ರತಿನಿಧಿ  ಶೀಲಾ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿಗಳು, ಗ್ರಾಮದ ಸಂಘದ ಸದಸ್ಯರು ಉಪಸ್ಥಿತರಿದ್ದರು.