ದಿವ್ಯಾಂಗರಿಗೆ ಶಾಸಕರಿಂದ ತಿಚಕ್ರ ವಾಹನಗಳ ವಿತರಣೆ

ಕಲಬುರಗಿ,  ಮೇ 12,ಕಲಬುರಗಿ ಮಹಾನಗರ ಪಾಲಿಕೆಯ 2011-12 ರಿಂದ 2014-15ನೇ ಸಾಲಿನ  ವರೆಗಿನ ಎಸ್.ಎಫ್.ಸಿ., ಪಾಲಿಕೆ ನಿಧಿ ಹಾಗೂ ಉಳಿತಾಯ ಅನುದಾನದಡಿ ಕಲಬುರಗಿ ದಕ್ಷಿಣ  ವಿಧಾನಸಭಾ ಕ್ಷೇತ್ರದ  ಅರ್ಹ 46 ಜನ ವಿಶಿಷ್ಟ ಚೇತನರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ಸಿ.  ರೇವೂರ ಅವರು ತ್ರಿಚಕ್ರ ವಾಹನಗಳನ್ನು ಮಂಗಳವಾರ ವಿತರಿಸಿದರು. ನಗರದ ಜೇವರ್ಗಿ ರಸ್ತೆಯ ಮುಕ್ತಾ ಟಾಕೀಸ್ ಬಳಿಯ ವೆಂಕಟೇಶ್ವರ ಅಟೋಮೋಟಿಸ್ ಶೋರಂ ಅಂಗಡಿಯಲ್ಲಿ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಈ  ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ, ಉಪ  ಆಯುಕ್ತ (ಆಡಳಿತ) ಎಂ.ಡಿ. ಸಾದಾತ್ ಹುಸೇನ್,  ಪರಿಸರ ಅಭಿಯಂತರ ಮುನಾಫ್ ಪಟೇಲ್, ಶೋರೂಂ  ವ್ಯವಸ್ಥಾಪಕ ಹೃಷಿಕೇಶ ದೇಶಪಾಂಡೆ ಸೇರಿ ಮಹಾನಗರ ಪಾಲಿಕೆಯ ಅಧಿಕಾರಿ ಸಿಬ್ಬಂದಿಗಳು  ಉಪಸ್ಥಿತರಿದ್ದರು.