ಲೋಕದರ್ಶನ ವರದಿ
ಗದಗ 12: ತಾಲ್ಲೂಕಿನ ಬೆಳದಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ನೆರೆ ಸಂತ್ರಸ್ತರಿಗಾಗಿ 2000 ಕ್ಕೂ ಹೆಚ್ಚು ಜೋಳದ ರೊಟ್ಟಿ ,ಶೇಂಗಾ ಚಟ್ನಿ ಹಾಗೂ ಹಳೆಯ ವಿದ್ಯಾಥರ್ಿಗಳು ನೀಡಿದ ಬಿಸ್ಕೆಟ್ ಬಾಕ್ಸ್ ಗಳನ್ನು ತೋಂಟದಾರ್ಯ ಮಠದಲ್ಲಿ ಆಶ್ರಯ ಪಡೆದ ಸಂತ್ರಸ್ತರಿಗೆ ತಲುಪಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ವರ್ಗ, ವಿದ್ಯಾಥರ್ಿಗಳು ಹಾಗೂ ಬೆಳದಡಿ ಗ್ರಾಮಸ್ಥರು ಉಪಸ್ಥಿತರಿದ್ದರು.