ವಿಕಲಚೇತನರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಲೋಕದರ್ಶನವರದಿ

ರಾಣೇಬೆನ್ನೂರು: ಜೂ.5:  ಸಮಾಜದಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಹೇಗಿದೆಯೋ ಹಾಗೆಯೇ ವಿಕಲಚೇತನರು ಸಹ ಸಮಾನತೆಯಿಂದ ಬದುಕನ್ನು ಸಾಗಿಸಲು ಹಕ್ಕನ್ನು ಹೊಂದಿದ್ದಾರೆ.  ಅಂತಹವರಿಗೆ ಕೇವಲ ಅನುಕಂಪ ಮಾತ್ರ ನೀಡಿದರೆ ಸಾಲದು. ಅವರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಿದಾಗ ಮಾತ್ರ ಅವರೂ ಇತರರಂತೆ ಬಾಳಿ ಬದುಕಲು ಸಾಧ್ಯವಾಗಲಿದೆ ಎಂದು ಕರೂರು ಜಿಲ್ಲಾ ಪಂಚಾಯತ್ ಸದಸ್ಯೆ ಮಂಗಳಗೌರಿ ಅರುಣಕುಮಾರ ಪೂಜಾರ ಹೇಳಿದರು.

ಅವರು ಗುರುವಾರ ಇಲ್ಲಿನ ವಿನಾಯಕ ನಗರದ ಶಾಸಕರ ಗೃಹಸಭಾದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ  ಪಂಚಾಯ್ತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲಾ ವಿಕಲಚೇತನರಿಗೆ ಕೇಂದ್ರ ಸಕರ್ಾರ  ಕೊಡಮಾಡುವ ಜೀವನಾವಶ್ಯಕ ದವಸ ಧಾನ್ಯಗಳ ಕಿಟ್ಗಳನ್ನು ವಿತರಿಸಿ ಮಾತನಾಡಿದರು. 

ಕೊರೋನಾ ವೈರಸ್ ಹಾವಳಿಯಿಂದ ಜನಸಾಮಾನ್ಯರೂ ಬಡವರು ದೀನದಲಿತರು ಕಾಮರ್ಿಕರು, ಕೂಲಿಕಾಮರ್ಿಕರು ಸೇರಿದಂತೆ ವಿಕಲಚೇತನರೂ ಸಹ ತಮ್ಮ ಬದುಕನ್ನು ಸಾಗಿಸಲು ಅನೇಕ ರೀತಿಯಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದ ಅವರು ವಿಕಲಚೇತನರು ಸ್ವಾಭಿಮಾನಿಗಳು ಯಾರನ್ನು ಕೈಒಡ್ಡಿ  ಬೇಡುವವರಲ್ಲ.  ಅಂತಹವರನ್ನು ಗುರುತಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಸಭಾ ಸದಸ್ಯೆ ಪ್ರಭಾವತಿ ತಿಳವಳ್ಳಿ, ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ, ಗಣೇಶ ನಂದಿಗಾವಿ, ತಿಪ್ಪೇಶ ಗಾಡಿ, ಮಂಜುನಾಥ್ ಚಲವಾದಿ, ಕೊಟ್ರೇಶ ಹಡಪದ,  ಬಸವರಾಜ ಉಕ್ಕುಂದ, ಶಿವಪುತ್ರಪ್ಪ ಮುದೇನೂರ, ಪ್ರವೀಣ ಯಳವತ್ತಿ ,ಚಂದ್ರಶೇಖರ ಪುರದ ಸೇರಿದಂತೆ ಮತ್ತಿತರ ಮುಖಂಡರು ನೂರಾರು ವಿಕಲಚೇತನರು ಪಾಲ್ಗೊಂಡಿದ್ದರು.