ಹೃದಯ ಶಸ್ತ್ರ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ

ಕಾಗವಾಡ 28:  ಉಗಾರ ಬುದ್ರುಕ ಗ್ರಾಮದ ವಸ್ತಲಾ ಸೀತಾರಾಮ ಶಿಂದೆ ಇವರ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರುಗೊಂಡ ಚೇಕ್,ಕಾಗವಾಡ ಶಾಸಕ ಶ್ರೀಮಂತ ಪಾಟೀಲ ವಿತರಿಸಿದರು.

ಕಾಗವಾಡದ ಶಾಸಕರ ಕಚೇರಿಯಲ್ಲಿ ಚೆಕ್ ವಿತರಣೆ ಕಾರ್ಯಕ್ರಮ ನೆರವೇರಿತು. ವಸ್ತಲಾ ಶಿಂದೆ ಇವರ ತಾತ್ಕಾಲಿಕ ಹೃದಯ ಶಸ್ತ್ರಿಕ್ರೀಯೆ ಮಾಡುವ ಸಮಸ್ಯೆ ಬಂದಿದ್ದರಿಂದ ಚಿಕಿತ್ಸೆ ಮಾಡಿಕೊಂಡು, ಗುಣಮುಖವಾಗಿದ್ದಾರೆ. ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯಧನ ನೀಡಲಾಗಿದೆ.

ಈ ವೇಳೆ ಕಾಗವಾಡ ತಹಸೀಲ್ದಾರ ಪರಿಮಳಾ ದೇಶಪಾಂಡೆ, ಕಂದಾಯ ನೀರಿಕ್ಷಕ ಬಸವರಾಜ ಬೋರಗಲ, ಕಾಂಗ್ರೆಸ್ ಮದಭಾವಿ ಬ್ಲಾಕ್ ಅಧ್ಯಕ್ಷ ಮಹಾದೇವ ಕೋರೆ, ಜಿಪಂ ಸದಸ್ಯ ಆರ್.ಎಂ.ಪಾಟೀಲ, ದಾದಾ ಪಾಟೀಲ, ರಾಮ ಸಡ್ಡಿ, ಸೇರಿದಂತೆ ಅನೇಕರು ಇದ್ದರು.