ಬಾಗಲಕೋಟ೧೨: ನಗರದ ವಿದ್ಯಾಗಿರಿಯ ಕೇರ್ ಫೌಂಡೇಶನ್ ಟ್ರಸ್ಟನ ಸದಸ್ಯರು ಮತ್ತು ಬಾಗಲಕೋಟ ವಿಕಾಸ ಪತ್ತಿನ ಸಹಕಾರಿ ಸಂಘ ವಿದ್ಯಾಗಿರಿ ಆಡಳಿತ ಮಂಡಳಿ ಸದಸ್ಯರು ಜಂಟಿಯಾಗಿ ನೆರೆ ಹಾವಳಿಯಿಂದ ಬಾಧಿತರಾದ ಕಮತಗಿ, ಐಹೊಳೆ, ನಿಂಬಲಗುಂದಿ, ಕಾಟಾಪೂರ, ಪಟ್ಟದಕಲ್, ಸಿದ್ದನಕೊಳ್ಳದಲ್ಲಿ ಆಶ್ರಯ ಕಲ್ಪಿಸಿರುವ ಸಂತ್ರಸ್ತರಿಗೆ 6000 ಜೋಳದ ರೊಟ್ಟಿ, ಶೇಂಗಾ ಚಟ್ನಿ, ಔಷಧಿ, ಬಟ್ಟೆ ಕುಡಿಯುವ ನೀರಿನ 10 ಬ್ಯಾಗಗಳನ್ನು ಹುನಗುಂದ ತಹಶೀಲದಾರ ಸುಭಾಸ ಎಸ್. ಸಂಪಗಾವಿ ಇವರ ಮಾರ್ಗದರ್ಶನದಲ್ಲಿ ವಿತರಣೆ ಮಾಡಿ ಅವರಿಗೆ ಆತ್ಮಸ್ಥೈರ್ಯ ಹೇಳಿದರು.
ಬವಿವ ಸಂಘದ ಸದಸ್ಯರಾದ ಬಸವರಾಜ ಹಿರೇಮಠ (ಚಿತ್ತರಗಿ), ಬಾಗಲಕೋಟ ವಿಕಾಸ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಕೆ. ಪಾಟೀಲ, ಉಪಾಧ್ಯಕ್ಷ ಆರ್.ಎನ್. ಕಂಕಾಳೆ ಮತ್ತು ನಿದರ್ೇಶಕರು ಹಾಗೂ ಕೇರ್ ಫೌಂಡೇಶನ್ ಟ್ರಸ್ಟನ ಸದಸ್ಯರಾದ ಈಶ್ವರ ಎಸ್. ಕೋನಪ್ಪನವರ, ಆನಂದ ಪವಾರ, ಶಂಕ್ರಪ್ಪ ವಿಜಾಪೂರ, ಪ್ರಭು ವೈಜಾಪೂರ ಮುಂತಾದವರು ನೇತೃತ್ವ ವಹಿಸಿದ್ದರು.