ಕೊಪ್ಪಳ 27: ಶಿಕ್ಷಣಕ್ಕಾಗಿ ಅನುಕೂಲವಾಗಲು ವಿಕಲಚೇತನ ಮಕ್ಕಳಿಗೆ ಕಿಟ್ ವಿತರಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಬೆಂಗಳೂರು, ರಾಜ್ಯ ಆಯುಕ್ತರಾದ ವಿ.ಎಸ್. ಬಸವರಾಜು ಅವರು ಸೂಚನೆ ನೀಡಿದರು.
ಅಧಿನಿಯಮ 2016ರ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಆಯೋಜಿಸಲಾದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ವಿಕಲಚೇತನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಸಕರ್ಾರಗಳು ಅವರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಒಂದು ಪಾಕರ್್ ಮತ್ತು ಒಂದು ಆಟದ ಮೈದಾನವನ್ನು ಸ್ಥಾಪಿಸಲು ಸೂಕ್ತ ಕ್ರಮ ವಹಿಸಬೇಕು. ಅಲ್ಲದೇ ತಮ್ಮಿಂದ ಅಂಗವಿಕಲರಿಗೆ ನೀಡುವ ಪ್ರೋತ್ಸಾಹಧನ ಹಾಗೂ ವಿವಿಧ ಯೋಜನೆಗಳ ಸೌಲಭ್ಯವನ್ನು ಸಮರ್ಪಕವಾಗಿ ನೀಡಬೇಕು. ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆಯಿಂದ ವಿಕಲಚೇತನ ವಿದ್ಯಾಥರ್ಿಗಳಿಗೆ 1ನೇ ತರಗತಿಯಿಂದ ಉತ್ತಮ ವ್ಯಾಸಂಗದವರೆಗೂ ತರಗತಿಗನುಗುಣವಾಗಿ ವಿದ್ಯಾಥರ್ಿ ವೇತನವನ್ನು ನೀಡಬೇಕು. ವಿಕಲಚೇತನರಿಗೆ ಸಾಧನ ಸಲಕರಣೆಗಳಾದ ತ್ರಿಚಕ್ರ ಸೈಕಲ್, ಕ್ರಚ್ಚಸ್ಸ್, ವಾಟರ್ ಬೆಡ್, ಅಂಧರ ಕೇನ್, ಬ್ರೈಲ್ವಾಚ್, ರೂಲೆಟರ್, ಶ್ರವಣಸಾಧನ, ಸ್ಟಿಕ್, ವ್ಹೀಲ್ಚೇರ್, ಬುದ್ಧಿಮಾಂದ್ಯ ಮಕ್ಕಳಿಗೆ ಎಂ.ಆರ್. ಕಿಟ್ ಹಾಗೂ ಇನ್ನಿತರ ಸಾಧನ ಸಲಕರಣೆಗಳನ್ನು ನೀಡಬೇಕು. ಎಸ್.ಎಸ್.ಎಲ್.ಸಿ ನಂತರ ಅಂಧ ವಿದ್ಯಾಥರ್ಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ನೀಡಬೇಕು. ಸಕರ್ಾರದ ವಿವಿಧ ಸೌಲಭ್ಯಗಳ ಮಾಹಿತಿಯನ್ನು ವಿಕಲಚೇತನರಿಗೆ ತಲುಪಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ ಎಮ್.ಆರ್.ಡಬ್ಲ್ಯೂ, ನಗರ ಪ್ರದೇಶಗಳಿಗೆ ಯು.ಆರ್.ಡಬ್ಲ್ಯೂ ಹಾಗೂ ಗ್ರಾಮ ಪಂಚಾಯತ್ಗಳಿಗೆ ವಿ.ಆರ್.ಡಬ್ಲ್ಯೂ. ಕಾರ್ಯಕರ್ತರನ್ನು ನೇಮಕ ಮಾಡಬೇಕು. ವಿಕಲಚೇತನರ ಪಾಲಕ ಪೋಷಕರ ಮತ್ತು ಸಮುದಾಯಕ್ಕೆ ವಿಕಲಚೇತನರಿಗೆ ಇರುವ ಸಕರ್ಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕು. ನಿರುದ್ಯೋಗಿ ವಿಕಲಚೇತನರಿಗೆ ಸ್ವಯಂ ಉದ್ಯೋಕ್ಕಾಗಿ ಸಾಲ ಸೌಲಭ್ಯವನ್ನು ಕಲ್ಪಿಸಬೇಕು. ವಿಕಲಚೇತನರು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಕ್ರಮ ಕೈಗೊಳ್ಳಬೇಕು. ಶಿಶುಕೇಂದ್ರೀಕೃತ ಯೋಜನೆಯಡಿ ಅಂಧ, ಶ್ರವಣನ್ಯೂನತೆ ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ವಸತಿಯುತ ವಿಶೇಷ ಶಿಕ್ಷಣವನ್ನು ಒದಗಿಸಬೇಕು. ಅಂಗವಿಕಲರ ವ್ಯಕ್ತಿಗಳ ಅಧಿನಿಯಮ 2016ರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮ ಕೈಗೊಂಡು ಜನರಿಗೆ ತರಬೇತಿ ನೀಡಬೇಕು. ಇಲ್ಲಿಯವರೆಗೆ ಎಷ್ಟು ಅಂಗವಿಕಲರಿಗೆ ಯು.ಡಿ.ಐ.ಡಿ. ಕಾಡರ್್ಗಳನ್ನು ವಿತರಿಸಲಾಗಿದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಬೆಂಗಳೂರು, ರಾಜ್ಯ ಆಯುಕ್ತರಾದ ವಿ.ಎಸ್. ಬಸವರಾಜು ಅವರು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ರವರು ಮಾತನಾಡಿ, ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಕರ್ಾರಗಳು ನೀಡುವ ಅನುದಾನವನ್ನು ಕೇವಲ ಯಂತ್ರ ಚಾಲಿತ ತ್ರೀಚಕ್ರ ವಾಹನಗಳನ್ನು ನೀಡಲು ಸಿಮಿತವಾಗಿದಂತಾಗಿದೆ. ಈ ಅನುದಾನದಲ್ಲಿ ಶೇ.50 ರಷ್ಟು ಅನುದಾನವನ್ನು ಕಡಿತಗೊಳಿಸಿ ಅಂಗವಿಕಲರ ಶಿಕ್ಷಣ, ಸ್ವ-ಉದ್ಯೋಗಕ್ಕಾಗಿ ಮತ್ತು ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆ ಮಾಡುವಂತೆ ಎಲ್ಲಾ ಇಲಾಖೆಗಳಿಗೆ ಹಾಗೂ ಸಂಬಂಧಿಸಿದ ನಗರ ಸ್ಥಳೀಯ ಮತ್ತು ಗ್ರಾಮೀಣ ಸಂಸ್ಥೆಗಳಿಗೆ ಸೂಚನೆ ನೀಡಲಾಗುವುದು. ಅಲ್ಲದೇ ಸಚಿವರ, ಶಾಸಕರ, ಸಂಸದರ, ವಿಧಾನ ಪರಿಷತ್ ಸದಸ್ಯರುಗಳ ಮತ್ತು ಇತರೆ ಅನುದಾನದಲ್ಲಿಯೂ ಸಹ ತ್ರೀಚಕ್ರ ವಾಹನಗಳನ್ನು ವಿತರಿಸಲಾಗುತ್ತದೆ. ಈ ಅನುದಾನದ ಅರ್ಧ ಭಾಗವನ್ನು ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆಯಾಗುವಂತೆ ಕ್ರಮ ವಹಿಸಲಾಗುವುದು ಎಂದರು.
ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಮಾತನಾಡಿ, 2017-18ನೇ ಸಾಲಿನಲ್ಲಿ ಅರಿವಿನ ಸಿಂಚನ ಕಾರ್ಯಕ್ರಮದ ಮೂಲಕ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ವಿಕಲಚೇತನರ ಪಾಲಕರ ಮತ್ತು ಪೋಷಕರಿಗೆ ವಿಕಲಚೇತನರ ವ್ಯಕ್ತಿಗಳ ಅಧಿನಿಯಮ 2016ರ ಕುರಿತು ಹಾಗೂ ಸಕರ್ಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕ ಮಟ್ಟದ ಅಧಿಕಾರಿಗಳಿಗೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಬಗ್ಗೆ ಹಾಗೂ ವಿಕಲಚೇತನರಿಗೆ ಸಕರ್ಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ 1 ದಿನದ ಕಾಯಾಗಾರ ಹಮ್ಮಿಕೊಂಡು 2016ರ ಅಧಿನಿಯಮದ ಬಗ್ಗೆ ಹಾಗೂ ವಿಕಲಚೇತನರಿಗೆ ವಿವಿಧ ಇಲಾಖೆಗಳಲ್ಲಿ ಇರುವ ಯೋಜನೆಗಳ ಕುರಿತು ಅರಿವು ಮೂಡಿಸಲಾಗಿದೆ. ಜಿಲ್ಲೆಯಲ್ಲಿ ಯು.ಡಿ.ಐ.ಡಿ. ಕಾಡರ್್ಗಳನ್ನು ಆನ್ಲೈನ್ನಲ್ಲಿ ವಿತರಿಸಲಾಗಿದೆ. ಇಲ್ಲಿಯವರೆಗೆ 2030 ಜನ ಅಂಗವಿಕಲರು ಯು.ಡಿ.ಐ.ಡಿ. ಕಾಡರ್್ಗಳನ್ನು ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಸಹಾಯಕ ಆಯುಕ್ತರಾದ ಎಸ್.ಕೆ. ಪದ್ಮನಾಭವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ಈರಣ್ಣ ಪಂಚಾಳ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.