ಕಲಬುರಗಿ, ಜೂ.5,ಯಾರು ಸನ್ಯಾಸಿಗಳಲ್ಲ. ಸಚಿವ ಸ್ಥಾನ ಕೇಳುವುದು ಸಹಜ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.ಕಲಬುರಗಿಯ ಹೊನ್ನಕಿರಣಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಶಾಸಕರ ಪ್ರತ್ಯೇಕ ಸಭೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.ನೇರವಾಗಿ ಹೇಳುತ್ತೇನೆ, ನಮ್ಮ ಪಕ್ಷದ ಕೆಲ ಶಾಸಕರಲ್ಲಿ ಅಸಮಾಧಾನ ಇರುವುದು ಸತ್ಯ. ಹೀಗಾಗಿಯೇ ಕೆಲವರು ಸಭೆ ಸಹ ಸೇರಿದ್ದಾರೆ. ನಮ್ಮ ನಾಯಕರೆಲ್ಲರೂ ಕೂಳಿತುಕೊಂಡು ಅಸಮಾಧಾನ ಬಗೆಹರಿಸುತ್ತಾರೆ ಎಂದರು.
ಯಾರು ಸನ್ಯಾಸಿಗಳಲ್ಲ ಸ್ಥಾನ ಮಾನ ಕೇಳುವುದು ಸಹಜ. ನಮ್ಮ ಸರ್ಕಾರ ಮೂರೂ ವರ್ಷದ ಅವಧಿ ಪೂರ್ಣಗೊಳಿಸುವುದು ಖಚಿತ ಎಂದರು.ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ ಅವರು, ನೀವು ಮುಖ್ಯಮಂತ್ರಿ ಆಗಿದ್ದಾಗ ನಿಮ್ಮ ಮಗ ಶಾಸಕರು ಇಲ್ಲದಿದ್ದರೂ ಮೈಸೂರಲ್ಲಿ ಸರ್ಕಾರಿ ಕಾರು ತಗೆದುಕೊಂಡು ಸಭೆ ನಡೆಸಿದ್ದರಲ್ವಾ? ಆಗೇನು ಸಿದ್ದರಾಮಯ್ಯ ಅವರು ಕುರುಡಾಗಿದ್ರಾ ? ಎಂದು ಪ್ರಶ್ನಿಸಿದ ಅವರು, ಮೊದಲು ಸಿದ್ದ ರಾಮಯ್ಯ ಅವರು ಇದಕ್ಕೆ ಉತ್ತರ ನೀಬೇಕು ಎಂದು ಒತ್ತಾಯಿಸಿದರು.ಸಿದ್ದ ರಾಮಯ್ಯ ಯತಿಂದ್ರಾ ಎನ್ನುವ ಬದಲು ವಿಜಯಂದ್ರ ಎಂದಿರಬಹುದು ಎಂದು ವ್ಯಂಗ್ಯವಾಡಿದರು.