ರಜೆಗಳಲ್ಲಿ ತಾರತಮ್ಯ: ಶಿಕ್ಷಕರಿಂದ ಮನವಿ

ಬಾಗಲಕೋಟೆ:  ಕರ್ನಾಟಕರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬಾಗಲಕೋಟೆ ರಾಜ್ಯ ಸರಕಾರದ ಶಿಕ್ಷಣ ಸಚಿವರಿಗೆ ಶಿಕ್ಷಕರು ಸಾಂದಭರ್ಿಕ ರಜೆಗಳಲ್ಲಿ ಆಗುವ ತಾರತಮ್ಯವನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ. 

       ಮಿಕ ಶಿಕ್ಷಕ ಸಂಘವು ಕಳೆದ ಐವತ್ತು ವರ್ಷಗಳಿಂದ ಶಿಕ್ಷಕರು ಮತ್ತು ಶಿಕ್ಷಣದ ಗುಣಮಟ್ಟದ ಹೆಚ್ಚಳ ಮತ್ತು ಸಮಸ್ಯೆ ಪರಿಹಾರಕ್ಕಾಗಿ ಶ್ರಮಿಸುತ್ತಾ ಬಂದಿದ್ದು ಆದರೆ ಶಿಕ್ಷಣ ಇಲಾಖೆಯ ಸೂತ್ತೊಲೆಗಳ ಪ್ರಕಾರ ವಾಷರ್ಿಕ ಸಾಂದಭರ್ಿಕ ರಜೆಗಳು 15 ರಿಂದ 10ಕ್ಕೆ ಇಳಿಕೆಯಾಗಿದೆ ಆದರೆ ಶಾಲಾ ಕಾಲೇಜುಗಳಿಗೆ 2ನೇ ಶನಿವಾರ ಮತ್ತು 4ನೇ ಶನಿವಾರ ರಜೆ ಇರುವದಿಲ್ಲ ಎನ್ನುವ ವಿಷಯವನ್ನು ಜೂನ್ 13  ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮನವಿ ಸಲ್ಲಿಸಲಾಗಿತ್ತು. ಅದರಲ್ಲಿ ಶಿಕ್ಷಕರಿಗೆ ಮೊದಲು ಇದಂತೆ 15 ಸಾಂದಭರ್ಿಕ ರಜೆಯನ್ನು ಮುಂದುವರೆಸಬೇಕು ಇಲ್ಲವಾದಲ್ಲಿ 2ನೇ ಮತ್ತು 4ನೇ ಶನಿವಾರ ರಜೆ ಘೋಷಿಸಬೇಕು ಎಂದು ಸಂಘವು ಮನವಿಯಲ್ಲಿ ಒತ್ತಾಯಿಸಿದೆ. 

            ಬೊಧಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ವಾಷರ್ಿಕ 152 ರಜೆ ಆದರೆ ಬೊಧಕೇತರ ಸಿಬ್ಬಂದಿಗೆ 164 ರಜೆಗಳಿವೆ ಶಾಲೆಗಳಿಗೆ ರಜೆ ಘೋಷಣೆಯಾದರೆ ಅದಕ್ಕಾಗಿ ಶನಿವಾರ ಮತ್ತು ಭಾನುವಾರ ಶಾಲೆಗಳು ನಡೆಸಿ ಸರಿದೂಗಿಸಲಾಗುತ್ತದೆ. ಇನ್ನು ರಜೆ ಅವಧಿಯಲ್ಲಿ ತರಬೇತಿಗೆ, ಗಣತಿಗೆ, ಚುನಾವಣಾ ಮತ್ತು ಇತರೆ ಕಾರ್ಯಗಳಿಗೆ ಶಿಕ್ಷಕರ ರಜೆಗಳು ಕೆಲಸದಿನಗಳಲ್ಲಿ ಪರಿವರ್ತನೆಗೊಳುತ್ತಿವೆ ಎನ್ನುವದನ್ನು ತಮ್ಮಗೆ ಈ ಮೂಲಕ ತಿಳಿಸಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.