ಕರ್ತ್ಯವ್ಯಲೋಪ: ದಾವಣಗೆರೆಯಲ್ಲಿ ಪಿಎಸ್ಐ, ಐವರು ಕಾನ್ಸ್‌ಟೇಬಲ್‍ಗಳು ಅಮಾನತು

ದಾವಣಗೆರೆ, ಜೂನ್ 11, ಕರ್ತ್ಯವ್ಯಲೋಪದ ಆರೋಪದ ಮೇಲೆ ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮತ್ತು ಐವರು ಕಾನ್ಸ್‌ಟೇಬಲ್‍ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಐಜಿಪಿ (ಪೂರ್ವ ವಲಯ) ಎಸ್ ರವಿ ಗುರುವಾರ ತಿಳಿಸಿದ್ದಾರೆ. ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂಜಾಟವನ್ನು ನಿಯಂತ್ರಿಸಲು ವಿಫಲವಾದ ಆರೋಪದ ಮೇಲೆ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಂಜೀವ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಇದಲ್ಲದೆ, ವಿವಿಧ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಐಜಿಪಿ ನೇತೃತ್ವದ ತಂಡವೂ ಇಸ್ಪೀಟು ಆಡುತ್ತಿದ್ದ ಐವರು ಕಾನ್‌ಸ್ಟೆಬಲ್‌ಗಳನ್ನು ಬಂಧಿಸಿ, ಅವರಿಂದ 29,000 ರೂ ನಗದು ವಶಪಡಿಸಿಕೊಂಡಿದೆ. ಇವರೆಲ್ಲರನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದು, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.