ಜಿಲ್ಲಾಸ್ಪತ್ರೆಯಿಂದ ಕೊರೊನಾದಿಂದ ಗುಣಮುಖರಾದ ಓರ್ವನ ಡಿಸ್ಚಾಜ್೯

ವಿಜಯಪುರ ಮೇ.14 : ಗುರುವಾರ ಜಿಲ್ಲಾಸ್ಪತ್ರೆಯಿಂದ ಕೋವಿಡ್-19 ರೋಗದಿಂದ ಗುಣಮುಖರಾದ ಓರ್ವ ಪುರುಷ ರೋಗಿಯು ಬಿಡುಗಡೆ ಹೊಂದಿದ್ದು, 45 ವರ್ಷ ವಯೋಮಾನದ ಪುರುಷ ರೋಗಿ ಸಂಖ್ಯೆ; 595 ಅವರು ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಸಕ್ರಿಯವಾಗಿರುವ ಇನ್ನುಳಿದ 13 ಕೋವಿಡ್-19 ರೋಗಿಗಳ ಆರೋಗ್ಯ ಸ್ಥಿರವಾಗಿದ್ದು ಪರಿಣಾಮಕಾರಿ ಚಿಕಿತ್ಸೆ ನಡೆಯುತ್ತಿದೆ. 

         ಜಿಲ್ಲೆಯಲ್ಲಿ ಈವರೆಗೆ 52 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈವರೆಗೆ ಒಟ್ಟು 36 ಜನ ಕೋವಿಡ್-19 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲಾಸ್ಪತ್ರೆಯಿಂದ ಗುಣಮುಖ ರೋಗಿ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಎಸ್.ಎ ಕಟ್ಟಿ, ಡಾ.ಲಕ್ಕಣ್ಣವರ, ಡಾ.ಬಿರಾದಾರ, ಡಾ. ಇಂಗಳೆ, ಡಾ. ಮಹೇಶ ಮೋರೆ, ಸುರೇಖಾ ಗಾಯಕವಾಡ, ಲಾಲಬಿ ನದಾಫ್, ಶರಣಬಸಪ್ಪ ಕಲ್ಲೂರ, ಮನೋಜ್ ಕಾನಸೆ, ಮಂಜುನಾಥ ಬಂಟನೂರ, ಸುರೇಂದ್ರ ಮಾನಕರ, ಸುರೇಶ ಸುಣಗಾರ, ಶ್ರೀಪತಿ ಕುಲಕಣರ್ಿ, ಎಸ್.ಎಲ್ ಖಜಾಪೂರ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಇದ್ದರು.