ವಿವೇಕ ಜಾಗೃತ ಬಳಗದಿಂದ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ

ಲೋಕದರ್ಶನವರದಿ

ಶಿಗ್ಗಾವಿ 20: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ, ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ನೀಡುವದರೊಂದಿಗೆ ಪಟ್ಟಣದ ವಿವೇಕ ಜಾಗೃತ ಬಳಗದ ಸದಸ್ಯರು ಎಲ್ಲ ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದರು.

     ವಿವೇಕ ಜಾಗೃತ ಬಳಗದ ಅಶೋಕ ಕುಸರ್ಾಪೂರ, ಈರಣ್ಣಾ ಬಡ್ಡಿ, ರುದ್ರಗೌಡ ಮೆಳ್ಳಾಗಟ್ಟಿ, ರಾಜು ಗಾಣಿಗೇರ, ಮಲ್ಲಯ್ಯ ಹಿರೇಮಠ, ಶೇಖಣ್ಣಾ ಕಳ್ಳಿಮನಿ, ಶಂಭು ಯಲಿಗಾರ, ಮೃತ್ಯುಂಜಯ ವಾಲಿಶೆಟ್ಟರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.