ದಿನಾಚರಣೆ ಪಕ್ಷಗಾರರಿಗೆ ಕರ್ತವ್ಯ ನಿಷ್ಠೆಯ ನ್ಯಾಯ, ವಕೀಲರಿಂದ ಸಿಗಬೇಕು - ಕೆ ಶಿವಲಿಂಗಪ್ಪ

Dina Nitriya partisans should get justice from duty, lawyers - K Sivalingappa

ದಿನಾಚರಣೆ ಪಕ್ಷಗಾರರಿಗೆ ಕರ್ತವ್ಯ ನಿಷ್ಠೆಯ ನ್ಯಾಯ, ವಕೀಲರಿಂದ ಸಿಗಬೇಕು - ಕೆ ಶಿವಲಿಂಗಪ್ಪ

ರಾಣೇಬೆನ್ನೂರು 07 :  ಸಮಾಜದಲ್ಲಿ ವಕೀಲ ವೃತ್ತಿಗೆತನ್ನದೇ ಆದಗೌರವ, ಮತ್ತು ಅಭಿಮಾನ ವಿದೆ. ಪವಿತ್ರವಾದ ನ್ಯಾಯದಾನವನ್ನು ನೀಡುವಂತಹ ಈ ವೃತ್ತಿಗೆ ಮತ್ತಷ್ಟು ನ್ಯಾಯಪರವಾದ, ವಾದ ಮಂಡನೆ  ಮಾಡಲುಯುವ ನ್ಯಾಯವಾದಿಗಳು ಮತ್ತಷ್ಟು ಅಧ್ಯಯನ ಮಾಡಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ವಕೀಲರ ಸಂಘದಅಧ್ಯಕ್ಷ, ನ್ಯಾಯವಾದಿ ಬಿ. ಹೆಚ್‌. ಬುರಡಿಕಟ್ಟಿ ಹೇಳಿದರು. , ನ್ಯಾಯಾಲಯದಆವರಣದಲ್ಲಿರುವ ವಕೀಲರ ಸಂಘದ ಸಭಾಭವನದಲ್ಲಿ, ಸಂಘವು ಆಯೋಜಿಸಲಾಗಿದ್ದ, ವಕೀಲರ ದಿನಾಚರಣೆ ಮತ್ತು ಹಿರಿಯ ವಕೀಲರಗೌರವ ಸನ್ಮಾನ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿದರು.ವಾಣಿಜ್ಯ ನಗರದಲ್ಲಿರುವ, ರಾಣೆಬೆನ್ನೂರು ವಕೀಲರ ಸಂಘ, ಮತ್ತುಇಲ್ಲಿನ ನ್ಯಾಯಾಲಯಕ್ಕೆ ಬಹುದೊಡ್ಡ ಹೆಸರಿದೆ.ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡದಾದ, ಬಹುಶಂಕೆಯ ಸದಸ್ಯರನ್ನು ಒಳಗೊಂಡಿರುವ ಸಂಘ ಇದಾಗಿದೆ.ಎಂದ, ಯುವ ನ್ಯಾಯವಾದಿಗಳು, ಇಲ್ಲಿರುವ ಹಿರಿಯ ನ್ಯಾಯವಾದಿಗಳ, ಸಲಹೆ ಸೂಚನೆ, ಮತ್ತು ಪ್ರಕರಣಗಳ ಕುರಿತು  ಮಾರ್ಗದರ್ಶನ ಪಡೆಯಬೇಕಾದ ಅಗತ್ಯ ವಿದೆ ಎಂದರುಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರು ನ್ಯಾಯವಾದಿಗಳಾದ, ಎನ್‌.ಜಿ. ಬಣಕಾರ, ಎಸ್‌ಎಸ್ ಶಿರಗಂಬಿ, ಕೆ.ಎಂ. ಬಂದಮ್ಮನವರ, ಸಿ.ಎನ್‌. ಶಿವಪೂಜಿ, ಆರ್‌. ಬಿ. ಸೊರಟೂರ, ಎಸ್‌. ಸಿ.ಹುಲ್ಮನಿ, ವೈ. ಹೆಚ್‌. ಭಾನುವಳ್ಳಿ ಸೇರಿದಂತೆ ಮೊದಲಾದ ನ್ಯಾಯವಾದಿಗಳನ್ನು  ಅವರ ವೃತ್ತಿ ಬದುಕಿನ,ಸುದೀರ್ಘ ಸೇವೆಗಾಗಿ  ಅಭಿನಂದಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿದ, ಹಿರಿಯ ನ್ಯಾಯವಾದಿಗಳಾದ ಎ. ಎಂ.ನಾಯ್ಕ್‌, ಕೆ. ಶಿವಲಿಂಗಪ್ಪ, ಆರ್‌. ಬಿ. ಸೊರಟೂರ, ಕೆ.ಎನ್‌. ಕೋರಧಾನ್ಯಮಠಅವರು, ವಕೀಲ ವೃತ್ತಿಜನಸಾಮಾನ್ಯರಿಗೆ ನ್ಯಾಯಧಾನ ನೀಡುವುದಾಗಿದೆ. ಪ್ರಕರಣಗಳನ್ನು ಸರಿಯಾಗಿಅರ್ಥ ಮಾಡಿಕೊಂಡು, ದಾಖಲೆಗಳನ್ನು ಸಂಗ್ರಹಿಸಿ, ವಾದ ಮಂಡಿಸಿದರೇ,  ಕಕ್ಷಿಧಾರರು, ಜೀವನಪರ್ಯಂತ ನಂಬಿಕೆ,ಪ್ರೀತಿ, ವಿಶ್ವಾಸಅಭಿಮಾನ ಹೊಂದಿರುತ್ತಾರೆ. ಈ ನಿಟ್ಟಿನಲ್ಲಿಯುವ ವಕೀಲರು, ತಮ್ಮಕರ್ತವ್ಯದಕ್ಷತೆಯನ್ನು ಮೆರೆಯುವಂತಾಗಬೇಕುಎಂದರು.ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಎನ್‌. ಎಂ.ಡೋಠರ, ಎಲ್‌. ಎಫ್‌. ಕೆಂಗೊಂಡ್, ಸಂತೋಷ್ ಬಣಕಾರ, ಮೋಹನ ಬೇಲೂರು, ಬಿ ನಾಗೇಂದ್ರ​‍್ಪ, ಶಿವರಾಜ ಕುಸುಗೂರು, ಪಿ.ಎಸ್‌. ದೊಡ್ಡಗೌಡ್ರ, ಸಿ.ಎಸ್‌.ಬುರುಡಿಕಟ್ಟಿ, ಸತೀಶ್ ಮಾಗನೂರ, ಸವಿತಾ ಮುಂಡಾಸದ ಸೇರಿದಂತೆ ಮತ್ತಿತರಗಣ್ಯ  ವಕೀಲರು ಉಪಸ್ಥಿತರಿದ್ದರು.