ದಿಲೀಪ್ ಕುಮಾರ್ ಮತ್ತೆ ಆಸ್ಪತ್ರೆಗೆ

ಮುಂಬೈ 08: ಬಾಲಿವುಡ್ ದಂತ ಕಥೆ ಎಂದೇ ಖ್ಯಾತಿ ಪಡೆದಿರುವ ಹಿರಿಯ ಅಭಿನೇತ್ರ ದಿಲೀಪ್ ಕುಮಾರ್ (95) ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದು, ನಿನ್ನೆ ರಾತ್ರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

            ನ್ಯುಮೋನಿಯಾ ರೋಗದಿಂದ ಬಳಲುತ್ತಿರುವ ಅವರನ್ನು ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಆಪ್ತಮಿತ್ರ ಫೈಸಲ್ ಫರೂಕಿ ತಿಳಿಸಿದ್ದಾರೆ.

            ಕೆಲ ದಿನಗಳ ಹಿಂದೆ ಲಘು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿದ್ದ ಅವರು ಮನೆಗೆ ಹಿಂದಿರುಗಿದ್ದರು. ಆದರೆ ಮತ್ತೆ ನ್ಯುಮೋನಿಯಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

            ಹಿಂದಿ ಚಿತ್ರರಂಗದ ದುರಂತ ಕಥೆಗಳ ನಾಯಕ ಎಂದೇ ಹೆಸರಾಗಿರುವ ದಿಲೀಪ್ ಕುಮಾರ್ ಅಂದಾಜ್ , ಮಧುಮತಿ, ಆನ್, ಮೊಘಲ್ ಅಜಾಂ ಮೊದಲಾದ ಮಹೋನ್ನತ ಚಿತ್ರಗಳಲ್ಲಿ ನಟಿಸಿದ್ದಾರೆ.