ಬೆಂಗಳೂರು, ಮೇ10,ತಾವು ಊರಲ್ಲಿ ಇಲ್ಲದಿರುವುದರಿಂದ ಮೇ 15ರಂದು ತಮಗೆ ಜನ್ಮದಿನದ ಶುಭಾಶಯ ಕೋರಲು ಯಾರೂ ಬರಬಾರದೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.ಅನಿವಾರ್ಯ ಕಾರಣಗಳಿಂದ ಮೇ 14 ರಿಂದ 3 ದಿನಗಳ ಕಾಲ ಬೆಂಗಳೂರಿನಲ್ಲಿ ಇರುವುದಿಲ್ಲ. ಹೀಗಾಗಿ ನಾಯಕರಾಗಲಿ, ಪಕ್ಷದ ಕಾರ್ಯಕರ್ತರಾಗಲಿ, ಅಭಿಮಾನಿ ಬಂಧುಗಳಾಗಲಿ, ಕನಕಪುರ ಕ್ಷೇತ್ರದವರಾಗಲಿ ಯಾರೂ ಕೂಡ ಸದಾಶಿವನಗರ ನಿವಾಸಕ್ಕಾಗಲಿ, ಪಕ್ಷದ ಕಚೇರಿಗಾಗಲಿ ಬರುವುದು ಬೇಡ. ಯಾರೂ ಇದನ್ನು ತಪ್ಪಾಗಿ ಭಾವಿಸಬಾರದು ಎಂದು ಶಿವಕುಮಾರ್ ವಿನಂತಿ ಮಾಡಿದ್ದಾರೆ.