ನನ್ನ ದೇಶದ ಪರವಾಗಿ ಹಾಕಿ ಆಡುವುದಕ್ಕೆ ಬಂದುಬಿಡು ನಿನಗೇನುಬೇಕು ನಾನು ಕೊಡುತ್ತೇನೆ. ಅಷ್ಟೇ ಏಕೆ ನನ್ನ ದೇಶದಲ್ಲಿ ನನ್ನನ್ನು ಹೊರತು ಪಡಿಸಿ ಇರುವಂತ ದೊಡ್ಡ ಹುದ್ದೆಗೆ ನಿನ್ನನ್ನು ನೇಮಿಸುತ್ತೇನೆ. ಈ ದೇಶದ ತಂಡದಿಂದ ಹೊರ ನಡೆದು ನನ್ನ ದೇಶದ ತಂಡವನ್ನು ಸೇರಿಕೊಂಡು, ನನ್ನ ದೇಶದ ಕೀತರ್ಿಯ ಪಥಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸು ಎಂದು ಕೇಳಿದಾಗ ಆ ಪುಣ್ಯಾತ್ಮ ಕಣ್ಣು ಮುಚ್ಚಿಕೊಂಡು ಒಪ್ಪಿ ಬಿಡಬೇಕಿತ್ತು. ಪಾಪ ಆತನಿಗೇನು ಗೊತ್ತು ಯಾವ ದೇಶಕ್ಕಾಗಿ ನಾನು ಆಡುತ್ತಿದ್ದೇನೋ ಆ ದೇಶ ನನ್ನನ್ನು ಬೇಗನೆ ಮರೆತು ಬಿಡುತ್ತದೆ, ಯಾವ ದೇಶಪ್ರೇಮದ ಅಲೆಯಲ್ಲಿ ತೇಲುತ್ತ ಗೋಲು ಬಾರಿಸುತ್ತಿದ್ದೇನೋ ಆ ದೇಶಪ್ರೇಮವನ್ನು ಅದೇ ದೇಶದ ಜನರು ಅವಮಾನಿಸುತ್ತಾರೆ, ಯಾವ ದೇಶಕ್ಕಾಗಿ ಸಿಕ್ಕ ಅವಕಾಶವನ್ನು ಧಿಕ್ಕರಿಸುತ್ತಿದ್ದೇನೋ ಆ ದೇಶವೇ ಮುಂದೆ ನನ್ನನ್ನು ತಿರಸ್ಕರಿಸುತ್ತದೆ, ದೇಶಕ್ಕಾಗಿ ಆಡಿದವನನ್ನು ಮರೆತು ಸ್ವಾರ್ಥಕ್ಕಾಗಿ ಆಡಿದವನನ್ನು ಎತ್ತಿ ಮುದ್ದಾಡುತ್ತದೆ ಎಂದು. ಅದ್ಯಾವುದರ ಪರಿವೆಯೇ ಇಲ್ಲದೆ ಆತ ದೇಶಕ್ಕಾಗಿ ತನ್ನನ್ನು ಸಮಪರ್ಿಸಿಕೊಂಡನು. ಪಾಪ ದೇಶ ದೇಶ ಎನ್ನುತ್ತ ಸಿಕ್ಕ ಅವಕಾಶಗಳನ್ನು ಕೈಚಲ್ಲಿ ದೇಶಕ್ಕಾಗಿಯೇ ಆಡುವುದಾಗಿ ಶಪಥ ಮಾಡಿದ. ದುಡ್ಡಿಗಾಗಿ ಆಡಿದವರಿಗೆ ದೊಡ್ಡ ದೊಡ್ಡ ಬಹುಮಾನ ನೀಡುವ ಭಂಡ ಜನಗಳ ನಾಡಿನಲ್ಲಿ ನಾನುಂಡ ಮನೆಗೆ ಎರಡು ಬಗೆಯುವುದಿಲ್ಲ ಎಂದು ನಿಧರ್ಾರ ಮಾಡಿ ಬಂದ ಅವಕಾಶವನ್ನು ಸಾರಾ ಸಗಟಾಗಿ ತಳ್ಳಿ ಹಾಕಿದ ಆ ವ್ಯಕ್ತಿಯನ್ನು ಕುರಿತು ಅಭಿಮಾನ ಪಡಬೇಕೊ ಇಲ್ಲ ಸಿಕ್ಕ ಅವಕಾಶವನ್ನು ಕೈಚಲ್ಲಿ ಇಂದು ಇತಿಹಾಸದಲ್ಲಿ ಮರಿಚಿಕೆಯಾದ ಸತ್ಯವಾಗಿದ್ದಾನಲ್ಲ ಎನ್ನುವುದನ್ನು ಕಂಡು ಕಣ್ಣಿರಿಡಬೇಕೊ ಗೊತ್ತಾಗುತ್ತಿಲ್ಲ. ಆದರೆ ಎಲ್ಲೋ ಆ ವ್ಯಕ್ತಿ ಮಾಡಿದಂತಹ ಆ ಒಂದು ಕಾರ್ಯ ಮಾತ್ರ ನಮಗೆಲ್ಲ ಇಂದು ಸ್ಫೂತರ್ಿಯಾಗಿದೆ ಎನ್ನುವುದಂತೂ ಸತ್ಯ. ಒಮ್ಮೊಮ್ಮೆ ಈ ವಿಷಯವನ್ನು ನೆನಪಿಸಿಕೊಂಡಾಗ ಸಂತೋಷವಾಗುತ್ತದೆ. ಹಾಗೆಯೇ ಇಂಥವರು ಹುಟ್ಟಿದ ಭೂಮಿಯಲ್ಲಿ ನಾನು ಹುಟ್ಟಿದ್ದೇನಲ್ಲ ಅದೇ ನನ್ನ ಸೌಭಾಗ್ಯ ಎಂದು ಹೆಮ್ಮೆಯಾಗುತ್ತದೆ. ಹೌದು ನಾನು ಹೇಳುತ್ತಿರುವುದು ಜಗತ್ತು ಕಂಡ ಶ್ರೇಷ್ಠ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ ಅವರ ಕುರಿತಾಗಿಯೇ. ಅವರ ಆ ಕಲಾತ್ಮಕ ಆಟಕ್ಕೆ ಇಡೀ ವಿಶ್ವ ಸೋತು ನತಮಸ್ತಕವಾಗಿತ್ತು. ಜಗತ್ತು ಅವರ ಆಟಕ್ಕೆ ಅದೆಷ್ಟು ಮಾರು ಹೋಗಿತ್ತು ಎಂದರೆ ಅವನು ಅನ್ಯ ದೇಶದ ಆಟಗಾರ ಎನ್ನುವುದನ್ನು ಪಕ್ಕಕ್ಕಿಟ್ಟು ನಮ್ಮ ದೇಶದವನೇ ಎನ್ನುವ ಮಟ್ಟದಲ್ಲಿ ಪ್ರತಿಮೆ ನಿಮರ್ಾಣ ಮಾಡಿ ಸಂಭ್ರಮ ಪಟ್ಟಿತ್ತು. ಈ ಕಾರಣಕ್ಕಾಗಿಯೇ ಇವರ ಪುತ್ಥಳಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಆಸ್ಟ್ರಿಯಾ ದೇಶದಲ್ಲಿಯೂ ಕೂಡ ನಿಮರ್ಾಣವಾಗಿದೆ. ಇದನ್ನು ನೋಡಿದರೆ ಅವರೆಂತ ಪ್ರತಿಭಾಶಾಲಿಯಾಗಿದ್ದರು ಎನ್ನುವುದು ನಿಮಗೇ ಅರ್ಥವಾಗುತ್ತದೆ. ಮೇಲೆ ಹೇಳಿದಂತೆ ಇವರ ಆಟಕ್ಕೆ ಸವರ್ಾಧಿಕಾರಿ ಹಿಟ್ಲರ್ ಮನಸೋತು ತನ್ನ ದೇಶಕ್ಕೆ ಸ್ವಾಗಿಸುತ್ತಾನೆಂದರೆ ಧ್ಯಾನ್ಚಂದ ಅವರ ಆಟ ಅದೆಷ್ಟು ಚೆಂದವಿರಬಾರದು ಹೇಳಿ? ಅಂಥಹ ಮಹಾನ್ ಆಟಗಾರನಿಗೆ ನಾವೇನು ಕೊಟ್ಟೆವು ಎನ್ನುವುದು ನಿಮಗೆಲ್ಲ ಗೊತ್ತೇ ಇದೆ ಅಲ್ಲವೆ? ಅವರ ಸಾಧನೆಗಾಗಿ ಭಾರತ ರತ್ನ ಸಿಗಬೇಕಿತ್ತು. ಆದರೆ ಸಿಗಲಿಲ್ಲ. ಸಿಗಲಿಲ್ಲ ಎನ್ನುವುದಕ್ಕಿಂತ ಕೊಡಲಿಲ್ಲ ಎನ್ನುವುದು ಸೂಕ್ತವಾಗುತ್ತದೆ. ಕಾರಣ ಅವರು ದುಡ್ಡಿಗಾಗಿ ಆಡಿರಲಿಲ್ಲ. ಯಾವ ರಾಜಕೀಯ ಪಕ್ಷಕ್ಕೂ ಹತ್ತಿರದವರಾಗಿರಲಿಲ್ಲ. ಯಾವ ಪಕ್ಷಕ್ಕೂ ಎಜೆಂಟ್ನಂತೆ ಕೆಲಸ ಮಾಡುತ್ತಿರಲಿಲ್ಲ. ಯಾವ ಪಕ್ಷವನ್ನು ಹೊಗಳುವ ಕಾರ್ಯ ಮಾಡಿರಲಿಲ್ಲ. ಆದ ಕಾರಣ ಅವರಿಗೆ ಭಾರತ ರತ್ನ ಸಿಗಲಿಲ್ಲ. ಇದು ನಿಜವಾದ ಕ್ರೀಡಾ ಪ್ರೇಮಿಗಳನ್ನು ಪ್ರತಿವರ್ಷವು ಕೆರಳಿಸುತ್ತದೆ. ಆದರೆ ಈ ಬಾರಿಯಂತೂ ಪದ್ಮ ಪ್ರಶಸ್ತಿಗಳನ್ನು ವಿತರಣೆ ಮಾಡುವಾಗ ಹೆಂತೆಂತ ಘಟಾನುಗಟಿಗಳನ್ನು ಆಯ್ದುಕೊಂಡಿದ್ದಾರೆ ಎನ್ನುವುದನ್ನು ನೋಡಿದ ಮೇಲಂತೂ ಇವರಿಗೇಕೆ ಭಾರತರತ್ನ ಸಿಗಲಿಲ್ಲ ಎನ್ನುವುದು ಅರ್ಥವಾಗಿ ಹೋಯಿತು. ಅದರ ಜೊತೆಯಲ್ಲಿಯೇ ನಟಿ ಕಂಗನಾ ರಣಾವತ್ ಅವರಿಗೆ ಪದ್ಮಪ್ರಶಸ್ತಿ ನೀಡುವ ಸಕರ್ಾರಕ್ಕೆ ಧ್ಯಾನ್ಚಂದ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವ ಮನಸ್ಸು ಬರಲಿಲ್ಲವೇ? ಎನ್ನುವ ಪ್ರಶ್ನೆ ಮೂಡಿ ಮತ್ತೊಮ್ಮೆ ನನ್ನೆದೆಯಿಂದ ನಿಟ್ಟುಸಿರು ಹೊರ ಸೂಸಿ ಬಂದಿತು. ಅದನ್ನೆ ತಮ್ಮೆದರು ಪ್ರಸ್ತಾಪ ಮಾಡುತ್ತಿದ್ದೇನೆ.
ನನಗೆ ತಿಳಿದಿರುವಂತೆ ಕೆಲವು ಜನಗಳಿಗೆ ಸಿಗುವ ಪ್ರಶಸ್ತಿಗಳಿಂದಾಗಿ ಆ ವ್ಯಕ್ತಿಯ ಘನತೆ ಹೆಚ್ಚಾಗುತ್ತದೆ. ಮತ್ತೆ ಕೆಲವು ಜನಗಳಿಗೆ ಪ್ರಶಸ್ತಿ ನೀಡುವುದರಿಂದ ಆ ಪ್ರಶಸ್ತಿಯ ಘನತೆಯೇ ಇಮ್ಮಡಿಯಾಗುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ಅರ್ಥವಿಲ್ಲದೇ ನೀಡುವ ಮತ್ತು ಹೊಗಳುಭಟ್ಟರಿಗೆ ಕೊಡುವ ಪ್ರಶಸ್ತಿಗಳಿಂದಾಗಿ ಆ ಪ್ರಶಸ್ತಿಗೆ ಮೊದಲಿದ್ದ ಮೌಲ್ಯವೇ ಕುಸಿದು ಹೋಗುತ್ತದೆ. ಈ ಬಾರಿ ನೀಡಿದ ಪದ್ಮ ಪ್ರಶಸ್ತಿಯಲ್ಲಿ ಕೆಲವು ಜನಗಳ ಹೆಸರುಗಳನ್ನು ಕಂಡು ಹಾಗೆಯೇ ಅನಿಸುತ್ತಿದೆ. ಈ ದೇಶಕ್ಕಾಗಿ ಹಾಕಿ ಆಡಿದ ಧ್ಯಾನ್ಚಂದ್ಗೆ ಭಾರತ ರತ್ನ ನೀಡುವುದಕ್ಕೆ ಒತ್ತಾಯ ಬಂದಾಗ ಕಿವಿಗೆ ಹಾಕಿಕೊಳ್ಳದೇ ಜಾಣ ಕಿವುಡುತನ ಪ್ರದಶರ್ಿಸುವ ಕೇಂದ್ರ ಸಕರ್ಾರಗಳಿಗೆ ಪದ್ಮ ಪ್ರಶಸ್ತಿ ನೀಡುವಾಗ ತಮಗೆ ಬೇಕಾದವರು ಮಾತ್ರ ನೆನಪಿಗೆ ಬರುತ್ತಾರೆ ಎನಿಸುತ್ತದೆ. "ರಾಜೀವ್ಗಾಂಧೀ ಖೇಲ್ರತ್ನ" ಪ್ರಶಸ್ತಿಯ ಹೆಸರನ್ನು ಬದಲಿಸಿ "ಮೇಜರ್ ಧ್ಯಾನ್ಚಂದ್ ಖೇಲ್ರತ್ನ" ಪ್ರಶಸ್ತಿ ಎಂದು ಮರು ನಾಮಕರಣ ಮಾಡಿದಾಗ ನಿಜಕ್ಕೂ ಅಚ್ಚರಿ ಹಾಗೂ ಸಂತಸ ಎರಡೂ ಆಯಿತು. ಒಂದೆಡೆ ಸಕರ್ಾರದ ಈ ನಿಧರ್ಾರ ಅಚ್ಚರಿ ತಂದರೆ ಮತ್ತೊಂದೆಡೆ ಈ ಬಾರಿಯಾದರೂ ಧ್ಯಾನ್ಚಂದ್ ಅವರಿಗೆ ಭಾರತ ರತ್ನ ಗೌರವ ಸಿಗಬಹುದು ಎನಿಸಿತ್ತು. ಆದರೆ ಹಾಗಾಗಲಿಲ್ಲ. ಮತ್ತದೆ ರಾಗ ಅದೇ ಹಾಡಾಯಿತು. ಧ್ಯಾನ್ಚಂದ ಅವರ ಮಾತು ಇರಲಿ ಬಿಡಿ. ಅವರಿಗೆ ಇವರು ಭಾರತ ರತ್ನ ನೀಡಿದರೆಷ್ಟು ಬಿಟ್ಟರೆಷ್ಟು ಅವರೇ ಭಾರತಕ್ಕೆ ರತ್ನವಾಗಿರುವಾಗ ಅವರಿಗೇಕೆ ಭಾರತರತ್ನ ನೀಡಬೇಕು ಬಿಟ್ಟು ಬಿಡಿ. ಆದರೆ ಈ ಬಾರಿ ಪದ್ಮ ಪ್ರಶಸ್ತಿ ನೀಡುವಾಗ ಕೆಲವರಿಗೆ ನೀಡಿದ ಪ್ರಶಸ್ತಿಗಳು ನಿಜಕ್ಕೂ ಅವರಿಗೆ ಸಿಗಬೇಕಾದುದ್ದೇ? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ. ಅದರಲ್ಲೂ ಬಾಲಿವುಡ್ನ ಭಾರಿ ನಟಿ ಕಂಗನಾ ರಣಾವತ್ಗೆ ನೀಡಿರುವ ಪ್ರಶಸ್ತಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಅವರಿಗೆ ಪ್ರಶಸ್ತಿ ನೀಡಿದಾಗಲೇ ಬಹಳಷ್ಟು ಜನರು ಬೇಸರ ಹಾಗೂ ಅಚ್ಚರಿ ವ್ಯಕ್ತಿ ಪಡಿಸಿದ್ದರು. ನಂತರದಲ್ಲಿ ನಡೆದ ಒಂದು ಘಟನೆ ಅವರಿಗೆ ಈ ಪ್ರಶಸ್ತಿ ಪುರಸ್ಕಾರವನ್ನು ನೀಡುವುದು ಉಚಿತವಾಗಿತ್ತೇ? ಎನ್ನುವ ಪ್ರಶ್ನೆಯನ್ನು ಮೂಡಿಸಿತು. ಪ್ರಶಸ್ತಿ ಪಡೆದುಕೊಂಡ ಬೆನ್ನಲ್ಲೇ ಅವಳು ನೀಡಿದ ಹೇಳಿಕೆಯನ್ನು ಕಂಡ ಈ ಮಹಾತಾಯಿಗೆ ಪ್ರಶಸ್ತಿ ನೀಡಿದ್ದು ಸಾರ್ಥಕವಾಯಿತು ಎನ್ನುವ ಭಾವನೆಯನ್ನು ಹುಟ್ಟು ಹಾಕಿತು. ಆ ಕಾರಣಕ್ಕೆ ಹೇಳಿದ್ದು ಕಂಗನಾಗೆ ಪದ್ಮಶ್ರೀ ಕೊಡುವ ಸಕರ್ಾರಕ್ಕೆ ಧ್ಯಾನ್ಚಂದ್ರಿಗೆ ಭಾರತ ರತ್ನ ನೀಡಬೇಕು ಎನ್ನುವುದು ನೆನಪಾಗಲಿಲ್ಲವೇ? ಎಂದು.
ವಿವಾದಗಳನ್ನು ತಳಕು ಹಾಕಿಕೊಂಡೇ ಮುನ್ನಡೆಯುತ್ತಿರುವ ಕಂಗನಾ ರಣಾವತ್ಗೆ ಬಿಜೆಪಿ ಮೇಲೆ ಕೊಂಚ ಅಕ್ಕರೆ ಹಾಗೂ ಅಭಿಮಾನ ಜಾಸ್ತಿ. 2006ರಲ್ಲಿ ಗ್ಯಾಂಗ್ಸ್ಟರ್ ಚಲನಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ ಕಂಗನಾ ತಮ್ಮ ಮಾದಕ ಮೈಮಾಟದಿಂದಲೇ ಜಾಸ್ತಿ ಪ್ರಚಾರ ಪಡೆದುಕೊಂಡರು. ನಂತರದಲ್ಲಿ "ಮಣಿಕಣರ್ಿಕಾ" "ತಲೈವಿ" ಸೇರಿದಂತೆ ಕೆಲವು ವಿಶೇಷ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಜನಪ್ರೀಯತೆ ಗಳಿಸಿದರು. ಚಿತ್ರರಂಗದ ದಾರಿಯನ್ನು ಸವೆಸುತ್ತಲೇ ಸಾಮಾಜಿಕವಾಗಿ ಗುರುತಿಸಿಕೊಂಡ ಅವರು ಕೆಲವು ಆಕ್ಷೇಪಾರ್ಹವಾದ ಹೇಳಿಕೆಗಳಿಂದ ಮತ್ತು ನೇರವಾಗಿ ಮಾತನಾಡುವ ಮೂಲಕ ವಿವಾಧದ ಕೇಂದ್ರಬಿಂದುವಾಗಿ ಧೂಳೆಬ್ಬಿಸಿದರು. ಒಮ್ಮೊಮ್ಮೆ ಹೋರಾಟಗಾತರ್ಿಯಂತೆ ಕಾಣುತ್ತಿದ್ದ ಅವರು ಮಗದೊಮ್ಮೆ ಪ್ರಚಾರ ಪ್ರೀಯಳಂತೆ ಕಾಣುತ್ತಿದ್ದರು. ಇವೆಲ್ಲ ಅವರನ್ನು ಚಿತ್ರರಂಗದಿಂದ ಹೊರತುಪಡಿಸಿ ಬೇರೊಂದು ಜಗತ್ತಿಗೆ ಪರಿಚಯ ಮಾಡಿಕೊಟ್ಟವು. ಅದರಲ್ಲೂ ಇತ್ತೀಚೆಗೆ ಮಹಾರಾಷ್ಟ್ರ ಸಕರ್ಾರವನ್ನು ಎದುರು ಹಾಕಿಕೊಂಡ ಅವರು ನೀಡುತ್ತಿದ್ದ ಹೇಳಿಕೆಗಳು, ತೋರುತ್ತಿದ್ದ ಧೈರ್ಯ ಚಚರ್ೆಗೆ ಗ್ರಾಸವಾಗುತ್ತಿದ್ದವು. ಈ ಸಂದರ್ಭದಲ್ಲಿ ಅವರು ತಳೆಯುತ್ತಿದ್ದ ನಿಲುವು ಕಂಗನಾಗೆ ಒಂದು ಹೊಸ ಇಮೇಜ್ ತಂದುಕೊಟ್ಟಿತು. ಇವುಗಳ ಮಧ್ಯದಲ್ಲಿಯೇ ಈ ದೇಶದ ಉನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಗೆ ಭಾಜನರಾಗುವ ಮೂಲಕ ಮತ್ತೊಂದು ಅವತಾರವೆತ್ತಿದ್ದಾರೆ. ನಿಜ ಹೇಳಬೇಕೆಂದರೆ ಇವರಿಗೆ ಪದ್ಮಶ್ರೀ ದೊರೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಇಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದರೊಂದಿಗೆ ಅಚ್ಚರಿಯನ್ನು ಹುಟ್ಟು ಹಾಕಿದ್ದಾರೆ. ಅದ್ಯಾವ ಸಾಧನೆಯನ್ನು ಗುರುತಿಸಿ ಸಕರ್ಾರ ಅವರನ್ನು ಗೌರವಿಸಿತೋ ಎಂದು ಜನರು ಹುಬ್ಬೇರಿಸಿ ಕೇಳುವಂತ ಆಶ್ಚರ್ಯವನ್ನು ಉಂಟು ಮಾಡಿರುವುದಂತೂ ಸತ್ಯ. ಕಾರಣ ಇವರಿಗಿಂತಲೂ ಸಾಧನೆ ಮಾಡಿದವರ್ಯಾರು ಇವರಿಗೆ ಸಿಗಲಿಲ್ಲವೋ ಅಥವಾ ಹೊಗಳುಭಟ್ಟರಿಗೆ ಒಂದು ಅವಕಾಶ ನೀಡೋಣ ಎನ್ನುವ ಕಾರಣಕ್ಕೆ ಪದ್ಮಶ್ರೀ ನೀಡಿದರೊ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಈ ಬಾರಿಯ ಪ್ರಶಸ್ತಿಯಲ್ಲಿ ಇವರ ಹೆಸರು ಸೇರ್ಪಡೆಯಾಗುತ್ತಲೇ ಗುಸು ಗುಸು ಪಿಸು ಪಿಸು ಧ್ವನಿಯಲ್ಲಿ ಪದ್ಮಶ್ರೀ ಪ್ರಶಸ್ತಿಯೂ ಕೂಡ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಮಾತನಾಡಿದ್ದಂತೂ ನಾವು ಒಪ್ಪಿಕೊಳ್ಳಲೇ ಬೇಕಾದ ಸತ್ಯವಾಗಿದೆ.
ಅಷ್ಟಕ್ಕೂ ನಾನಿಲ್ಲಿ ಕಂಗನಾಗೆ ಪ್ರಶಸ್ತಿ ಕೊಟ್ಟಿದ್ದಕ್ಕೆ ವಿರೋಧ ಮಾಡುತ್ತಿಲ್ಲ. ಬದಲಿಗೆ ಅವರಿಗೆ ಆ ಪ್ರಶಸ್ತಿ ಪಡೆಯುವ ಅರ್ಹತೆ ಇದೆಯೇ ಎನ್ನುವ ಪ್ರಶ್ನೆಯನ್ನು ಮುಂದಿಡುತ್ತಿದ್ದೇನೆ. ಕಾರಣ ನಮ್ಮ ದೇಶದ ಚಲನಚಿತ್ರರಂಗದಲ್ಲಿ ಅವಳಿಗಿಂತಲೂ ಸಾಧನೆ ಮಾಡಿದವರಿದ್ದಾರೆ. ಅವಳನ್ನೇ ನುಂಗಿ ನೀರು ಕುಡಿಯುವಷ್ಟು ಘಟಾನುಘಟಿ ನಟ ನಟಿಯರಿದ್ದಾರೆ. ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವಂತ ಪ್ರತಿಭಾವಂತರಿದ್ದಾರೆ. ಆದರೆ ಅವರೆಲ್ಲರನ್ನು ಬಿಟ್ಟು ಕಂಗನಾಗೆ ಪ್ರಶಸ್ತಿ ನೀಡಿದ್ದಾರೆ. ಇರಲಿ ಬಿಡಿ ಪ್ರಶಸ್ತಿ ಕೊಟ್ಟಾಗಿದೆ ಈವಾಗ ಮಾತನಾಡಿ ಏನು ಪ್ರಯೋಜನವಿಲ್ಲ. ಆದರೆ ಕಂಗನಾ ರಣಾವತ್ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲಿಯೇ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ನಾನು ಈ ಪ್ರಶಸ್ತಿಯನ್ನು ಪಡೆದುಕೊಳ್ಳುವಷ್ಟು ಪ್ರಬುದ್ಧಳಲ್ಲ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಇದರೊಂದಿಗೆ ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದ ಎಲ್ಲ ಪ್ರಶ್ನೆಗಳಿಗೆ ಸ್ವತಃ ಕಂಗನಾ ರಣಾವತ್ ತೆರೆ ಎಳೆದಿದ್ದಾರೆ. 1947 ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಬದಲಿಗೆ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಿದ್ದು 2014 ರಲ್ಲಿ ಎಂದು ಹೇಳುವ ಮೂಲಕ ವಿವಾದದ ಕೆಸರನ್ನು ಮೈಮೇಲೆರಚಿಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಿರದೇ ಮೋದಿ ಈ ದೇಶದಲ್ಲಿ ಪ್ರಧಾನಿಯಾದ ಮೇಲೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಹೇಳಿ ತಮ್ಮ ಹೊಗಳುಭಟ್ಟಂಗಿತನವನ್ನು ಪ್ರದಶರ್ಿಸುವ ಭರದಲ್ಲಿ ತಾನೇನು ತಪ್ಪು ಮಾಡುತ್ತಿದ್ದೇನೆ ಎನ್ನುವುದನ್ನೇ ಮರೆತು ಬಿಟ್ಟಿದ್ದಾರೆ. ಇದನ್ನು ಕಾಂಗ್ರೇಸ್ ಪಕ್ಷ ಲಾಭಕ್ಕಾಗಿ ವಿರೋಧಿಸುವ ಕಾರ್ಯಕ್ಕೆ ಮುಂದಾಗಿದೆ. ಕಾರಣ ಕೆಲವರ ದೃಷ್ಠಿಯಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೇಸ್ ಎನ್ನುವ ಭ್ರಮೆ ಇದೆ. ಆ ಕಾರಣಕ್ಕಾಗಿ ಮೋದಿ ಹೆಸರು ಹೇಳುತ್ತಿದ್ದಂತೆ ಎಲ್ಲಿ ಕ್ರೆಡಿಟ್ ಬೇರೆ ಪಕ್ಷಕ್ಕೆ ಹೋಗುತ್ತದೆಯೋ ಎನ್ನುವಂತೆ ಹರಿಹಾಯಲು ಯತ್ನಿಸುತ್ತಿದ್ದಾರೆ. ಆದರೆ ನಿಜಕ್ಕೂ ಇದನ್ನು ವಿರೋಧಿಸುವುದು ಕಾಂಗ್ರೇಸ್ನ ಜವಾಬ್ದಾರಿಯಲ್ಲ. ಬದಲಿಗೆ ಜವಾಬ್ದಾರಿಯುವ ಪ್ರತಿಯೊಬ್ಬ ಭಾರತೀಯನದೂ ಆಗಿದೆ. ಕಾರಣ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಮೋದಿ ಬಂದಮೇಲೆ ಎಂದು ಕಂಗನಾ ಹೇಳಿದ್ದು ಅಕ್ಷಮ್ಯ ಅಪರಾಧವೇ ಸರಿ. ಅಷ್ಟಕ್ಕೂ ಅವರೇಕೆ ಹೀಗೆ ಹೇಳಿದರು ಎನ್ನುವುದು ನನಗಿನ್ನು ಅರ್ಥವಾಗದೇ ಉಳಿದಿದೆ. ಮೋದಿಜಿ ಒಬ್ಬ ಒಳ್ಳೆ ಪ್ರಧಾನಿ ಎಂದು ಹಾಡಿ ಹೊಗಳಿದ್ದರೆ ನಾವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರ ಆಡಳಿತವನ್ನು ಶ್ರೇಷ್ಠವೆಂದು ಕರೆದುಕೊಂಡಿದ್ದರು ನಾವು ಕ್ಯಾರೆ ಎನ್ನುತ್ತಿರಲಿಲ್ಲ. ಆದರೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಮೋದಿ ಬಂದ ಮೇಲೆ ಎಂದು ಹೇಳಿದ್ದು ಮಾತ್ರ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಇಂತ ಹೇಳಿಕೆ ಕೊಡುವ ಅಗತ್ಯವಾದರು ಅವರಿಗೆ ಏನಿತ್ತೋ ಗೊತ್ತಾಗುತ್ತಿಲ್ಲ.
ಬಿಜೆಪಿ ಹಾಗೂ ಮೋದಿಯನ್ನು ಕೊಂಡಾಡುವ ಬರದಲ್ಲಿ ದೇಶಪ್ರೇಮಿಗಳಿಗೆ ಅವಮಾನ ಮಾಡಿಬಿಟ್ಟರೆ ಎನ್ನುವುದು ಬಹಳ ಜನಗಳ ಸಿಟ್ಟಿಗೆ ಕಾರಣವಾಗುತ್ತಿದೆ. ಮೋದಿ ಬಂದಮೇಲೆ ದೇಶಕ್ಕೆ ಸ್ವಾತಂತ್ರ್ಯ ಬಂದಿತು ಎನ್ನುವುದಾದರೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಕಾಲಾಪಾನಿ ಶಿಕ್ಷೆಗೆ ಗುರಿಯಾಗಿ ಎರಡೆರಡು ಜೀವಾವಧಿ ಶಿಕ್ಷೆ ಅನುಭವಿಸಿದ ಸಾವರ್ಕರ, ಇಪ್ಪತ್ಮೂರರ ಹರೆಯದಲ್ಲಿಯೇ ನೇಣಿಗೆ ಶರಣಾದ ಭಗತ್ಸಿಂಗ್, ರಾಜಗುರು, ಸುಖದೇವ, ಬ್ರಟೀಷರ ಗುಂಡಿಗೆ ನಾ ಬದಲಿಯಾಗಲಾರೆ ಎಂದು ತಾನೇ ಗುಂಡು ಹಾರಿಸಿಕೊಂಡು ಆತ್ಮಾರ್ಪಣೆ ಮಾಡಿದ ಚಂದ್ರಶೇಖರ ಆಝಾದ್, ವಿದೇಶಕ್ಕೆ ಹೋಗಿ ಸೈನ್ಯ ಸ್ಥಾಪಿಸಿ ಯುದ್ಧಕ್ಕೆ ಸನ್ನದ್ಧರಾದ ಸುಭಾಷ್ಚಂದ್ರ ಭೋಸ್, ನಗು ನಗುತಲೇ ನೇಣಿಗೇರಿದ ಮದನಲಾಲ್ ಧಿಂಗ್ರಾ, ಜಲಿಯನ್ ವಾಲಾಭಾಗ್ ಧುರಂತಕ್ಕೆ ಪ್ರತಿಕಾರ ತೆಗೆದುಕೊಂಡ ಉದ್ದಾಮ ಸಿಂಗ್, ಕ್ರಾಂತಿಯ ಧ್ವನಿಯಾದ ರಾಮ್ ಪ್ರಸಾದ ಬಿಸ್ಮಿಲ್, ಹೋರಾಟದ ಹಾದಿಯಲ್ಲಿ ಹುಲಿಯಂತೆ ಗುಡುಗಿದ ಅಷ್ಪಕುಲ್ಲಾಖಾನ್, ಕ್ರಾಂತಿಯ ಕಿಚ್ಚು ಹಚ್ಚಿದ ಚಾಪೇಕರ್ ಸಹೋದರರು, ಬ್ರಿಟೀಷರಿಗೆ ಹುಚ್ಚು ಹಿಡಿಸಿದ ಖುದಿರಾಮ್ ಭೋಸ್ ಸೇರಿದಂತೆ ದೇಶಕ್ಕಾಗಿ ಬದುಕಿ ದೇಶಕ್ಕಾಗಿಯೇ ಮಡಿದ ಇವರೆಲ್ಲರು ಏನು ಮಾಡಿದರು ತಿಳಿಯುತ್ತಿಲ್ಲ. ಕಂಗನಾ ಪ್ರಕಾರ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ಎನ್ನುವುದಾದರೆ ದೇಶಕ್ಕಾಗಿ ಇವರೆಲ್ಲ ಪ್ರಾಣ ನೀಡಿ ದೊರಕಿಸಿದ್ದು ಸ್ವಾತಂತ್ರ್ಯವಲ್ಲದೇ ಮತ್ತೇನು? ಈ ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುವುದಿಲ್ಲವೇ? ಈ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುವ ಮುನ್ನ ಕಂಗನಾಳಲ್ಲಿ ಹುಟ್ಟಿಕೊಳ್ಳಬೇಕಿತ್ತು. ಹಾಗೆ ಹುಟ್ಟಿದ್ದರೆ ಈ ರೀತಿಯ ಹೇಳಿಕೆಯನ್ನೇ ಕೊಡುತ್ತಿರಲಿಲ್ಲ. ಆದರೆ ಏನು ಮಾಡುವುದು ಪ್ರಶಸ್ತಿ ನೀಡಿದವರ ಋಣವನ್ನು ತೀರಿಸಬೇಕಲ್ಲವೇ ಅದಕ್ಕೆ ಹಾಗೆ ಹೊಗಳಿರಬೇಕು ಎನಿಸುತ್ತಿದೆ. ಆದರೆ ಯಾರನ್ನೋ ಹೊಗಳಿ ಹೊನ್ನಶೂಲಕ್ಕೇರಿಸುವ ಬರದಲ್ಲಿ ನಮ್ಮ ದೇಶಕ್ಕಾಗಿ ಮಡಿದವರಿಗೆ ಅವಮಾನ ಮಾಡುವುದು ಸರಿ ಅಲ್ಲ ಅಲ್ಲವೇ? ವಿಚಿತ್ರ ಎಂದರೆ ಮಣಿಕಣರ್ಿಕಾ ಪಾತ್ರಕ್ಕೆ ಬಣ್ಣ ಹಚ್ಚಿಕೊಂಡಿದ್ದ ಕಂಗನಾ ಬಣ್ಣದ ಜೊತೆಯಲ್ಲಿ ಆ ಮಹಾತಾಯಿಯ ಬಾಂಧವ್ಯವನ್ನು ಕಳೆದುಕೊಂಡಳು ಎನಿಸುತ್ತದೆ. ಅದಕ್ಕೆ ಅವಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಈವಾಗ ಎನಿಸುತ್ತಿದೆ.
ಪದ್ಮ ಪುರಸ್ಕಾರ ಪಡೆದುಕೊಳ್ಳುವುದು ಮುಖ್ಯವಲ್ಲ. ಅದನ್ನು ಪಡೆದುಕೊಳ್ಳುವುದಕ್ಕೆ ನಾವೆಷ್ಟು ಯೋಗ್ಯರಾಗಿದ್ದೇವೆ ಎನ್ನುವುದನ್ನು ಸ್ವತಃ ನಾವುಗಳು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹರೆಕಳ ಹಾಜಬ್ಬ, ಜೋಗತಿ ಮಂಜಮ್ಮ, ತುಳಿಸಿ ಗೌಡ ಅಂತವರಿಗೆ ಪ್ರಶಸ್ತಿ ನೀಡಿದಾಗ ಮನಸ್ಸು ತುಂಬಿ ಬರುತ್ತದೆ. ಆದರೆ ಕಂಗನಾರಂತೆ ಮಾತನಾಡಿದರೆ ಪ್ರಶಸ್ತಿಯ ಮೌಲ್ಯವನ್ನೇ ಹಾಳು ಮಾಡಿದರಲ್ಲ ಎಂದು ಸಿಟ್ಟು ಬರುತ್ತದೆ. ಆದರೆ ಏನು ಮಾಡುವುದು ಹೊಟ್ಟೆಯ ಸಿಟ್ಟು ರಟ್ಟೆಯಲ್ಲಿಲ್ಲ ಎಂದು ಸುಮ್ಮನಾಗಬೇಕಾಗುತ್ತದ ಅಷ್ಟೆ. ಆದರೆ ಇವರಿಂದಾಗಿ ಎಲ್ಲವೂ ಅಯೋಮಯವಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ ಎನ್ನುವುದು ಮಾತ್ರ ಸತ್ಯ. ಅದಕ್ಕೆ ಹೇಳಿದ್ದು ಕಂಗನಾರಂತವರಿಗೆ ಪದ್ಮಶ್ರೀ ಕೊಡುವುದಕ್ಕಿಂತ ಧ್ಯಾನ್ ಚಂದರಂತವರಿಗೆ ಭಾರತ ರತ್ನ ನೀಡಿದ್ದರೆ ಈ ದೇಶದ ಜನರ ಮನದಲ್ಲಿ ಈ ಪ್ರಶಸ್ತಿಗಳ ಮೇಲಿನ ಅಭಿಮಾನ ನೂರ್ಮಡಿಗೊಳ್ಳುತ್ತಿತ್ತು. ಆದರೆ ಈ ತರಹದ ಹೇಳಿಕೆ ಹಾಗೂ ಘಟನೆಗಳಿಂದಾಗಿ ಅನುಮಾನ ಉಂಟಾಗುತ್ತದೆ. ಏನು ಮಾಡುವುದು ಇಲ್ಲಿ ಏನು ಮಾಡಿದರು ನಡೆಯುತ್ತದೆ ಅಷ್ಟೇ.