ಪೌರ ಕಾರ್ಮಿಕರಿಂದ ಧರಣಿ ಸತ್ಯಾಗ್ರಹ

ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಲೋಡರ್ಸ್ ಮತ್ತು ಪೌರ ಕಾಮರ್ಿಕರ ನೇರ ನೇಮಕಾತಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಪೌರ ಕಾಮರ್ಿಕರಿಗಾಗುತ್ತಿರುವ ಅನ್ಯಾಯ ನೀತಿಯನ್ನು ಖಂಡಿಸಿ ಪೌರ ಕಾಮರ್ಿಕರು ಪುರಸಭೆ ಎದುರು ಟೆಂಟ್ ಹಾಕಿ ಅನಿಧರ್ಿಷ್ಟ ಅವಧಿಯವರೆಗೆ ಸತ್ಯಾಗ್ರಹ ಪ್ರಾರಂಭಿಸಿದರು.

     ಡಾ.ಬಿ.ಆರ್.ಅಂಬೇಡ್ಕರ ಮತ್ತು ಮಹಾತ್ಮ ಗಾಂದಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಮಟೆ ಬಾರಿಸುವ ಮೂಲಕ ಸತ್ಯಾಗ್ರಹ ಆರಂಭಿಸಿದರು. 

  ನೇರ ನೇಮಕಾತಿಯಿಂದಾಗಿ ನಿಜವಾದ ಪೌರಕಾಮರ್ಿಕರಿಗೆ ಅನ್ಯಾಯವಾಗುತ್ತಿದೆ. ಇಗಿನ ಪುರಸಭೆ ಮುಖ್ಯಾಧಿಕಾರಿಗಳು ಸರಕಾರದ ಆದೇಶದ ಪ್ರಕಾರ ನೇಮಕಾತಿ ಯಾದಿಯನ್ನು ಸಕರ್ಾರಕ್ಕೆ ಕಳುಹಿಸಿ ಕೋಡದೇ ಇರುವದರಿಂದ ನಮಗೆ ನೇಮಕಾತಿಯಲ್ಲಿ ಅನ್ಯಾಯವಾಗಿದೆ. 

   ಹಿಂದಿನ ಮುಖ್ಯಾಧಿಕಾರಿಗಳು ಪೌರಕಾಮರ್ಿಕರ ನೇಮಕಾತಿಗೆ ಶಿಫಾರಸ್ಸು ಮಾಡಿರುವ ಪಟ್ಟಿಗೂ ನೀವು ಮಾಡಿರುವ ಪಟ್ಟಿಗೂ ವ್ಯತ್ಯಾಸವಿರುವದೇಕೇ ಎಂದು ಈಗಿನ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡೆಸಿದರು.

   ಕೂಡಲೇ ಸರಕಾದ ಆದೇಶದ ಪ್ರಕಾರ ಹಿಂದಿನ ಮುಖ್ಯಾಧಿಕಾರಿ ಕುಮಾರ ರವರು ಶಿಫಾರಸ್ಸು ಮಾಡಿರುವ ಪಟ್ಟಿಯನ್ನು ಪುರಸ್ಕರಿಸಿ  ನಮಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲದೇ ಹೋದರೆ ನಮಗೆ ನ್ಯಾಯ ಸಿಗುವವರೆಗೆ ಸತ್ಯಾಗ್ರಹವನ್ನು ಅನಿಧರ್ಿಷ್ಟಕಾಲದವರೆಗೆ ಮುಂದುವರೆಸುವದಾಗಿ ಎಚ್ಚರಿಸಿದರು.

     ಬಸವರಾಜ ಸಣ್ಣಪ್ಪನವರ, ರವಿ ಮಾದರ, ನಾಗಪ್ಪ ಮಾದರ, ಉಡಚಪ್ಪ ಮಾದರ, ದುಂಡಪ್ಪ ಮೇವುಂಡಿ, ಸಂತೋಷ ಮಾದರ, ಗುಡ್ಡಪ್ಪ ಬಡಿಗೇರ ಸೇರಿದಂತೆ ಮತ್ತಿತರರು ಇದ್ದರು.