ಲೋಕದರ್ಶನ ವರದಿ
ಕೊಪ್ಪಳ 28: ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯವತಿಯಿಂದ ದೆವರಾಜ್ ಅರಸ್ ಕಾಲೋನಿಯಲ್ಲಿ ಶಿವರಾತ್ರಿ ಪ್ರಯುಕ್ತ ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ನಗರದ ಸಾರ್ವಜನಿಕ ಮೈದಾನ ತಾಲೂಕ ಕ್ರೀಡಾಂಗಣದಲ್ಲಿ ದಿ. 03 ಮತ್ತು 04ರಂದು ಸಂಜೆ 05:00ರಿಂದ 10:00 ಗಂಟೆಯವರೆಗೆ ದ್ವಾದಶ ಜ್ಯೋತಿಲರ್ಿಂಗ ದರ್ಶನ ಮತ್ತು ಯಕ್ಷಗಾನ ಬಯಲಾಟ ಕಾರ್ಯಕ್ರಮ ಜರುಗಲಿದೆ ಎಂದು ಬ್ರಹ್ಮಕುಮಾರಿ ರಾಜಯೊಗಿನಿ ಅಕ್ಕರವರು ಹೇಳಿದರು.
ಅವರು ಗುರುವಾರ ಇಲ್ಲಿನ ಪತ್ರಿಕಾಭವನದಲ್ಲಿ ಏರ್ಪಡಿಸಿದ ಪತ್ರಿಕಾಗೊಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಮ್ಮೆಲ್ಲರ ಪರಮಪಿತ ಪರಮಾತ್ಮ ಶಿವನ ಅವತರಣಿಯ ಶುಭಾಶಯಗಳನ್ನು ತಿಳಿಸಿದ ಅವರು ಶಿವರಾತ್ರಿ ಹಬ್ಬ ಆಚರಣೆಯಲ್ಲಿ ಜಾಗರಾಣಿ, ಉಪವಾಸದ ರಹಸ್ಯವೇನು? ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು, ಮತ್ತು ಅಥಪೂರ್ಣವಾಗಿ ಶಿವರಾತ್ರಿ ಕಾರ್ಯಕ್ರಮ ಆಚರಿಸಬೇಕು ಎಂದರು.
ಶಿವಯೊಗ ಮಹೊತ್ಸವ "ಓಂ ನಮಃ ಶಿವಾಯ" ಮಹಾಮಂತ್ರದ ಮಹಿಮೆ ನಂತರ ಪೂಜಾರಿಗಳ ಪೂಜಾರಿ ನಾಟಕ ಪ್ರದರ್ಶನ ಜರುಗಲಿದೆ. ಶಿವನ ಮಹಿಮೆ ನೃತ್ಯ ಜರುಗಲಿದೆ ಅದರಂತೆ ದಿ: 04ರಂದು ಶಿವರಾತ್ರಿ ಜ್ಞಾನೊದಯ ಉತ್ಸವ, ವಿಶೇಷ ಆಕರ್ಷಣೆಯಾಗಿ ಯಕ್ಷಗಾನ, ಬಯಲಾಟ, ಶಿವಪಂಚಾಕ್ಷರಿ ಮಹಿಮೆ, ಶಿವನಿಂದ ಮೃತ್ಯವಿನ ಮೆಲೆ ವಿಜಯ, ಯಕ್ಷದೆಗುಲ ಇವರಿಂದ ವಿವಿಧ ಕಾರ್ಯಕ್ರಮ ಜರುಗಲಿದೆ. ಶಾಂತಿಯಾತ್ರೆ, ಶಿವಲಿಂಗಗಳ ಶೊಭ ಯಾತ್ರೆ ಇತ್ಯಾದಿ ಕಾರ್ಯಕ್ರಮ ಸಾಗಲಿದೆ ಎಂದು ಬ್ರಹ್ಮಕುಮಾರಿ ರಾಜಯೊಗಿನಿ ಅಕ್ಕರವರು ಹೇಳಿದರು. ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಸ್ನೇಹಾ ಉಪಸ್ಥಿತರಿದ್ದರು.