ಭಕ್ತಿ ಆತ್ಮವಿಕಾಸಕ್ಕೆ ದಾರಿಯಾಗಬೇಕೆ ವಿನಃ ಬೀದಿಯ ಸರಕಾಗಬಾರದು: ಕಾ.ತ ಚಿಕ್ಕಣ್ಣ

Devotion should be a path to self-development and not become a street commodity: Ka.T. Chikkanna

ಲೋಕದರ್ಶನ ವರದಿ 

ಭಕ್ತಿ ಆತ್ಮವಿಕಾಸಕ್ಕೆ ದಾರಿಯಾಗಬೇಕೆ ವಿನಃ ಬೀದಿಯ ಸರಕಾಗಬಾರದು: ಕಾ.ತ ಚಿಕ್ಕಣ್ಣ 

    ಹಾವೇರಿ 22: ಭಕ್ತಿ ಪರಂಪರೆಯು ಶಾಸ್ತ್ರಕಾವ್ಯ ಮೀಮಾಂಸೆಯ ಹಿನ್ನಲೆಯಲ್ಲಿ ನೋಡುವ ಬದಲು ಜನ ಮಿಮಾಂಸೆಯ ಹಿನ್ನಲೆಯಲ್ಲಿ ಅವಲೋಕಿಸಬೇಕಾಗಿದೆ. ಸಮಾಜದಲ್ಲಿನ ತಾರತಮ್ಯ, ಶ್ರೇಷ್ಟ-ಕನಿಷ್ಟ, ಮೇಲು-ಕೀಳು, ಯುಧ್ಧದಂತಹ ಸಂದಿಗ್ಧ ಸ್ಥಿತಿಯಲ್ಲಿ ಭಾರತೀಯ ಭಕ್ತಿಪಂಥವು ಎದುರುಗೊಂಡಿತ್ತು. ಭಕ್ತಿಯು ಆತ್ಮಸಂತೋಷ, ಆತ್ಮ ವಿಕಾಸಕ್ಕೆ ದಾರಿಯಾಗಬೇಕೇ ವಿನಃ ಬೀದಿಯ ಸರಕಾಗಬಾರದು ಎಂದು ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇದರ ಅಧ್ಯಕ್ಷರಾದ ಕಾ.ತ ಚಿಕ್ಕಣ್ಣ ಅಭಿಪ್ರಾಯಪಟ್ಟರು. 

    ನಗರದ ಕೆ.ಎಲ್‌.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಾಹಾವಿದ್ಯಾಲಯ ಮತ್ತು ಕರ್ನಾಟಕ ಸರಕಾರದ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ‘ಭಾರತೀಯ ಭಕ್ತಿ ಪರಂಪರೆ ಮತ್ತು ಕರ್ನಾಟಕ’ ಎಂಬ ಎರಡು ದಿಗಳ ರಾಷ್ಟ್ರೀಯ ವಿಚಾರಸಂಕಿಣವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಟಿ. ಎಮ್ ಭಾಸ್ಕರ ಅವರು ಮಾತನಾಡಿ ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ದೇವರು, ಭೂತ, ಆತ್ಮದ ಕುರಿತಾಗಿ ಚರ್ಚೆ ಬಹಳ ನಡೆದಿದೆ. ಭಕ್ತಿ ಎನ್ನುವುದು ಸಂಕೀರ್ಣವಾದ ವಿಷಯ, ಈ ಭಕ್ತಿ ಚಳವಳಿ ಎನ್ನುವುದು ಸರ್ವವ್ಯಾಪಕವಾಗಿದೆ. ಭಕ್ತಿ ಪಂಥದ ನಿಲುವುಗಳು ಭಿನ್ನ ಭಿನ್ನವಾದ ಹರವುಗಳನ್ನು ಒಳಗೊಂಡಿದೆ. ಇಡೀ ಭಕ್ತಿ ಪರಂಪರೆಯನ್ನು ಅವಲೋಕಿಸಿದಾಗ ತಳಸಮುದಾಯದ ಪಾತ್ರ ಗಣನೀಯವಾದುದು ಎಂದರು. ನಂತರ ಹಾವೇರಿ ವಿಸ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್,ಟಿ ಬಾಗಲಕೋಟಿ ಮಾತನಾಡಿ ಭಕ್ತಿಯ ಹಲವು ಪ್ರಕಾರಗಳ ಜೊತೆಯಲ್ಲಿ ಇಂದು ನಾವು ಪರಿಸರ ಭಕ್ತಿಯನ್ನು ಸೇರಿಸಿಕೊಳ್ಳಬೇಕಾಗಿದೆ ಎಂದರು.  

        ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಲ್‌.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎಂ. ಸಿ ಕೊಳ್ಳಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾಗದ ಸತೀಶ ಕುಲಕರ್ಣಿ, ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇದರ ಸದಸ್ಯಕಾರ್ಯದರ್ಶಿಗಳಾದ ಕರಿಯಪ್ಪ ಎನ್, ವಿವಿಧ ಗೋಷ್ಠ ವಿದ್ವಾಂಸರುಗಳಾದ ಡಾ. ಗುರುಪಾದ ಮರಿಗುದ್ದಿ, ಶ್ರೀ ಶ್ರೀಧರ ಹಗಡೆ ಭದ್ರನ್, ಡಾ. ತಮಿಳ್ ಸೆಲ್ವಿ, ಡಾ. ಗೀತಾ ವಸಂತ, ಡಾ. ಕಾಂತೇಶ ಅಂಬಿಗೇರ, ಡಾ. ಗುಂಡೂರು ಪವನಕುಮಾರ, ಡಾ. ಭಾರತಿದೇವಿ, ಡಾ. ಶಿವರಾಮ ಶೆಟ್ಟಿ ಹಾಗೂ ವಿವಿದ ವಿದ್ವಾಂಸರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೀಪಕ ಕೊಲ್ಹಾಪುರೆ ಅತಿಥಿಗಳನ್ನು ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ಡಾ. ಸಂಜೀವ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಶ್ರೀದೇವಿ ದೊಡ್ಡಮನಿ ನಿರೂಪಿಸಿದರು, ಪ್ರೊ. ಹೇಮಂತ ಸಿ.ಎನ್ ವಂದಿಸಿದರು.