ಗಣೇಶನನ್ನು ಶ್ರದ್ಧಾ ಭಕ್ತಿಯಿಂದ ಮನೆಗೆ ಬರಮಾಡಿಕೊಂಡ ಭಕ್ತರು

ಗಣೇಶನನ್ನು ಶ್ರದ್ಧಾ ಭಕ್ತಿಯಿಂದ ಮನೆಗೆ ಬರಮಾಡಿಕೊಂಡ ಭಕ್ತರು  Devotees welcomed Lord Ganesha into their homes with faith and devotion

ಲಕ್ಷ್ಮೇಶ್ವರ, ಸೆ.15: ಭೂಲೋಕದಲ್ಲಿ ಅಗ್ರಗಣ್ಯವಾಗಿ ಪೂಜಿಸಲ್ಪಡುವ ಗಣೇಶನನ್ನು ಭಕ್ತರು ಶ್ರದ್ಧಾ-ಭಕ್ತಿಯಿಂದ ಮನೆಗೆ ಬರಮಾಡಿಕೊಂಡು ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿದರು.  ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು, ಶಾಲಾ-ಕಾಲೇಜುಗಳಲ್ಲಿಯೂ ಗಣೇಶನನ್ನು ಅದ್ದೂರಿಯಾಗಿ ಬರಮಾಡಿಕೊಂಡು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ.  

ಇದರ ಅಂಗವಾಗಿ ತಾಲೂಕಿನ ಶಿಗ್ಲಿ ಗ್ರಾಮದ ಧಾರ್ಮಿಕ ಮುಖಂಡ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪುರಸ್ಕೃತ ವೀರಣ್ಣ ಪವಾಡ ಅವರ ಕುಟುಂಬಸ್ಥರು ಸೋಮವಾರ ಬೆಳಗ್ಗೆ ಗಣೇಶನನ್ನು ಕುಟುಂಬ ಸಮೇತರಾಗಿ ಮನೆಗೆ ಬರಮಾಡಿಕೊಂಡು ಪೂಜೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ವೀರಣ್ಣ ಪವಾಡ ಅವರು, “ವಿಘ್ನ ನಿವಾರಕ ಗಣೇಶನು ಎಲ್ಲರ ಮನೆಗಳಲ್ಲಿರುವ ಕಷ್ಟ-ಕಾರ​‍್ಪಣಯಗಳನ್ನು ದೂರ ಮಾಡಿ, ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ತರಲಿ. ರಾಜ್ಯಕ್ಕೆ ಎದುರಾಗಿರುವ ಬರಗಾಲ ದೂರವಾಗಿ, ರೈತರ ಬದುಕಿನಲ್ಲಿ ಹೊಸ ಚೈತನ್ಯ ಮೂಡಲಿ. ಉತ್ತಮ ಮಳೆಯಾಗಿ ಸಮೃದ್ಧಿ ನೆಲೆಸಲಿ” ಎಂದು ಪ್ರಾರ್ಥಿಸಿದರು.  ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.