ಮುನವಳ್ಳಿ 07: ಶಿಕ್ಷಣ ಸಂಸ್ಥೆಗಳು ಅತ್ಯುತ್ತಮವಾಗಿ ಬೆಳೆಯಬೇಕಾದರೆ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಉತ್ತಮ ಹೊಂದಾಣಿಕೆಯೊಂದಿಗೆ ವಿದ್ಯಾಥರ್ಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ನಿರಂತರ ಚಿಂತನೆ ಮತ್ತು ಅವುಗಳ ಆನುಷ್ಠಾನದಿಂದ ಮಾತ್ರ ಸಾಧ್ಯ. ವಿದ್ಯಾಥರ್ಿಗಳ ಪ್ರಗತಿಯಲ್ಲಿ ಸಂಸ್ಥೆಗಳ ಪ್ರಗತಿ ಅಡಗಿದೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಗಜಾನನ ವಿದ್ಯಾವರ್ಧಕ ಮತ್ತು ಜನಕಲ್ಯಾಣ ಟ್ರಸ್ಟ ಸಂಚಾಲಿತ ಕುಮಾರೇಶ್ವರ ವಿದ್ಯಾ ಮಂದಿರದಲ್ಲಿ ಜ. 6 ರಂದು ಜರುಗಿದ ಪಾಲಕರ ಸಮ್ಮೇಳನ ಹಾಗೂ ವಾಷರ್ಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆನಂದ ಮಾಮನಿ ಇತ್ತೀಚಿನ ದಿನಗಳಲ್ಲಿ ವಿದ್ಯಾಥರ್ಿಗಳು ಮೊಬೈಲ್ ಮತ್ತು ಟಿ.ವಿ. ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸಪ್ಗಳ ಚಟಕ್ಕೆ ಬಲಿಯಾಗುತ್ತಿದ್ದು, ಅಮೂಲ್ಯವಾದ ವಿದ್ಯಾಥರ್ಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಉಜ್ವಲ ಭವಿಷ್ಯದ ಉನ್ನತ ಗುರಿ ಹೊಂದಿ ಉತ್ತಮ ಶಿಕ್ಷಣ ಪಡೆದು ರಾಷ್ಟ್ರದ ಭವಿಷ್ಯ ನಿಮರ್ಿಸಬೇಕು. ಪಾಲಕರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಿ ಅವರ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಘೋಡಗೇರಿಯ ಮಲ್ಲಯ್ಯ ಮಹಾಸ್ವಾಮಿಗಳು ಕಲಿಯುವ ಉತ್ಕಟವಾದ ಇಚ್ಛೆಯನ್ನು ವಿದ್ಯಾಥರ್ಿಗಳು ಹೊಂದಿರಬೇಕು. ಮಹಾತ್ಮರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿಜ್ಞಾನಿಗಳಾಗಿ, ತಾಂತ್ರಿಕ ತಜ್ಞರಾಗಿ ದೇಶಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದರು.
ಅತಿಥಿಯಾಗಿ ಆಗಮಿಸಿದ ಕೆ.ಪಿ.ಟಿ.ಸಿ.ಎಲ್. ಸೂಪರಿಂಟೆಂಡಿಂಗ್ ಇಂಜನಿಯರ ಎಸ್. ಪಿ. ಸಕ್ರಿ ಮಾತನಾಡಿದರು. ಶಿಂದೋಗಿಯ ಮುಕ್ತಾನಂದ ಶ್ರೀಗಳು ಮಾತನಾಡಿದರು.
ಎಸ್.ಎಸ್.ಎಲ್.ಸಿ.ಯಲ್ಲಿ ಕೇಂದ್ರಕ್ಕೆ ಪ್ರಥಮಸ್ಥಾನ ಪಡೆದ ಪ್ರಿಯಾ ಸಣಕಲ್ ಹಾಗೂ ಯೋಗಾಸನದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಜು ಬೆಳ್ಳಿಕುಪ್ಪಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಬಹುಮಾನ ನೀಡಲಾಯಿತು.
ಶಿಂದೋಗಿ ಗ್ರಾಮ ಪಂಚಾಯತ ಅಧ್ಯಕ್ಷ ಯಲ್ಲಪ್ಪ ಹಲಗಿ, ಸಂಸ್ಥೆಯ ಚೇರಮನ್ ಶ್ರೀಕಾಂತ ಮಿರಜಕರ, ಸದಸ್ಯರಾದ ವಿಜಯಕುಮಾರ ವನಕುದರಿ, ಸುಬ್ಬರಾವ್ ಭಂಡಾರಿ, ಯಶವಂತ ಗೌಡರ, ಶ್ರೀಶೈಲ ಗೋಮಾಡಿ, ಅಶೋಕ ರೇಣಕೆ, ಪ್ರಕಾಶ ಕಡಕೋಳ, ರಾಮನಗೌಡ ಗೀದಿಗೌಡ್ರ, ಮೃತ್ಯುಂಜಯ ಹಂಪಣ್ಣವರ ಇತರರು ಇದ್ದರು.
ಮುಖ್ಯೋಪಾಧ್ಯಾಯ ಶಂಕರ ರಾಠೋಡ ಸ್ವಾಗತಿಸಿದರು. ನಿರೂಪಣೆಯನ್ನು ಎಮ್. ಎಮ್. ಲಕ್ಕಣ್ಣವರ, ವಂದನಾರ್ಪಣೆಯನ್ನು ಎ. ಐ. ಶಿರಸಂಗಿ ಮಾಡಿದರು.