ಲೋಕದರ್ಶನ ವರದಿ
ಕುಕನೂರು 21: ಗ್ರಾಮಗಳ ಸ್ವಚ್ಛತೆಗೆ ಗ್ರಾಮ ಪಂಚಾಯತಿಗಳ ಜೊತೆ ಗ್ರಾಮಸ್ಥರು ಸಹಕಾರ ನೀಡಿದರೇ ಗ್ರಾಮವನ್ನು ಸ್ವಚ್ಛವಾಗಿ ಇಡಲು ಅನುಕೂಲವಾಗುತ್ತದೆ ಎಂದು ಯರೇಹಂಚಿನಾಳ ಗ್ರಾಪಂ ಪಿಡಿಓ ಅಮೀರ್ ನಾಯಕ ಹೇಳಿದರು.
ತಾಲೂಕಿನ ಸಿದ್ನೇಕೊಪ್ಪ ಗ್ರಾಮದಲ್ಲಿ ಸಿದ್ದೇಶ್ವರ ಕಾತರ್ಿಕೋತ್ಸವ ಅಂಗವಾಗಿ ಗ್ರಾಪಂ ಹಾಗೂ ಸ್ಥಳೀಯ ಯುವಕರ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳಿಯ ಯುವಕರು ಅತ್ಯಂತ ಹುಮ್ಮಸ್ಸಿನಿಂದ ಇಂದು ಗ್ರಾಮವನ್ನು ಸ್ವಚ್ಛ ಮಾಡಲು ಮುಂದೆ ಬಂದಿದ್ದು ಉತ್ತಮ ಬೆಳವಣಿಗೆ ಇದರಿಂದ ಗ್ರಾಮವು ಸುಂದರವಾಗಿರಲು ಸಹಕಾರಿಯಾಗಿರುತ್ತದೆ ಹಾಗೂ ನಮ್ಮ ಗ್ರಾಪಂ ಸಿಬ್ಬಂದಿಗಳಿಗೆ ಸಹಕಾರವನ್ನು ನೀಡಿದಂತಾಗುತ್ತದೆ ಇದರಿಂದ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವನ್ನು ಮುಡಿಸಿದಂತಾಗುತ್ತದೆ ಎಂದರು.
ಗ್ರಾಪಂನಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಕಾಲಾವದಿಯೊಳಗೆ ಮನೆ ನಿಮರ್ಿಸಿಕೊಳ್ಳುವಂತೆ ಹಾಗೂ ಅದಕ್ಕೆ ಬೇಕಾದ ಕಾನೂನು ಮಾಹಿತಿಯನ್ನು ನೀಡಿ ಶೀಘ್ರದಲ್ಲಿ ಮನೆ ನಿಮರ್ಿಸಿಕೊಳ್ಳುವಂತೆ ಆವಾಸ್ ಮಿತ್ರ ರವಿ ಛಲವಾದಿ ಫಲಾನುಭವಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಗ್ರಾಪಂ ಸದಸ್ಯರು, ಯುವಕರಾದ ಈಶಯ್ಯ ಸಾಲಿಮಠ, ರವಿ ಕಮತರ, ಕೊಟ್ರಯ್ಯ ಹಿರೇಮಠ, ದೇವಪ್ಪ ರಾಜೂರ, ಬಸವರಾಜ ತುಕ್ಕಣ್ಣನವರ, ಈರಪ್ಪ ಮನಗೂಳಿ, ರವಿ ಹನವಾಳ, ಸೇರಿದಂತೆ ಕುಕನೂರು ಹಾಗೂ ಸುತ್ತ ಮುತ್ತಲ ಗ್ರಾಮದ ಯುವಕರು ಹಾಜರಿದ್ದರು.