ಆತ್ಮಾವಲೋಕನ ಮನೋಭಾವ ಬೆಳೆಸಿಕೊಳ್ಳಿ: ಚಿಕ್ಕಣ್ಣ

ಲೋಕದರ್ಶನ ವರದಿ

ವಿಜಯಪುರ20: ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಇದಕ್ಕೆ ಕನಕದಾಸರ ಚರಿತ್ರೆ ಓದುವುದು ಅವಶ್ಯಕ ಎಂದು ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ವಿದ್ಯಾಥರ್ಿನಿಯರಿಗೆ ಕಿವಿಮಾತು ಹೇಳಿದರು.

         ಮಹಿಳಾ ವಿವಿ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನಕ ಅಧ್ಯಯನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ 'ಕನಕದಾಸರನ್ನು ನಾನೇಕೆ ಓದಬೇಕು' ವಿಷಯದ ಕುರಿತ ಮೂರು ದಿನದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

     ನಿಸರ್ಗದೊಂದಿಗೆ ಬೆರೆತು ಕನಕದಾಸರನ್ನು ನೆನೆದುಕೊಂಡು ಅವರ ಸಾಹಿತ್ಯವನ್ನು ಅರಿತು ನಮ್ಮ ಬದುಕಿನ ಆಗು-ಹೋಗುಗಳಲ್ಲಿ ಅದನ್ನು ಕಂಡುಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಮಾತನಾಡಿ, ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೆ ನಮ್ಮತನವನ್ನು ನಾವು ಉಳಿಸಿ ಬೆಳೆಸಿಕೊಳ್ಳಲು ಈ ಶಿಬಿರ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದರು.

           ಅವಕಾಶ ಸಿಕ್ಕಾಗ ಅದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಮನೆಯಿಂದ ಹೊರಗಡೆ ಕಾಲಿಟ್ಟು ಸ್ವತಂತ್ರವಾಗಿ ಬದುಕಲು ನಿಮ್ಮ ಚಿಂತನೆಯನ್ನು ವಿಕಸಿಸಿಕೊಳ್ಳುವ ಹಾಗೂ ಎಲ್ಲದರಲ್ಲೂ ನಿಮ್ಮ ಶಕ್ತಿಯನ್ನು ಪ್ರಯೋಗಿಸಲು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ವಿದ್ಯಾಥರ್ಿನಿಯರಿಗೆ ಸಲಹೆ ನೀಡಿದರು.

      ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿ ಒಳಗೊಂಡಂತೆ 25 ಮಹಿಳಾ ಕಾಲೇಜುಗಳ ವಿದ್ಯಾಥರ್ಿನಿಯರು, ವಿವಿಧ ಕಾಲೇಜುಗಳ ಅಧ್ಯಾಪಕರು, ಮಹಿಳಾ ವಿವಿಯ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಆಗಮಿಸಿದ್ದರು. 

ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. 

  ಮತ್ತು ವಿದ್ಯಾಥರ್ಿನಿಯರು ಮೂರು ದಿನದ ಶಿಬಿರದ ಕುರಿತ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರದ ಸಂಚಾಲಕ ಪ್ರೊ.ಎ.ಎಂ.ಶಿವಸ್ವಾಮಿ, ಸಂಯೋಜಕ ಡಾ.ಜಿ.ಎನ್. ಕಿರಣ ವೇದಿಕೆ ಮೇಲಿದ್ದರು.

    ಕಾರ್ಯಕ್ರಮದಲ್ಲಿ ವಿದ್ಯಾಥರ್ಿನಿ ಮೇಘಶ್ರಿ ಸ್ವಾಗತಿಸಿದರು. ವಿದ್ಯಾಥರ್ಿನಿ ಶಭಾನಾ ನಿರೂಪಿಸಿ, ವಂದಿಸಿದರು.