ಬೆಂಗಳೂರು, ಜೂ 4,ತಮ್ಮ ಬದುಕಿನಾದ್ಯಂತ ಕನ್ನಡಿಗರ ಬದುಕನ್ನು ಹಸನು ಮಾಡಲು ದುಡಿದ ನಾಡಿನ ದೊರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಶ್ಲಾಘಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಕ್ಕೆ ಟ್ವೀಟ್ ಮೂಲಕ ಶುಭಕೋರಿರುವ ದೇವೇಗೌಡ, ಮೈಸೂರು ಮತ್ತು ಬೆಂಗಳೂರು ದೇಶದ ಮುಂಚೂಣಿ ನಗರಗಳಾಗಿ ರೂಪುಗೊಳ್ಳಲು ನಾಲ್ವಡಿಯವರ ದೂರದೃಷ್ಟಿಯೇ ಕಾರಣ ಎಂದು ಹೇಳಿದ್ದಾರೆ. ನಾಲ್ವಡಿ ಒಡೆಯರ್ ಅವರನ್ನು ಸ್ಮರಿಸಿ ಅವರಂತೆಯೇ ನಿಸ್ವಾರ್ಥವಾಗಿ ನಾಡಿಗಾಗಿ ದುಡಿಯುವ ಛಲವನ್ನು ಮೈಗೂಡಿಸಿಕೊಳ್ಳೋಣ ಎಂದು ಕರೆ ನೀಡಿದ್ದಾರೆ..