ಲೋಕದರ್ಶನ ವರದಿ
ರಾಮದುರ್ಗ 09: ದೇವಲ ಮಹರ್ಷಿ ಜಯಂತಿಯ ಅಂಗವಾಗಿ ಪಟ್ಟಣದ ನೇಕಾರ ಸಮುದಾಯದ ನೇತೃತ್ವದಲ್ಲಿ ದೇವಲ ಮಹರ್ಷಿಗಳ ಭಾವಚಿತ್ರ ಹಾಗೂ ಮೂರ್ತಿಯ ಮೆರವಣಿಗೆ, ಸುಮಂಗಲೆಯರ ಆರತಿಯೊಂದಿಗೆ ಪಟ್ಟಣದ ನೇಕಾರಪೇಠೆಯಲ್ಲಿ ವಿಜ್ರಂಭನೆಯಿಂದ ಜರುಗಿತು.
ದೇವಾಂಗ ಸಮಾಜದ ನೇತೃತ್ವದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ನಿಂಗಾಪೂರ ಪೇಟೆಯ ಈಶ್ವರ ದೇವಸ್ಥಾನದಿಂದ ಪಾಲಿಕೆ ಉತ್ಸವ ಹಾಗೂ ದೇವಾಂಗ ಋಷಿ ಮೂರ್ತಿ ಮೆರವಣಿಗೆ ನೇಕಾರ ಪೇಟೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಝಾಂಜ್ ಮೇಳ ಹಾಗೂ ಭಜನಾ ಮೇಳದವರು ಉತ್ಸವಕ್ಕೆ ಕಳೆ ತಂದರು. ನೇಕಾರ ಸಮಾಜಸ್ಥರು ಒಂದು ದಿನ ತಮ್ಮ ಉದ್ಯೋಗ ಬಂದ್ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಮಾಜದ ಹಿರಿಯರಾದ ವಿಠ್ಠಲ ಮುರುಡಿ, ಏಕನಾಥ ಕೊಣ್ಣೂರ, ಶಂಕ್ರಣ್ಣ ಮುರುಡಿ, ಮನೋಹರ ಹೊನ್ನುಂಗರ, ಶಿವಾನಂದ ಬಳ್ಳಾರಿ, ಕುಬೇರ ಗರಡಿಮನಿ, ನಾರಾಯಣ ಹೂಲಿ ಮತ್ತಿತರರು ಉಪಸ್ಥಿತರಿದ್ದರು.
ತೊಟ್ಟಿಲೋಸ್ಸವ: ಇಲ್ಲಿನ ರಾಧಾಪೂರ ಪೇಟೆಯ ದೇವಲ ಮಹರ್ಷಿ ದೇವಸ್ಥಾನದಲ್ಲಿ ದೇವಲ ಮಹರ್ಷಿ ಜಯಂತಿ ಅಂಗವಾಗಿ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ತೊಟ್ಟಿಲ ಪದಗಳನ್ನು ಹಾಡಿ ಸಂಭ್ರಮಿಸಿ, ಮಹರ್ಷಿಗಳ ಸಾಮಾಜಿಕ ಕಾರ್ಯಗಳನ್ನು ಕೊಂಡಾಡಿದರು.