ಕೈಗೆ ಮುದ್ರೆ ಹಾಕಲ್ಪಟ್ಟ ದಂಪತಿ ಮೆಜೆಸ್ಟಿಕ್ ನಲ್ಲಿ ಪತ್ತೆ

ಬೆಂಗಳೂರು, ಮೇ 25,ಕೊರೊನಾ  ಸೋಂಕು ತಡೆಯಲು ‌ಕೈಗೆ ಮುದ್ರೆ ಹಾಕಿ ಕ್ವಾರಂಟೈನ್ ನಲ್ಲಿರಿಸಿದ್ದರೂ ಅದನ್ನು  ಉಲ್ಲಂಘಿಸಿ ಮೆಜೆಸ್ಟಿಕ್ ನಲ್ಲಿ ಸುತ್ತಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಹೈದರಾಬಾದ್‍ನಿಂದ  ಆಗಮಿಸಿರುವ ದಂಪತಿ ಕ್ವಾರಂಟೈನ್ ಸೀಲ್ ಇದ್ದರೂ ಮೆಜೆಸ್ಟಿಕ್‍ನಲ್ಲಿ ಓಡಾಡಿದ್ದಾರೆ.  ಚಿತ್ರದುರ್ಗಕ್ಕೆ ತೆರಳಲು ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿದ್ದ   ದಂಪತಿ ಕೈಯಲ್ಲಿ ಸೀಲ್‍ನೋಡಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಗಾಬರಿಗೊಳಗಾಗಿದ್ದಾರೆ.  ಕೊನೆಗೆ ಆಟೋ ಮೂಲಕ ಜಯನಗರ ಸೌತ್ ಅಂಡ್‍ಗೆ ದಂಪತಿ ತೆರಳಿದ್ದಾರೆ.
ಇದಲ್ಲದೆ ಹೋಮ್ ಕ್ವಾರಟೈನ್ ಆಗಿದ್ದ ಮತ್ತೊಬ್ಬ  ವ್ಯಕ್ತಿ  ಕೂಡ ಮೆಜೆಸ್ಟಿಕ್ ನಲ್ಲಿ ಇಂದು ಪತ್ತೆಯಾಗಿದ್ದಾನೆ. ರೈಲಿಳಿದು ತಮ್ಮ ತಮ್ಮ  ಊರಿಗೆ ಹೋಗಲು ಹೊರ ರಾಜ್ಯದವರು ಮೆಜೆಸ್ಟಿಕ್ ಕಡೆ ಬರುತ್ತಿದ್ದಾರೆ. ಹಾಗೆಯೇ ಉತ್ತರ  ಪ್ರದೇಶದಿಂದ ಬಂದಿರುವ ವ್ಯಕ್ತಿಯೊಬ್ಬ ಬಾಗಲಕೋಟೆ ಬಸ್ ಹತ್ತಲು ಬಂದಿದ್ದಾನೆ.ಈ  ವೇಳೆ ಆತನ ಕೈಯಲ್ಲಿ ಕ್ವಾರಂಟೈನ್ ಸೀಲ್ ನೋಡಿದ ಕೆಎಸ್ ಆರ್ ಟಿಸಿ ಸಿಬ್ಬಂದಿ ಖಾಸಗಿ  ವಾಹನದಲ್ಲಿ ತೆರಳುವಂತೆ ಹೇಳಿದ್ದಾರೆ. ಅಲ್ಲದೆ ಮೆಜೆಸ್ಟಿಕ್ ನಿಂದ ಹೊರ ಭಾಗದಲ್ಲೇ  ಪೊಲೀಸರು ಕೂಡ ಆತನನ್ನು ತಡೆದು ಕ್ವಾರಂಟೈನ್‌ಗೆ ಕಳುಹಿಸಿದರು.