ದೊಡ್ಡ ಮೊತ್ತ ಕಲೆ ಹಾಕಿದರೂ, ಸೋತಿದ್ದು ಬೇಸರ ತಂದಿದೆ: ವಿರಾಟ್

 ಹ್ಯಾಮಿಲ್ಟನ್, ಫೆ.5 : ನ್ಯೂಜಿಲೆಂಡ್ ವಿರುದ್ಧ ದೊಡ್ಡ ಮೊತ್ತ ಕಲೆ ಹಾಕಿದರೂ, ಗೆಲ್ಲುವಲ್ಲಿ ವಿಫಲವಾಗಿದ್ದು ಬೇಸರ ತಂದಿದೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. 

ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಇನ್ನೂ 11 ಎಸೆತಗಳಲ್ಲಿ ಬಾಕಿ ಇರುವಂತೆ ನಾಲ್ಕು ವಿಕೆಟ್ ಗಳ ಜಯ ದಾಖಲಿಸಿದೆ. “ಕಿವೀಸ್ ತಂಡ ಭರ್ಜರಿ ಪ್ರದರ್ಶನ ನೀಡಿದೆ. 348 ರನ್ ಗಳ ಗುರಿ ನ್ಯೂಜಿಲೆಂಡ್ ತಂಡಕ್ಕೆ ಸವಾಲುದಾಯಕ ಎಂದು ನಾವು ಭಾವಿಸಿದ್ದೇವು. ನಾವು ಬೌಲಿಂಗ್ ನಲ್ಲಿ ಉತ್ತಮ ಆರಂಭ ಕಂಡೆವು. ಟಾಮ್ ಲಾಥಮ್ ಹಾಗೂ ರಾಸ್ ಟೇಲರ್ ಅವರ ಭರ್ಜರಿ ಆಟ ನಮ್ಮಿಂದ ಪಂದ್ಯವನ್ನು ಕಸಿದುಕೊಂಡಿತು. ಮಧ್ಯದ ಓವರ್ ಗಳಲ್ಲಿ ಅವರನ್ನು ತಡೆಯುವುದು ಕಷ್ಟವಾಗಿತ್ತು” ಎಂದು ತಿಳಿಸಿದ್ದಾರೆ. 

“ನಾವು ಕ್ಷೇತ್ರರಕ್ಷಣೆಯನ್ನು ಉತ್ತಮವಾಗಿ ಮಾಡಿದ್ದೇವೆ. ಆದರೂ, ಇನ್ನು ಉತ್ತಮವಾಗಿ ಕ್ಷೇತ್ರರಕ್ಷಣೆ ಮಾಡುವ ಅವಶ್ಯಕತೆ ಇದೆ. ಗುಣಾತ್ಮಕ ರೀತಿಯಿಂದ ಮಧ್ಯದ ಓವರ್ ಗಳಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ” ಎಂದಿದ್ದಾರೆ. 

“ಟಿ-20 ಸರಣಿಯಲ್ಲಿ ಸೋಲು ಕಂಡ ಬಳಿಕ, ನ್ಯೂಜಿಲೆಂಡ್ ಭರ್ಜರಿಯಾಗಿ ಪುಟಿದ್ದೆದಿದೆ. ಆತಿಥೇಯ ತಂಡದ ಆಟಗಾರರು ಸಹ ಉತ್ತಮವಾಗಿ ಆಡಿದ್ದಾರೆ. ಮುಂದಿನ ಎರಡು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವ ಕನಸು ನಮ್ಮದಾಗಿದೆ” ಎಂದು ವಿರಾಟ್ ಹೇಳಿದ್ದಾರೆ.