ಸಾಲಮನ್ನಾ ಮಾಡಿದರೂ ಜನ ಬೆನ್ನಿಗೆ ನಿಲ್ಲಲಿಲ್ಲ: ಹೆಚ್ಡಿಕೆ ಬೇಸರ

ರಾಮನಗರ, ಮೇ.19, ಮುಖ್ಯಮಂತ್ರಿಯಾಗಿದ್ದಾಗ  ರೈತರ ಸಾಲಮನ್ನಾ ಮಾಡಿ ರೈತರ ನೆರವಿಗೆ, ಬೆನ್ನಿಗೆ ನಿಂತರೂ ಸಹ ಜನ ತಮ್ಮನ್ನು ಕೈ ಹಿಡಿಯಲಿಲ್ಲ  ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ,  ಅಸಮಾಧಾನ ಹೊರಕಾಕಿದ್ದಾರೆ. ಆದರೆ ಹಾಲಿ  ಬಿಜೆಪಿ ಸರ್ಕಾರ   ಕೇವಲ ಭರವಸೆ ನೀಡುವುದಕ್ಕೆ ಸೀಮಿತವಾಗಿದೆ ಇದರಿಂದ ಯಾರಿಗೂ  ಒಂದು ಪೈಸೆ ಪ್ರಯೋಜನವಿಲ್ಲ  ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಳೆಯಿಂದ ಹಾನಿಯಾಗಿರುವ ಚನ್ನಪಟ್ಟಣ ತಾಲ್ಲೂಕಿನ ಗೋವಿಂದಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಹಾನಿಗೆ ತುತ್ತಾಗಿ ನೂರ ಐವತ್ತು ಎಕರೆ ಬಾಳೆ ತೋಟಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಕೆಲವು ರೈತರ ಮನೆಗಳು ಜಖಂ ಗೊಂಡಿರುವ ಪ್ರಕೃತಿ ವಿಕೋಪ  ಅನಾಹುತದಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಅವರೆಲ್ಲರಿಗೂ ತಾವು ವೈಯಕ್ತಿಕವಾಗಿ ಸಹಾಯ ಮಾಡಿವುದಾಗಿ ಭರವಸೆ ನೀಡಿದರು. ರೈತರು ಸಂಕಷ್ಟದಲ್ಲೇ ಬೇಸಾಯ ಮಾಡುತ್ತಿದ್ದಾರೆ . ವಿಶೇಷವಾಗಿ  ಕಿಡ್ನಿ ವೈಪಲ್ಯಕ್ಕೆ ತುತ್ತಾಗಿದ್ದ ಕುಮಾರ್ ಎಂಬಾತ ಡ್ರೈವರ್ ವೃತ್ತಿ ಸಾಧ್ಯವಾಗದ ಹಿನ್ನೆಲೆಯಲ್ಲಿ  ಭೂಮಿ ಗುತ್ತಿಗೆ ಪಡೆದು ಬಾಳೆ ಬೆಳೆಗೆ ಮುಂದಾಗಿದ್ದರು ಅದೆಲ್ಲವೂ ನಾಶವಾಗಿದೆ. ಒಂದು ಎಕರೆ ಬಾಳೆ ಬೆಳೆಯಲು 80 ಸಾವಿರದಿಂದ ಲಕ್ಷ ಖರ್ಚಾಗುತ್ತೆ ಪ್ರಕೃತಿ ವಿಕೋಪಕ್ಕೆ ಸರ್ಕಾರ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಹಾಗಾಗಿ ಸರ್ಕಾರ ಹೆಚ್ಚು ಪರಿಹಾರ ನೀಡುವಂತೆ ಒತ್ತಾಯಿಸಿದರು.ಆಟೋ ಚಾಲಕರು ಗಳಿಗೆ ತಲಾ ಐದು ಸಾವಿರ ಪರಿಹಾರ ಅಂತಾ ಘೋಷಣೆ ಮಾಡಿ ಆದರೆ ಇಲಾಖೆ ಗೆ  20 ಕೋಟಿ ಹಣ ಮಂಜೂರು ಮಾಡಿ ವಿತರಿಸುವಂತೆ ಸೂಚಿಸಿದ್ದಾರೆ. ನಿಯಮಗಳ ಪ್ರಕಾರ  ಯಾವುದೇ ಆಟೋ ಡ್ರೈವರ್ ಗಳಿಗೆ ಪರಿಹಾರದ ಹಣ ದೊರಕುತ್ತಿಲ್ಲ  ಆದರೆ  ಸ್ಥಿತಿವಂತರನ್ನ ಗುರುತಿಸಿ ಕೊಡದಂತೆ ಹೇಳಿದ್ದಾರೆ ಆಟೋ ಡ್ರೈವರ್ ಗಳಲ್ಲಿ ಸ್ಥಿತಿವಂತರನ್ನ ಗುರ್ತಿಸುವುದು ಹೇಗೆ ಎಂದು ಅವರು ವ್ಯಂಗ್ಯವಾಡಿದರು.