ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ವಿನ್ಯಾಸ, ವಿಶ್ಲೇಷಣೆಯ ಕುರಿತು ವಿನ್ಯಾಸ ಸ್ಪರ್ಧೆ

Design competition on design and analysis of public transport system

ಬೆಳಗಾವಿ 22: ಇನ್ಸ್ಟಟ್ಯೂಟ್ ಆಫ್ ಇಂಜಿನಿಯರ್ಸ್‌ (ಭಾರತ) ಬೆಳಗಾವಿ ಲೋಕಲ್ ಸೆಂಟರ್ ಪ್ರಾಯೋಜಿತ ಅಡಿಯಲ್ಲಿ ಬೆಳಗಾವಿ ನಗರಕ್ಕೆ ಪರಿಣಾಮಕಾರಿ, ಆರ್ಥಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ವಿನ್ಯಾಸ ಮತ್ತು ವಿಶ್ಲೇಷಣೆ " ಎಂಬ ವಿಷಯದ ಕುರಿತು ವಿನ್ಯಾಸ ಸ್ಪರ್ಧೆಯನ್ನು ಮಾರ್ಚ್‌ 20, 2025 ರಂದು ಬೆಳಗಾವಿಯ ಎಸ್‌. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಯೋಗದೊಂದಿಗೆ ಎಸ್‌.ಜಿ.ಬಿ.ಐ.ಟಿ ಆಯೋಜಿಸಲಾಗಿತ್ತು.  

ಎಸ್ಜಿಬಿಐಟಿಯ ಚೇರ್ಮನ್ರಾದ ಡಾ.ಎಫ್‌.ವಿ. ಮಾನ್ವಿ ಅವರು ಈ ಕಾರ್ಯಕ್ರಮವನ್ನು ಉದ್ಟಾಟಿಸಿದರು. ಪ್ರಾಚಾರ್ಯ ಡಾ. ಬಿ.ಆರ್‌. ಪಟಗುಂದಿ ಅವರು ಈ ಕಾರ್ಯಕ್ರಮವನ್ನುದ್ದೇಶಿಸಿ ಸಾರ್ವಜನಿಕ ಸಂಚಾರ ಮತ್ತು ವಾಯುಮಾಲಿನ್ಯ ಸಮಸ್ಯೆ ಬಗ್ಗೆ ಹಾಗೂ ಅದನ್ನು ಪರಿಹರಿಸುವ ಕುರಿತು ಸಲಹೆಗಳನ್ನು ನೀಡಿದರು.  

ಅಧ್ಯಕ್ಷೀಯ ನುಡಿಗಳನ್ನಾಡಿದ ಎಸ್‌.ವೈ.ಕುಂದರಗಿ ಅವರು ರೋ ಬೀಲ್ಡಿಂಗ್ ಫ್ಲೈ-ಓವರ್ಗಳಲ್ಲಿ ಆಧುನಿಕ ಬದಲಾವಣೆಯ ಅಗತ್ಯತೆ, ಬೆಳಗಾವಿಯ ನಗರದ ಸಂಚಾರ ಸಮಸ್ಯೆಗಳನ್ನು ಕಡಿಮೆ ಮಾಡುವ ಆಧುನಿಕ ತಂತ್ರಾಂಶಗಳು ಮತ್ತು ಆರ್ಟಿಫಿಶೀಯಲ್ ಇಂಟಲಿಜೆನ್ಸ್‌ ತಂತ್ರಜ್ಞಾನವನ್ನು ಬಳಸಿಕೊಂಡು ವಾಯುಮಾಲಿನ್ಯದಿಂದ ಹೇಗೆ ಹೊರಬರಬಹುದೆಂದು ಹೇಳಿದರು. ಇನ್ನೋರ್ವ ಅತಿಥಿಗಳಾದ ವಿಲಾಸ್ ಬಾದಾಮಿ ಅವರು ವಿಜೇತರಾದವರಿಗೆ ಬಹುಮಾನ ಕೊಡುವುದರ ಜೊತೆಗೆ ಕಾರ್ಯಕ್ರಮವನ್ನುದ್ದೇಶಿಸಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೇಗೆ ಕಾರ್ಯ ನಿರ್ವಹಿಸಬೇಕೆಂದು ವಿದ್ಯಾರ್ಥಿಗಳನ್ನು ಪ್ರೇರೆಪಿಸಿದರು.   

ಬೆಳಗಾವಿಯ ಎಸ್‌.ಜಿ.ಬಿ.ಐ.ಟಿ ಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ನವೀನ ಚಿಂತನೆಯೊಂದಿಗೆ ವಿಭಿನ್ನ ಆಲೋಚನೆಗಳು ಮತ್ತು ಕೌಶಲ್ಯಗಳನ್ನು ಹೊಂದಿದ್ದು, ಅವರನ್ನು ಆಧುನಿಕ ಉಪಕರಣಗಳು ಮತ್ತು ಕೃತಕ ಬುದ್ದಿಮತ್ತೆ ಜ್ಞಾನದಿಂದ ಸಜ್ಜುಗೊಳಿಸಬೇಕೆಂಬುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.  

ಈ ಕಾರ್ಯಕ್ರಮದಲ್ಲಿ ಎಸ್‌.ಜಿ.ಬಿ.ಐ.ಟಿ ಯ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಈ ಕಾರ್ಯಕ್ರಮದ ಸಂಯೋಜಕರಾದ ಡಾಽಽ ಸುಪ್ರೀತ್ ಮಾಳಗಿ ಹಾಗೂ ಸಹಪ್ರಾಧ್ಯಾಪಕರಾದ ಗುರುದತ್ತ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾಽಽ ಆರ್‌. ಎಮ್‌. ಗಲಗಲಿ ಅವರು ಅಭಿನಂದಿಸಿದರು.