‘ನಾ ನಿನ್ನ ಬಿಡಲಾರೆ' ಎನ್ನುತ್ತಿರುವ ಗುಲ್ಬರ್ಗ ಮೂಲದ ಅಂಬಾಲಿ ಭಾರತಿ

ಗುಲ್ಬರ್ಗ ಮೂಲದ ಯುವ ಪ್ರತಿಭೆ ಅಂಬಾಲಿ ಭಾರತಿ ನಾಯಕಿಯಾಗಿ ನಟಿಸುವ ಜೊತೆಗೆ ತಾಯಿ ಶ್ರೀಮತಿ ಭಾರತಿ ಬಾಳೆ ಸಹಕಾರದೊಂದಿಗೆ ನಿರ್ಮಾಣ ಮಾಡಿರುವ ಚಿತ್ರ ‘ನಾ ನಿನ್ನ ಬಿಡಲಾರೆ'. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಈ ಚಿತ್ರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಹೌದು ಇತ್ತೀಚೆಗೆ ಈ ಚಿತ್ರದ ಟೀಸರ್ ನ್ನು ನಟ ಶರಣ್ ಬಿಡುಗಡೆ ಮಾಡಿ, ಹೊಸ ತಂಡಕ್ಕೆ ಸಾಥ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶರಣ್ 'ನಿರ್ದೇಶಕರು ಮೊದಲ ಪ್ರಯತ್ನವಾಗಿ ಒಳ್ಳೆಯ ಸಿನಿಮಾ ಮಾಡಿದ್ದಾರೆ ಎನಿಸುತ್ತಿದೆ. ನನ್ನ ಪೆವರೇಟ್ ಜಾನರ್ ಹಾರರ್‌. ನಾನು ನಾಲ್ಕೈದು ವರ್ಷದವ ಇದ್ದಾಗ ಅನಂತ್ ನಾಗ್, ಲಕ್ಷ್ಮೀ ಅವರ 'ನಾ ನಿನ್ನ ಬಿಡಲಾರೆ' ಸಿನಿಮಾ ರೀ-ರೀಲೀಸ್ ಆಗಿತ್ತು. ಆಗ ನಮ್ಮ ತಂದೆ ಆ ಚಿತ್ರ ತೋರಿಸಿದ್ದರು. ನಾನು ಎಲ್ಲಾ ಭಾಷೆಯ ದೆವ್ವಗಳ ಸಿನಿಮಾಗಳನ್ನು ತಪ್ಪದೆ ನೋಡುತ್ತೇನೆ. ಕಳೆದ ವರ್ಷ ಫೆಬ್ರವರಿಯಿಂದ ಈ ತಂಡ ನನ್ನ ಪಾಲೋ ಮಾಡತಾ ಬಂದಿದೆ. ಇವರ ಪ್ರಯತ್ನ ನನ್ನನ್ನು ಈ ವೇದಿಕೆಗೆ ಬರುವಂತೆ ಮಾಡಿದೆ. ಮೊದಲ ಪ್ರಯತ್ನದಲ್ಲೇ ಚಾಲೆಂಜ್ ಆಗಿ ಚಿತ್ರ ಮಾಡಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ನಮ್ಮ ಕನ್ನಡಿಗರು ಕೈ ಬಿಟ್ಟಿಲ್ಲ. ಟೀಸರ್ ತುಂಬಾ ಖುಷಿ ಕೊಟ್ಟಿದೆ. ಗೆಲ್ಲುವ ಶಕ್ತಿ ಈ ಚಿತ್ರಕ್ಕಿದೆ' ಎಂದರು. 

ಅಂದಂಗೆ ಈ ಚಿತ್ರಕ್ಕೆ ಕಥೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ ನವೀನ್ ಜಿ.ಎಸ್‌. ಇವರು ಕಳೆದ 8 ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವ ನವೀನ 'ಸಿನಿಮಾಗೆ ಏನೆಲ್ಲ ಬೇಕು ಅದನ್ನು ನಿರ್ಮಾಪಕಿ ನಾಯಕಿಯಾಗಿ ಅಂಬಾಲಿ ಭಾರತಿ ಅವರು ನೀಡಿದ್ದಾರೆ. ‘ನಾ ನಿನ್ನ ಬಿಡಲಾರೆ' 1979ರಲ್ಲಿ ಬಿಡುಗಡೆ ಆಗಿ ಹಿಟ್ ಆದ ಸಿನಿಮಾ. ಅದರಲ್ಲಿ ಅನಂತ್ ನಾಗ, ಲಕ್ಷ್ಮೀ ಅವರು ಅಭಿನಯಿಸಿದರು. ನಮ್ಮ ಕಥೆಗೆ ಶೀರ್ಷಿಕೆ ಸೂಕ್ತ ಆಗಿದ್ದರಿಂದ ಈ ಹೆಸರು ಇಡಲಾಗಿದೆ. ಒಳ್ಳೆಯ ಕ್ವಾಲಿಟಿಯಲ್ಲಿ ಸಿನಿಮಾ ಮಾಡಿದ್ದು, ಸದ್ಯ ಚಿತ್ರ ಸೆನ್ಸಾರ್ ಕಾರ್ಯ ಮುಗಿಸಿ ರೀಲೀಸ್ ಗೆ ಸಿದ್ಧವಾಗಿದೆ. ಹಾರರ್ ಎಂಬುದು ಎಲಿಮೆಂಟ್ ಅಷ್ಟೇ ಚಿತ್ರದಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್ ಕಥೆ ಇದೆ. ಜೊತೆಗೆ ಮೆಡಿಕಲ್ ಬಗ್ಗೆಯೂ ಹೇಳಲಾಗಿದೆ' ಎನ್ನುವರು. 

ಇನ್ನು ಚಿತ್ರದ ನಾಯಕಿ ಅಂಬಾಲಿ ಭಾರತಿ 'ನಾನು ಮ?ಲತಃ ಗುಲ್ಬರ್ಗ ಹುಡುಗಿ. ರಂಗಭೂಮಿ ನಂಟು ಇದೆ. ಒಂದಿಷ್ಟು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದೇನೆ. ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ಈ ಸಿನಿಮಾ ಮಾಡಿದ್ದೇನೆ. ನವೀನ ಹಾಗೂ ನಾನು ಐದು ವರ್ಷದ ಗೆಳೆಯರು. ಅವರು ಈ ಕಥೆ ಹೇಳಿದರು. ನಾನು ಈ ತಂಡದ ಜೊತೆ ಸೇರಿ ನಿರ್ಮಾಪಕರನ್ನು ಹುಡುಕಿದ್ವಿ ಸೆಟ್ ಆಗಲಿಲ್ಲ. ನಂತರ ಅಮ್ಮನಿಗೆ ನಿರ್ದೇಶಕರಿಂದ ಕಥೆ ಹೇಳಿಸಿದೆ. ಅಮ್ಮ ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ತಾಯಿ, ಚಿಕ್ಕಮ್ಮ ಮತ್ತು ಅಜ್ಜಿ ಅವರ ಹೆಸರುಗಳನ್ನು ಇಟ್ಟುಕೊಂಡು ಕೆ.ಯು.ಬಿ ಪ್ರೊಡಕ್ಷನ್ ಬ್ಯಾನರ್ ಮೂಲಕ ನಿರ್ಮಾಣ ಮಾಡಲಾಗಿದೆ. ನಾನು ಇಂಜನಿಯರಿಂಗ್ ಹೋಲ್ಡರ್‌. ಇಸ್ರೋದಲ್ಲಿ ಕೆಲ ಸಮಯ ಕೆಲಸ ಮಾಡಿ ನಂತರ ಚಿತ್ರರಂಗಕ್ಕೆ ಬಂದು ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿ ಈಗ ಫುಲ್ ಪ್ಲರ್ಜ್‌ ನಟಿಯಾಗಿ ಅಭಿನಯಿಸಿದ್ದೇನೆ. ನಟಿಯಾಗಿ ಬಂದು ನಿರ್ಮಾಪಕಿ ಆದೆ. ಈಗ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾಗೆ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ನವೆಂಬರ್ ರೀಲೀಸ್ ಪ್ಲ್ಯಾನ ಇದೆ' ಎನ್ನುವರು. ಚಿತ್ರದ ನಾಯಕನಾಗಿ ಪಂಚ್ಚಿ ಅಭಿನಯ ಮಾಡಿದ್ದು, ಪಾತ್ರದ ಬಗ್ಗೆ ಮಾತನಾಡುವ ಅವರು 'ನಾನು ಮೂಲತಃ ಥಿಯೇಟರ್ ಬ್ಯಾಗರೌಂಡ್ ನಿಂದ ಬಂದವ. ನಾಟಕಳ ನಂತರ 'ರಂಗಬಿರಂಗಿ' ಸಿನಿಮಾ ಮೂಲಕ ಇಂಡಸ್ಟ್ರಿಗೆ ಬಂದೆ. ಇದು ನಾಲ್ಕನೇ ಸಿನಿಮಾ. ಚಿತ್ರದಲ್ಲಿ ನಾನು ಎಂ.ಬಿ.ಎ ವಿದ್ಯಾರ್ಥಿ. ಒಂದು ಇವೆಂಟ್ ಮುಗಿಸಿಕೊಂಡು ಬರುವಾಗ ಒಬ್ಬ ಅಪರಿಚಿತ ವ್ಯಕ್ತಿಯಿಂದ ತಿರುವು ಸಿಗುತ್ತದೆ' ಎಂದು ಹೇಳಿದರು. ಉಳಿದ ಕಲಾವಿದರಾದ ಮಾಂತೇಶ್, ರಘು ಹಾಗೂ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಛಾಯಾಗ್ರಾಹಕ ವೀರೇಶ್, ಸಂಗೀತ ನಿರ್ದೇಶಕ ಎಂ.ಎಸ್‌. ತ್ಯಾಗರಾಜ್ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡರು.