ಲಲಿತ್ ಫಾರ್ಮ್‌ ಹೌಸ್‌ನಲ್ಲಿ ಜೆಸಿಐ ಸಪ್ತಾಹ ಸಮಾರೋಪ ಸಮಾರಂಭ

ಹೂವಿನ ಹಡಗಲಿ 16: ಯುವಕರು ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ವೈದ್ಯರಾದ ಡಾ ಎಸ್ ಸುಭಾಷ್ ಚಂದ್ರ ಅಭಿಪ್ರಾಯಪಟ್ಟರು.ಜೆಸಿಐ ರಾಯಲ್ ಪ್ರಣವ್ 2024 ಘಟಕವು ಐಪಿಎಸ್ ಲಲಿತ್ ಫಾರ್ಮ್‌ ಹೌಸ್ ನಲ್ಲಿ ಆಯೋಜಿಸಿದ್ದ ಜೆಸಿಐ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಉತ್ತಮ ಆರೋಗ್ಯಕ್ಕಾಗಿ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಬೇಕು. ನಡಿಗೆ ವ್ಯಾಯಾಮ ಆಟೋಟಗಳಲ್ಲಿ ಭಾಗವಹಿಸಬೇಕು. ಹಸಿರು ಸೊಪ್ಪು ಬೇಳೆ ಕಾಳು ತರಕಾರಿ ಹೆಚ್ಚು ಊಟದಲ್ಲಿ ಸೇವಿಸಿರಿ ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಶ್ರೀ ಮ ನಿ ಪ್ರ ಡಾ ಹಿರಿ ಶಾಂತವೀರ ಮಹಾಸ್ವಾಮಿಗಳು ಮಾತನಾಡಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆ ಮತ್ತು ಕಾಳಜಿಯ ಬಗ್ಗೆ ಪ್ರಶಂಶಿಸಿದರು. ಡಾ. ಮಲ್ಲಿಕಾರ್ಜುನ್  ರವರು ಮಾತನಾಡಿದರು. 

 ಅಧ್ಯಕ್ಷತೆ ವಹಿಸಿದ್ದ ಜೇಸಿ ಹೆಚ್ ಜಿ ಎಫ್ ಡಾ ಜೆ ಡಿ ಉಮೇಶ್ ತಮ್ಮ ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಕಾರ್ಯಗಳಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಎಪಿಎಸ್ ಲಲಿತ್ ಜೈನ  ರವರು ಜೆಸಿ ಸಂಸ್ಥೆ ಕೈಗೊಂಡ ಹಲವಾರು ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 

ಜೇಸಿಐನ ಹಿಂದಿನ ಅವಧಿಯ ಅಧ್ಯಕ್ಷರಾದ ಗಾಡ್ವಿನ್ ಸುಧಾಕರ್, ಸಂತೋಷ ಕೊಟಗಿ, ದ್ವಾರಕೀಶ್ ರೆಡ್ಡಿ,ಸೋಮಶೇಖರ್, ಸಂಸ್ಥೆಯ ಕಾರ್ಯದರ್ಶಿ ಕೋಡಿಹಳ್ಳಿ ವಿನಾಯಕ, ರಫೀನಾ ಬೇಗಂ,ಐ ಎಸ್ ಮಹಾಂತೇಶ್ ಇತರರು ಉಪಸ್ಥಿತರಿದ್ದರು.ಇಡೀ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.