ಕೋಲ್ಕತ್ತಾ, ಜ19 : ಚಹಾ ತೋಟದ, ವಿಶೇಷವಾಗಿ ಮಹಿಳಾ ಕಾರ್ಮಿಕರ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ದೇಶದ ಚಹಾ ಉತ್ಪಾದನೆ ಹೆಚ್ಚಾಗಲಿದೆ ಎಂದು ಭಾರತೀಯ ಚಹಾ ಸಂಘ (ಐಟಿಎ) ಹೇಳಿದೆ.
ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಸಂಘಟನೆಯ ಡೂಯರ್ಸ್ ಶಾಖೆಯ 142 ನೇ ವಾಷರ್ಿಕ ಸಮಾವೇಶ ಉದ್ದೇಶಿಸಿ ಐಟಿಎ ಉಪಾಧ್ಯಕ್ಷ ನಯನತರಾ ಪಾಲ್ಚೌಧುರಿ, ಇತ್ತೀಚಿನ ಅಧ್ಯಯನದ ಪ್ರಕಾರ ಚಹಾತೋಟದ ಅನೇಕ ಮಹಿಳಾ ಕಾರ್ಮಿಕರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಅವರ ಆರೋಗ್ಯ ಸರಿಯಾಗಬೇಕು ಮತ್ತು ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.
ಮಹಿಳಾ ಕಾರ್ಮಿಕರಿಗೆ ಕಡಿಮೆ ದರದಲ್ಲಿ ನೈರ್ಮಲ್ಯ ಕರವಸ್ತ್ರವನ್ನು ಒದಗಿಸುವ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.
ಐಟಿಎ ಪ್ರಧಾನ ಕಾರ್ಯದರ್ಶಿ ಅರಿಜಿತ್ ರಾಹಾ ಮಾತನಾಡಿ, ಚಹಾ ತೋಟ ಕಾರ್ಮಿಕರು ಕೇಂದ್ರದ ಕಲ್ಯಾಣ ಯೋಜನೆಗಳ ಲಾಭ ಪಡೆದುಕೊಳ್ಳಲು ಅನುಕೂಲವಾಗುವ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಅವರ ಸಂಬಳ ಮತ್ತು ಬೋನಸ್ ವಿತರಣೆ ಡಿಜಿಟಲೀಕರಣಗೊಳಿಸಲಾಗಿದೆ ಎಂದೂ ಅವರು ಹೇಳಿದರು.