ಜಿಐಟಿಯಲ್ಲಿ ದಂತ ತಪಾಸಣೆ ಶಿಬಿರ

ಲೋಕದರ್ಶನ ವರದಿ 

ಬೆಳಗಾವಿ 25: ಇಲ್ಲಿನ ಕೆಎಲ್‌ಎಸ್ ಜಿಐಟಿಯಲ್ಲಿ, ಮರಾಠಾ ಮಂಡಲದ ದಂತ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಗಸ್ಟ್‌ 24 ರಂದು ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಉಚಿತ ದಂತ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.  

ಡಾ.ಪ್ರಾಚಿ ಕಟ್ಟಿ ಅವರ ನೇತೃತ್ವದಲ್ಲಿ, ಡಾ.ನೇಹಾ ಸಿಂಗ್, ಡಾ.ನಿಹಾರಿಕಾ ಅಷ್ಟೇಕರ್, ಡಾ.ರಿದ್ಧಿ ಪಾಟೀಲ್, ಡಾ.ಅಶ್ವಿನ್ ಡಿ.ಪಿ, ಡಾ.ವೈಷ್ಣವಿ ಪಾಟೀಲ್, ಮತ್ತು ಡಾ.ವೃಶಾಲಿ ಪೆಡ್ನೇಕರ್ ಈ ಶಿಬಿರವನ್ನು ನಡೆಸಿಕೊಟ್ಟರು.  

ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ವ್ಯವಹಾರಗಳ ಡೀನ್ ಪ್ರೊ.ಎಸ್‌.ಪಿ.ದೇಶಪಾಂಡೆ, ಹಾಗೂ ಪ್ರೊ.ಪ್ರಿಯಾಂಕಾ ಜೋಶಿ ಮತ್ತು ಪ್ರೊ.ವೈದೇಹಿ ದೇಶಪಾಂಡೆ ಅವರು ಸಂಯೋಜಿಸಿದರು. ಸುಮಾರು  250ಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ಸಿಬ್ಬಂದಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.