ಬಾಲಿವುಡ್ ನಟಿಗೆ ಜಾಮೀನು ನಿರಾಕರಣೆ

ಜೈಪುರ   ಡಿ ೧೬ ದೇಶದ ಮೊದಲ ಪ್ರಧಾನಿ  ಜವಹರಲಾಲ್ ನೆಹರೂ  ಹಾಗೂ ಅವರ ತಂದೆ ಮೋತಿಲಾಲ್ ನೆಹರೂ  ಅವರ  ವಿರುದ್ದ  ಆಕ್ಷೇಪಾರ್ಹ  ಹೇಳಿಕೆ, ವಿಡಿಯೋವನ್ನು   ಫೇಸ್ ಬುಕ್ ನಲ್ಲಿ  ಪೋಸ್ಟ್  ಮಾಡಿದ್ದ ಆರೋಪದಡಿ  ಬಂಧಿತರಾಗಿರುವ  ರೂಪದರ್ಶಿ, ಬಾಲಿವುಡ್ ನಟಿ  ಪಾಯಲ್ ರೋಹ್ಟಗಿ ಸಲ್ಲಿಸಿದ್ದ ನಿರೀಕ್ಷಣಾ  ಜಾಮೀನು ಆರ್ಜಿಯನ್ನು   ಬುಂಡಿ ನ್ಯಾಯಾಲಯ ಸೋಮವಾರ ವಜಾಗೊಳಿಸಿದ್ದಲ್ಲದೆ . ಆಕೆಯನ್ನು  ಎಂಟು ದಿನಗಳ ಕಾಲ  ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ. ಪಾಯಲ್  ವಿರುದ್ದ   ಕಳೆದ  ಅಕ್ಟೋಬರ್ ೧೦ ರಂದು  ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.ಪಾಯಲ್ ಸಲ್ಲಿಸಿದ್ದ   ನಿರೀಕ್ಷಣಾ ಜಾಮೀನು ಅರ್ಜಿ ಯನ್ನು ಬುಂಡಿ ನ್ಯಾಯಾಲಯ ಸೋಮವಾರ  ವಿಚಾರಣೆ  ನಡೆಸಿ ವಜಾಗೊಳಿಸಿದೆ. ಕಾಂಗ್ರೆಸ್   ಅಧ್ಯಕ್ಷೆ  ಸೋನಿಯಾಗಾಂಧಿ  ಅವರ ಕುಟುಂಬ ಸದಸ್ಯರು  ತಮ್ಮ  ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ  ಮುಖ್ಯಮಂತ್ರಿ   ಆಶೋಕ್  ಗೆಹ್ಲೋಟ್   ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಇತ್ತೀಚೆಗೆ ನಟಿ ಪಾಯಲ್ ಆರೋಪಿಸಿದ್ದರು. ಗಾಂಧಿ  ಕುಟುಂಬ ಸದಸ್ಯರ  ಆಕ್ಷೇಪಾರ್ಹ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ   ಪೋಸ್ಟ್   ಮಾಡಿರುವ ಪಾಯಲ್ ವಿರುದ್ದ   ರಾಜಸ್ಥಾನ  ಯುವ ಕಾಂಗ್ರೆಸ್   ಘಟಕದ  ಪ್ರಧಾನ ಕಾರ್ಯದರ್ಶಿ ಚಾರ್ಮೇಶ್ ವರ್ಮಾ ಸಲ್ಲಿಸಿದ್ದ  ದೂರಿನ್ವಯ  ಪ್ರಕರಣ ದಾಖಲಿಸಲಾಗಿದೆ  ಎಂದು ಬುಂಡಿ ಪೊಲೀಸ್ ಠಾಣೆ ತನಿಖಾಧಿಕಾರಿ ಲೋಕೇಂದ್ರ ಪಾಲಿವಾಲ್ ತಿಳಿಸಿದ್ದಾರೆ.