ಲೋಕದರ್ಶನವರದಿ
ರಾಣೇಬೆನ್ನೂರು14: ದೇಶದ ಪ್ರಜಾಪ್ರಭುತ್ವದ ಪ್ರಭುದ್ಧತೆ ಪಡೆದುಕೊಳ್ಳಬೇಕಾದರೆ, ಮತದಾನ ಕಡ್ಡಾಯವಾಗಿ ನಡೆಯಬೇಕು. ಅದಕ್ಕಾಗಿ ಈಗಾಗಲೇ ಚುನಾವಣಾ ಆಯೋಗವು ವಿವಿಧ ಹಂತದಲ್ಲಿ ಕ್ರೀಯಾ ಯೋಜನೆ ಜಾರಿಗೆ ತರುವುದರ ಮೂಲಕ ಕಡ್ಡಾಯ ಮತದಾನ ಮಾಡುವಲ್ಲಿ ಯಶಸ್ವಿಯಾಗುತ್ತಲಿದೆ ಎಂದು ಜಿಲ್ಲಾ ನೂಡಲ್ ಅಧಿಕಾರಿ ಎಂ.ಎಚ್.ಪಾಟೀಲ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಪ್ರಧಾನ ಅಂಚೆ ಕಛೇರಿ ಬಳಿ ನಡೆದ ರಾಷ್ಟ್ರೀಯ ಮತದಾರರ ಚೀಟಿ ಪರೀಶಿಲನೆ ಮತ್ತು ನವೀಕರಣ ಜನ-ಜಾಗೃತಿ ಜಾಥಾ ಆಂದೋಲನ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಮತದಾನ ಪ್ರಕ್ರೀಯೆ ನಡೆಯುವ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಆಗುತ್ತಿರುವುದು ಕಾಣುತ್ತಿದ್ದೇವೆ. ಬಹು ವರ್ಷಗಳ ನಂತರ ಈಗಿರುವ ಮತದಾರರ ಪಟ್ಟಿಯನ್ನು ಪರಿಸ್ಕರಿಸಿ ಮತ್ತು ಧೃಢೀಕರಣ ಮಾಡಿಕೊಳ್ಳುವ ಅವಕಾಶವನ್ನು ಸಕರ್ಾರ ಜಾರಿಗೆ ತಂದಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬ ಮತದಾರರು ಪಡೆದುಕೊಳ್ಳಲು ಕಡ್ಡಾಯವಾಗಿ ಮುಂದಾಗಬೇಕು ಎಂದು ಕರೆ ನೀಡಿದರು.
ರಾಜ್ಯದಾದ್ಯಂತ ಏಕಕಾಲಕ್ಕೆ ಸೆ.1ರಿಂದ ಈ ಜನಜಾಗೃತಿ ಯೋಜನೆ ಜಾರಿಗೆ ಬಂದಿದ್ದು, 45 ದಿವಸಗಳ ಕಾಲ ಆಂದೋಲನದ ರೂಪದಲ್ಲಿ ಇದೇ ಅಕ್ಟೋಬರ್ 15ರವರೆಗೆ ನಡೆಯಲಿದೆ. ಮತದಾರರು ತಮ್ಮ ಪರಿವಾರದಲ್ಲಿ ಇರುವ ಪ್ರತಿಯೊಬ್ಬರೂ ಮತ ಚೀಟಿಗಳನ್ನು ಪರಿಶೀಲಿಸಿಕೊಂಡು ಅದನ್ನು ಸರಿ ಇರುವ ಕುರಿತು ಧೃಢೀಕರಿಸಿಕೊಳ್ಳಬೇಕು ಎಂದ ಅವರು ದಿ.1-1-2001ರೊಳಗೆ ಜನಿಸಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಹಿನ್ನಲೆಯಲ್ಲಿ ತಮ್ಮ ಮತ ಚೀಟಿಯನ್ನು ಪಡೆಯಲು ನೊಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜನಜಾಗೃತಿ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಪೌರಾಯುಕ್ತ ಡಾ|| ಎನ್.ಮಹಾಂತೇಶ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಪಂ. ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಂ. ಕಾಂಬಳೆ, ಪ್ರೋ|| ಬಿ.ಬಿ.ನಂದ್ಯಾಲ, ರಮೇಶ ಕರಡೆಣ್ಣನವರ, ಶುಭಾಶ್ ಎಳೆಹೊಳೆ, ಇಸಿಓ ಚಂದ್ರಶೇಖರ ದೇವಾಂಗದ, ವಿಷಯ ಪರಿವೀಕ್ಷಕರಾದ ಪಿ.ಎಫ್.ಪೂಜಾರ, ಆರ್.ಮಂಜಪ್ಪ, ಬಿ.ಎಸ್.ಶಿಡೇನೂರ, ಹೀತೇಂದ್ರ ಅಂಗೂರ ಸೇರಿದಂತೆ ವಿವಿಧ ಇಲಾಖೆಗಳ ಗಣ್ಯರು, ಸಾವಿರಾರು ವಿಧ್ಯಾಥರ್ಿಗಳು ಪಾಲ್ಗೊಂಡಿದ್ದರು.
ಉದರ್ು ಹೈಸ್ಕೂಲ್ ಕ್ರೀಡಾಂಗಣದಿಂದ ಹೊರಟ ಭಾರಿ ಜನಜಾಗೃತಿ ವಿಧ್ಯಾಥರ್ಿಗಳ ಜಾಥಾ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಧಾನ ಅಂಚೆ ಕಛೇರಿ ಬಳಿ ಸಾರ್ವಜನಿಕ ಸಭೆ ನಡೆದು ಸಾಂಗತ್ಯಗೊಂಡಿತು.