ಪುರಾತನ ಬಾವಿ ಮುಚ್ಚಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಕಂಪ್ಲಿ 25: ಪಟ್ಟಣದ ಪುರಸಭೆ ವ್ಯಾಪ್ತಿಯ ಮಾರುತಿ ನಗರದ ಶ್ರೀ ಆಂಜಿನೇಯ ದೇವಸ್ಥಾನದ ಹತ್ತಿರದಲ್ಲಿದ್ದ ಪುರಾತನ ಬಾವಿಯನ್ನು ಏಕಾಏಕಿ ಮುಚ್ಚಿದ್ದು, ಕೂಡಲೇ ಪುರಾತನ ಬಾವಿ ಮುಚ್ಚಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೆಕೆಂದು ಎಚ್.ಸಂಜೀವಪ್ಪ ಆಗ್ರಹಿಸಿದ್ದಾರೆ. ಅವರು ಮಾರುತಿ ನಗರದ ಆಂಜಿನೇಯ ದೇವಸ್ಥಾನದ ಹತ್ತಿರದ ಪುರಾತನ ಬಾವಿಯನ್ನು ಮುಚ್ಚಿರುವ ಬಗ್ಗೆ ಕಂಪ್ಲಿ ಠಾಣೆಯಲ್ಲಿ ದೂರನ್ನು ನೀಡಿದ್ದು, ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿ, ಪಟ್ಟಣದ ಸ.ನಂ. 619ರ 074 ಸೆಂಟ್ಸ್ ಜಮೀನಿನಲ್ಲಿ ಆಂಜಿನೇಯ ದೇವಸ್ಥಾನ ಹಾಗೂ ಪುರಾತನ ಬಾವಿ ಇದ್ದು, ಅದನ್ನು ಜ.19.ರಂದು ಸ್ಥಳೀಯರಾದ ನಂದೆಪ್ಪ, ರಾಮಣ್ಣ, ಸಿದ್ದಪ್ಪ, ಮನೋಹರ್ ಎನ್ನುವವರು ಜೆಸಿಬಿ ಮೂಲಕ ಮುಚ್ಚಿಸಿದ್ದಾರೆ.
ಇಂತಹ ಪುರಾತನ ಬಾವಿಯನ್ನು ಮುಚ್ಚಿಸಿದವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ದೂರು ನೀಡಿರುವುದಾಗಿ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಮನೋಹರ ಅವರು, ಸ.ನಂ.619ರ 74 ಸೆಂಟ್ಸ್ ಜಮೀನನ್ನು ಹತ್ತು ಜನ ಸೇರಿ ರಂಗಾರಿ ನಾಗೇಂದ್ರ್ಪ ಎನ್ನುವವರ ಹತ್ತಿರ ಖರೀದಿ ಮಾಡಿದ್ದೇವೆ. ನಮ್ಮ ಪಟ್ಟ ಭೂಮಿಯಲ್ಲಿದ್ದ ಪುರಾತನ ಬಾವಿಯು ಈಗಾಗಲೇ ಬಹುತೇಕ ಮುಚ್ಚಿ ಹೋಗಿತ್ತು. ಹಾಗೂ ಗಿಡಗಂಟೆಗಳು ಬೆಳೆದು ವಿಷ ಜಂತುಗಳ ಹಾವಳಿ ಅಧಿಕವಾಗಿ ಸುತ್ತಮುತ್ತಲು ವಾಸಿಸುವವರಿಗೆ ತೀವ್ರವಾದ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ ಎಂದರು. ಜ.003: ಕಂಪ್ಲಿ ಪಟ್ಟಣದ ಮಾರುತಿ ನಗರದಲ್ಲಿ ಆಂಜಿನೇಯ್ಯ ಸ್ವಾಮಿ ದೇವಸ್ಥಾನದ ಮುಂಭಾಗದ ಪುರಾತನ ಬಾವಿಯನ್ನು ಮುಚ್ಚಿರುವುದು. ಜ.003ಎ: ಕಂಪ್ಲಿ ಪಟ್ಟಣದ ಮಾರುತಿ ನಗರದಲ್ಲಿ ಮುಚ್ಚಿರುವ ಪುರಾತನ ಬಾವಿಯನ್ನು ಪೊಲೀಸರು ಭೇಟಿ ನೀಡಿ ಪರೀಶೀಲಿಸಿದರು.