ಹುಬ್ಬಳ್ಳಿ-ಜೋದಪುರ್ ನೇರ ರೈಲು ಆರಂಭಕ್ಕೆ ಒತ್ತಾಯ: ಪ್ರತಿನಿಧಿ ಮಂಡಳಿಯಿಂದ ಮನವಿ
Demand for the start of a direct train between Hubballi and Jodhpur: Appeal from the representative
ಲೋಕದರ್ಶನ ವರದಿ
ಬೆಳಗಾವಿ 25 : ಉತ್ತರ ಕರ್ನಾಟಕದ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಹುಬ್ಬಳ್ಳಿಯಿಂದ ಜೋಧಪುರ, ಬಾರ್ಮೇರ್, ಬಿಕಾನೇರ್ ಸೇರಿದಂತೆ ರಾಜಸ್ಥಾನದ ವಿವಿಧ ನಗರಗಳಿಗೆ ನೇರ ರೈಲು ಸೇವೆ ಆರಂಭಿಸುವ ಬೇಡಿಕೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕರ್ನಾಟಕ ರಾಜಸ್ಥಾನಿ ಸಮಾಜದ ಪ್ರತಿನಿಧಿ ಮಂಡಳಿಯು ದಕ್ಷಿಣ ಪಶ್ಚಿಮ ರೈಲ್ವೆ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಅವರನ್ನು ಭೇಟಿ ಮಾಡಿ ರೈಲ್ವೆ ಸಂಬಂಧಿತ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಪ್ರತಿನಿಧಿ ಮಂಡಳಿಯು ಹುಬ್ಬಳ್ಳಿ-ಜೋದಪುರ್ ಮಾರ್ಗದಲ್ಲಿ ಕನಿಷ್ಠ ಮೂರು ತಿಂಗಳ ಕಾಲ ಹಬ್ಬ ಹಾಗೂ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ಅಥವಾ ಈ ಮಾರ್ಗದಲ್ಲಿ ನಿಯಮಿತ ರೈಲು ಸೇವೆಯನ್ನು ಆರಂಭಿಸಲು ಒತ್ತಾಯಿಸಿದೆ. ಈಗಾಗಲೇ ಬೆಂಗಳೂರು ಮೂಲದ ರೈಲುಗಳಲ್ಲಿ ಹೆಚ್ಚು ಗದ್ದಲ ಮತ್ತು ಪ್ರಯಾಣಿಕರ ದಟ್ಟಣೆ ಇರುವುದರಿಂದ ರಾಜಸ್ಥಾನಕ್ಕೆ ಪ್ರಯಾಣಿಸುವವರಿಗೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.
ಸಮಾಜದ ಸದಸ್ಯರು ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಿಂದ ರಾಜಸ್ಥಾನಕ್ಕೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿನದಾಗಿದೆ. ಹೀಗಾಗಿ ಹುಬ್ಬಳ್ಳಿಯಿಂದ ನೇರ ರೈಲು ಸೇವೆ ಆರಂಭಿಸುವುದು ಕಾಲದ ಅಗತ್ಯವಾಗಿದೆ ಎಂದು ಹೇಳಿದರು. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವುದಲ್ಲದೆ ಸಂಚಾರ ಸುಗಮವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿಕ್ರಂ ರಾಜಪುರೋಹಿತ್ ಥಾಂವ್ಲಾ, ಹೇಮರಾಜ್ ಸಾಥು, ಥಾನಸಿಂಗ್ ಭಾಗ್ಲಿ, ನರಪತ್ಸಿಂಗ್ ಸಾಕರ್ನಾ, ರಾಮೇಶ್ವರ ಭಾಟಿ, ಮಹೇಂದ್ರ ಭಾಟಿ, ಸಂತೋಷ್ ಶರ್ಮಾ, ಸುಜಾರಾಮ್ ಚೌಧರಿ, ಸುರೇಶ್ ಜೈನ್, ವಿಕ್ರಂ ಜೈನ್, ಚಂದನ್ ಪುರೋಹಿತ್, ಅಮೃತಲಾಲ್ ಶರ್ಮಾ, ಪೂರ್ವ ಚಖಗಅಅ ಸದಸ್ಯ ಮಹಾವೀರ ಲಿಂಬ್, ಸೆಂಟರ್ನ ಚೇರ್ಮನ್ ಗೌತಮ್ ಗೋಲೇಚ್ಚಾ, ಪ್ರವಾಸಿ ಯಾತ್ರಿ ಸಂಘ ಕರ್ನಾಟಕದ ರಾಜ್ಯ ಮಹಾಮಂತ್ರಿ ಸುಭಾಷ್ ಡಾಂಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮನವಿಯನ್ನು ಸ್ವೀಕರಿಸಿದ ಮಹೇಂದ್ರ ಸಿಂಘಿ ಅವರು ಸಂಬಂಧಿತ ಅಧಿಕಾರಿಗಳು ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಬೆಳಗಾವಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ರೈಲ್ವೆ ಸಚಿವಾಲಯದೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 