ಪ್ರಧಾನಮಂತ್ರಿ ಅವಾಸ್ ಯೋಜನೆ ಶರತ್ತು ಸರಳೀಕರಣ ಮಾಡಲು ಆಗ್ರಹ

Demand for simplification of condition of Prime Minister Awas Yojana

ಕಾರವಾರ 24; ಕೇಂದ್ರ ಸರಕಾರದಿಂದ ವಸತಿ ರಹಿತರಿಗೆ ನೀಡುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸರಳೀಕರಣ ಮಾಡಿಕೊಡಿ ಎಂದು ಅಂಕೋಲಾ ತಾಲೂಕಿನ ಗ್ರಾ. ಪಂ. ಅಧ್ಯಕ್ಷರ, ಉಪಾಧ್ಯಕ್ಷರ ಒಕ್ಕೂಟದಿಂದ ಕೇಂದ್ರ ಸರ್ಕಾರವನ್ನು ಆಗ್ರಹಿಸಿತು. 

ಈ ಸಂಬಂಧ  ಕಾರವಾರ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಮಾಡಿದ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಪಿ.ಶೆಟ್ಟಿ ಮಾತನಾಡಿ  ಕೇಂದ್ರ ಸರಕಾರದ ವಸತಿ ರಹಿತರಿಗೆ ವಸತಿ ನಿರ್ಮಿಸಿಕೊಡುವ ಯೋಜನೆಯಡಿಯಲ್ಲಿ ಅಂಕೋಲಾ ತಾಲೂಕಿಗೆ 2250 ಮನೆಗಳ ಗುರಿಯನ್ನು ಈ ಸಾಲಿನಲ್ಲಿ ನೀಡಲಾಗಿದೆ. ಆದರೆ ಅರಣ್ಯ ಅತಿಕ್ರಮಣ ಪ್ರದೇಶದಲ್ಲಿ  ಕಚ್ಚಾ ಮನೆ  ನಿರ್ಮಿಸಿಕೊಂಡವರಿಗೆ ಈ ಯೋಜನೆ ಪ್ರಯೋಜನ ತಲುಪುವದಿಲ್ಲ ಎಂದರು.  ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸ್ವಂತ ಭೂಮಿಯನ್ನು ಹೊಂದಿದ್ದರೆ ಮಾತ್ರ ಮನೆಯನ್ನು ನೀಡಬಹುದಾಗಿದೆ. ಆದರೆ ವಂಚಾಯತ ಮಟ್ಟದಲ್ಲಿ ಕೆಲವರಿಗೆ ಭೂಮಿ ಇಲ್ಲದೇ ಅತಿಕ್ರಮಣ ಸ್ಥಳ , ಖಾಲಿ ಭೂಮಿಯನ್ನು ಖರೀದಿಸಿದ್ದು ಕೆಲವು ಪಾಟ್ಟಾ  ಭೂಮಿಗಳು 2018 ರ ನಂತರ ಭೂಮಿ ಖರೀದಿ ಮಾಡಿದ್ದು ಇರುತ್ತದೆ. ಇಂತಹ ಯಾವುದೇ ಫಲಾನುಭವಿಗಳಿಗೆ ಯೋಜನೆಯ ನಿಯಮಾವಳಿಗಳ ಪ್ರಕಾರ ಮನೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆ ಹರಿಸಲು ಸಂಸದ ಕಾಗೇರಿ ಹಾಗೂ ಶಾಸಕ ಸೈಲ್ ಪ್ರಯತ್ನಿಸಬೇಕೆಂದು ಆಗ್ರಹಿಸಿದರು.   

ಪಂಚಾಯತ್ ಒಕ್ಕೂಟದ  ಉಪಾಧ್ಯಕ್ಷ ಪ್ರದೀಪ್  ಎನ್‌.ನಾಯಕ ಮಾತನಾಡಿ  ಅರಣ್ಯ ಅತಿಕ್ರಮಣದ ಯೋಜನೆಯಡಿ ಈಗಾಗಲೇ ತೆರಿಗೆಯನ್ನು ಹೊಂದಿದಂತವರಿಗೆ ನೀಡುವಂತಾಗಬೇಕು, ಮತ್ತು ಪಂಚಾಯತ ಮಟ್ಟದಲ್ಲಿ ಸಮಾಯಕ ಆಸ್ತಿಯನ್ನು ಹೊಂದಿದವರ ಸಂಖ್ಯೆ ಹೆಚ್ಚಾಗಿದ್ದು, ಸರಿಯಾದ ಜಾಗದ ಖಾತೆಯನ್ನು ಹೊಂದಿದವರು ಕಡಿಮೆ ಇರುತ್ತಾರ. ಇದರಿಂದ ಮನೆ  ಅವಶ್ಯಕತೆಯಿದ್ದರೂ ,ಮನೆ ನೀಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು  , ಅಧ್ಯಕ್ಷ ಉಪಾಧ್ಯಕ್ಷರನ್ನು ಅನುಮಾನಿಸುವಂತಾಗಿದೆ. ಆದ್ದರಿಂದ ಬಸವ ವಸತಿ ಯೋಜನೆಯ ನಿಯಮಾವಳಿಯಂತೆ  ಪ್ರಧಾನಿ ಅವಾಸ್ ಯೋಜನೆ ಸರಳೀಕರಣ ಮಾಡಬೇಕು ಎದರು . ಅಲ್ಲದೇ ಅಂಕೋಲಾ ತಾಲೂಕಿನ ಎರಡು ಹೊಸ ಗ್ರಾಮ ಪಂಚಾಯತಗಳಾದ ವಾಸರಕುದ್ರಿಗೆ ಮತ್ತು ಹೊನ್ನೆಬೈಲ್ ಗೆ ಹತ್ತು ವರ್ಷ ಕಳೆದರೂ ತಂತ್ರಾಂಶದಲ್ಲಿ ಇನ್ನೂ ಸರಿಪಡಿಸದ ಕಾರಣ ಮನೆ ನಿರ್ಮಣದ  ಗುರಿಯು ಬಂದಿರುವುದಿಲ್ಲ. ಇದರಿಂದ ಈ ಎರಡು ಪಂಚಾಯತ್  ಜನರಿಗೆ ಮನೆ ಸಿಗದಂತ ವರಿಸ್ಥಿತಿ ನಿರ್ಮಾಣವಾಗಿದೆ. ಆದ ಕಾರಣ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ನಮಗೆ ಕೊಟ್ಟ ಗುರಿಗೆ ಅನುಗುಣವಾಗಿ ಪಂಚಾಯತ ಮಟ್ಟದಲ್ಲಿ ಮನೆಗಳನ್ನು ಆಯ್ಕೆ ಮಾಡಿಕೊಡಲು ಅನುವು ಮಾಡಿಕೊಡಬೇಕಾಗಿ ಮನವಿ ಮಾಡಲಾಗಿದೆ ಎಂದರು.  

ಇತರೇ ವಸತಿ ಯೋಜನೆಗಳಲ್ಲೂ ಕೂಡ ಫಲಾನುಭವಿಯ ಮನೆಯ ಪ್ರಾರಂಭಿಕ ಹಂತದ ಜಿ.ಪಿ.ಎಸ್‌. ಮಾಡಿದ ಸ್ಥಳದಲ್ಲಿ ,  ಮತ್ತೆ  ಮನೆ ಪೋಟೋ ಜಿ.ಪಿ.ಎಸ್ ಮಾಡಲು ಸಾಧ್ಯವಾಗಿರುವುದಿಲ್ಲ, ಹಾಗೂ ಮನೆ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ ಎಂದು ಅವರು ನೋವು ತೋಡಿಕೊಂಡರು.ವಸತಿ ಯೋಜನೆ  ಫಲಾನುಭವಿಗಳಿಗೂ ಸಾಕಷ್ಟು ತೊಂದರೆಯುಂಟಾಗುತ್ತಿದೆ ಎಂದು ಪಂಚಾಯತ ಸದಸ್ಯೆಯರು ಅಳಲು ತೋಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ  ಒಕ್ಕೂಟದ ಸದಸ್ಯರು ಹಾಜರಿದ್ದರು.