ದೇವದಾಸಿಯರ ಪುನರ್ ಸರ್ವೆಗೆ ಆಗ್ರಹ

ದೇವದಾಸಿಯರ ಪುನರ್ ಸರ್ವೆಗೆ ಆಗ್ರಹ Demand for re-survey of Devadasis

ಲೋಕದರ್ಶನ ವರದಿ 

ಬಳ್ಳಾರಿ  18:  ಎಲ್ಲ ದೇವದಾಸಿ ಮಹಿಳೆಯರನ್ನು ಸರ್ವೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಘದ ಗೌರವ ಅಧ್ಯಕ್ಷ ಯು ಬಸವರಾಜ. ಕರ್ನಾಟಕ ಸರ್ಕಾರ ಇತ್ತೀಚಿಗೆ ಮಾಜಿ ದೇವದಾಸಿ ಮಹಿಳೆಯರು ಮತ್ತು ಅವರ ಮೂರು ತಲೆಮಾರಿನ ಕುಟುಂಬಗಳ ಸದಸ್ಯರ ಗಣತಿ ಕಾರ್ಯವನ್ನು ಕೈಗೊಂಡಿದೆ ಅದು ಅಪೂರ್ಣವಾಗಿದೆ, ಸಮಗ್ರವಾಗಿಲ್ಲ. 2007-08 ರ ಗಣತಿಯೇ ಅಸಮರ​‍್ಕವಾಗಿತ್ತು 1982 ರಲ್ಲಿ ಅಥವಾ ನಂತರ ಅವರು ದೇವದಾಸಿ ಮಹಿಳೆಯರಾಗಿದ್ದಾರೆ ಅವರನ್ನ ಆ ಗಣತಿ ಪರಿಗಣಿಸಿರಲಿಲ್ಲ. ಆದ್ದರಿಂದ ಮರುಗಣತಿ ಮಾಡುವಂತೆ ಒತ್ತಾಯ ಮಾಡಿತ್ತು.ಈಗ ಪುನಃ ಮತ್ತೆ ಮರು ಸಮೀಕ್ಷೆ ಹೆಸರಿನಲ್ಲಿ 2025 ರಲ್ಲಿ ಸರ್ಕಾರ ಗಣತಿ ಮಾಡಿತು. ಇದು ಸಹ ಪರಿಪೂರ್ಣವಾಗಿಲ್ಲ.. ಈ ಸಮೀಕ್ಷೆಯಲ್ಲಿ 23,385 ಜನರನ್ನು ಮಾತ್ರ ಗುರುತಿಸಿದೆ. ಆದರೂ ಕೂಡ ಈ ಸಮೀಕ್ಷೆಯನ್ನು ತಿರಸ್ಕಾರ ಮಾಡ್ತಾ ಇಲ್ಲ. ಸಮೀಕ್ಷೆಯಿಂದ ಹೊರಗೆ ಉಳಿದಂತ ಮಹಿಳೆಯರ ಎರಡು ಮೂರು ತಲೆಮಾರಿನ ಕುಟುಂಬಗಳನ್ನು ಒಳಗೊಳ್ಳುವುದಕ್ಕೆ ಈ ಸಮೀಕ್ಷೆಯನ್ನು ಮುಂದುವರಿಸಬೇಕು ಎಂದಿದ್ದಾರೆ.ಮಕ್ಕಳು ಮೊಮ್ಮಕ್ಕಳನ್ನು ಕೂಡ ಗಣತಿಯಲ್ಲಿ ಸೇರಿಸಿಕೊಳ್ಳುವುದಕ್ಕೆ 108 ದಾಖಲಾತಿಗಳನ್ನ ಕೇಳುವ ಮೂಲಕ ಅವರು ಗಣತಿಗೆ ಬರದ ರೀತಿಯಲ್ಲಿ ತಡೆಯಲಾಗಿದೆ.ಅದೇ ರೀತಿಯಲ್ಲಿ 82 ರ ನಂತರ ದೇವದಾಸಿಯರಾದಂತವರನ್ನು ಕೂಡ ಈ ಸರ್ವೆಯಲ್ಲಿ ಸೇರಿಸದೆ ಹೊರಗಿಡಲಾಗಿದೆ. ಅದಕ್ಕಾಗಿ ಪನರ್ ಸರ್ವೇ ಆಗಬೇಕು ಎಂದಿದ್ದಾರೆ.ಈ ಸುದ್ದಿಗೋಷ್ಟಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಮಾಳಮ್ಮ ಜಿಲ್ಲಾ ಕಾರ್ಯದರ್ಶಿ ಎ ಸ್ವಾಮಿ, ಜಿಲ್ಲಾ ಅಧ್ಯಕ್ಷೆ ಈರಮ್ಮ ಕುರುಗೋಡು ತಾಲೂಕು ಕಾರ್ಯದರ್ಶಿ, ಸಿ ವೀರೇಶ್ ಮೊದಲಾದವರು ಇದ್ದರು