ಟೋಲ್ ಶುಲ್ಕದಿಂದ ವಿನಾಯತಿ ನೀಡಲು ಆಗ್ರಹ

ಲೋಕದರ್ಶನ ವರದಿ

ಧಾರವಾಡ 10 : ಸಮೀಪದ ಮರೇವಾಡ ಗ್ರಾಮದ ಬಳಿ ನಿಮರ್ಿಸಿರುವ ಟೋಲ್ ಗೇಟ್ದಲ್ಲಿ ನಿತ್ಯ ಸಂಚರಿಸುವ ಗ್ರಾಮೀಣ ಕೆ.ಎಸ್.ಆರ್.ಟಿ.ಸಿ. (ಸರಕಾರಿ) ಬಸ್ಗಳಿಂದ ಸುಮಾರು 10 ಸಾವಿರಕ್ಕೂ ಅಧಿಕ ಟೋಲ್ ಸಂಗ್ರಹಣೆ ಅವೈಜ್ಞಾನಿಕವಾಗಿದೆ ಎಂದು ಅಮ್ಮಿನಬಾವಿ ಕ್ಷೇತ್ರದ ತಾಲೂಕು ಪಂಚಾಯತಿ ಸದಸ್ಯ ಸುರೇಂದ್ರ ದೇಸಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ಶಾಸಕ ಅಮೃತ ದೇಸಾಯಿ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಪತ್ರಬರೆದ್ದಾರೆ. ನಗರದಿಂದ ಕೇವಲ 10-12 ಕಿ.ಮೀ. ಅಂತರದಲ್ಲಿರುವ ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ ಮುಂತಾದ ಸಮೀಪದ ಗ್ರಾಮಗಳಿಗೆ ಸಂಚರಿಸುವ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಟಿಬಸ್ಗಳಿಗೆ ಅಧಿಕ ಟೋಲ್ ಸಂಗ್ರಹಿಸಲಾಗುತ್ತಿದೆ. 

     ಅಮ್ಮಿನಬಾವಿ ಗ್ರಾಮಕ್ಕೆ ನಿತ್ಯವೂ 4 ಬಸ್ಗಳ 44 ಟ್ರಿಪ್ಗಳ ಸಂಚಾರದಲ್ಲಿ ಪ್ರತೀ ಟ್ರಿಪ್ಗೆ 115 ರೂ.ಗಳಂತೆ ಒಂದು ದಿನಕ್ಕೆ ಒಟ್ಟು ಸುಮಾರು 5060ರೂ.ಗಳನ್ನು ಕೆ.ಎಸ್.ಆರ್.ಟಿ.ಸಿ. ಬಸ್ಗಳ ಮೂಲಕವೇ ಟೋಲ್ ಸಂಗ್ರಹಿಸಲಾಗುತ್ತಿದೆ. 

        ಇದರಂತೆ ಇತರೇ ಹಳ್ಳಿಗಳ ಬಸ್ಗಳಿಂದಲೂ ಅಧಿಕ ಟೋಲ್ ಸಂಗ್ರಹ ನಡೆದಿದೆ. ಈ ಹಣವನ್ನು ಕೆ.ಎಸ್.ಆರ್.ಟಿ.ಸಿ.ಯ ಅಧಿಕಾರಿಗಳು ಪ್ರಯಾಣಿಕರ ಮೇಲೆಯೇ ವಿಧಿಸುತ್ತಿದ್ದು, ಈಗ ಧಾರವಾಡ-ಅಮ್ಮಿನಬಾವಿ ಮಧ್ಯೆ ಬಸ್ ಪ್ರಯಾಣ ದರವನ್ನು 15 ರೂ.ಗಳಿಂದ 18 ರೂ.ಗಳಿಗೆ ಹೆಚ್ಚಿಸಿದ್ದಾರೆ ಎಂದವರು ಹೇಳಿದ್ದಾರೆ. 

     ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ ಮುಂತಾದ ಸಮೀಪದ ಗ್ರಾಮಗಳಿಂದ ನಿತ್ಯವೂ ಸಂಚರಿಸುವ ಖಾಸಗಿ ಸ್ವಾಮ್ಯದ ಎಲ್ಲ ತರಹದ ವಾಹನಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪನಗರ (ಗ್ರಾಮೀಣ) ಬಸ್ಗಳಿಗೂ ಟೋಲ್ ಸಂಗ್ರಹದಿಂದ ವಿನಾಯತಿ ನೀಡಬೇಕೆಂದು ಕನರ್ಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿಗೂ ಸಹ ಪ್ರತ್ಯೇಕವಾಗಿ ಪತ್ರ ಬರೆದು ತಾ.ಪಂ. ಸದಸ್ಯ ದೇಸಾಯಿ ಒತ್ತಾಯಿಸಿದ್ದಾರೆ. 

         ತಾಲೂಕು ಪಂಚಾಯತಿ ನಿರ್ಣಯ : ಫೆಬ್ರುವರಿ 25 ರಂದು ಜರುಗಿದ ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಗಮನಸೆಳೆದಿರುವ ಅವರು, ಧಾರವಾಡ ನಗರದಿಂದ ಅತೀ ಹತ್ತಿರದಲ್ಲಿರುವ ಮರೇವಾಡ, ಅಮ್ಮಿನಬಾವಿ, ತಿಮ್ಮಾಪೂರ, ಕರಡಿಗುಡ್ಡ, ಪುಡಕಲಕಟ್ಟಿ, ಉಪ್ಪಿನಬೆಟಗೇರಿ, ಹಾರೋಬೆಳವಡಿ ಮುಂತಾದ ಹಳ್ಳಿಗಳಿಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಬಸ್ಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡುವಂತೆ ಸವರ್ಾನುಮತದ ನಿರ್ಣಯ ಅಂಗೀಕರಿಸಲಾಗಿದೆ ಎಂದೂ ಸುರೇಂದ್ರ ದೇಸಾಯಿ ತಮ್ಮ ಪತ್ರದಲ್ಲಿ ತಿಳಿಸಿ ತಾ.ಪಂ. ನಿರ್ಣಯದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.  

      ಧಾರವಾಡ-ಗೋವಾ ರಸ್ತೆಯಲ್ಲಿಯೂ ಟೋಲ್ ಗೇಟ್ ಇದ್ದು, ಅಲ್ಲಿಯ ರಸ್ತೆಯಲ್ಲಿ ತಾಲೂಕಿನ ಮುಗದ, ಮಂಡೀಹಾಳ ಮುಂತಾದ ಸಮೀಪದ ಗ್ರಾಮಗಳಿಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಬಸ್ಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡಲಾಗಿದ್ದು, ಅದೇ ಮಾದರಿಯಲ್ಲಿ ಮರೇವಾಡ ಟೋಲ್ ಗೇಟ್ದಲ್ಲಿಯೂ ಕೆ.ಎಸ್.ಆರ್.ಟಿ.ಸಿ. ಬಸ್ಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. 

        ಬಡ ಕೂಲಿಕಾರರಿಗೆ ಹೊರೆ : ನಿತ್ಯವೂ ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳಿಂದ ನೂರಾರು ಕಟ್ಟಡ ಕಾಮರ್ಿಕರು ಹಾಗೂ ಇತರೇ ಕ್ಷೇತ್ರಗಳ ಬಡ ಕೂಲಿಕಾರರಿಗೆ 3 ರೂ. ಪ್ರಯಾಣದರದಲ್ಲಾದ ಹೆಚ್ಚಳದಿಂದ ದಿನಕ್ಕೆ 6 ರೂ. ಹೊರೆಯಾಗಿದ್ದು, ಕೂಡಲೇ ಕೆ.ಎಸ್.ಆರ್.ಟಿ.ಸಿ. ಬಸ್ಗಳಿಗೆ ಟೋಲ್ ಸಂಗ್ರಹದಿಂದ ವಿನಾಯತಿ ನೀಡುವಲ್ಲಿ ಹಾಗೂ ಬಸ್ ಪ್ರಯಾಣ ದರ ಇಳಿಕೆ ಮಾಡುವಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಆದೇಶ ನೀಡಬೇಕೆಂದು ತಾ.ಪಂ. ಸದಸ್ಯ ಸುರೇಂದ್ರ ದೇಸಾಯಿ ಒತ್ತಾಯಿಸಿದ್ದಾರೆ.