ಆಟೋ ಚಾಲಕರಿಗೆ ಅಭಿಮಾನಿ ಬಳಗದಿಂದ ಆಹಾರ ಕಿಟ್ ವಿತರಣೆ

ಲೋಕದರ್ಶನವರದಿ

ರಾಣೇಬೆನ್ನೂರು: ಏ.25: ಆಟೋ ಚಾಲನೆಯಿಂದಲೇ ನಿತ್ಯದ ಬದುಕು ಸಾಗಿಸುವ ಸಾವಿರಾರು ಚಾಲಕರು ಬದುಕಿಲ್ಲದೇ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ ಸೌಜನ್ಯಯುತವಾಗಿ ತಮ್ಮ ಸೇವಾ ಯೋಜನೆಯಲ್ಲಿ ಅವಶ್ಯ ಮತ್ತು ಅಗತ್ಯವಿರುವ ಜೀವನಾವಶ್ಯಕ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಲಾಗುತ್ತಿದೆ.  ಯಾರೂ ಅನ್ಯತಾ ಭಾವಿಸದೇ, ಸ್ವೀಕರಿಸಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಅವರು ಶನಿವಾರ ಇಲ್ಲಿನ ರೈಲ್ವೆ ಸ್ಟೇಷನ್ ಆಟೋನಿಲ್ದಾಣದಲ್ಲಿ ವಿವಿಧ ಆಟೋ ನಿಲ್ದಾಣಗಳ ಚಾಲಕರಿಗೆ ಶಾಸಕರ ಅಭಿಮಾನಿ ಬಳಗವು ಆಯೋಜಿಸಿದ್ದ, ಅಗತ್ಯ ಮತ್ತು ಜೀವಾನವಶ್ಯಕ ಆಹಾರಧಾನ್ಯಗಳ ಕಿಟ್ಗಳನ್ನು ವಿತರಿಸಿ ಮಾತನಾಡಿದರು.

ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ.  ಕಷ್ಟ ಮತ್ತು ಸುಖ ಇದ್ದೇ ಇರುತ್ತದೆ. ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ ಕುಗ್ಗದೇ, ಆತ್ಮ ಸ್ಥೈರ್ಯದಿಂದ ಭಗವಂತನ ಮೇಲೆ ನಂಬಿಕೆಯಿಟ್ಟು ಜೀವನ ಸಾಗಿಸಬೇಕು. 

  ಇಂದಿಲ್ಲ ನಾಳೆ, ಒಳ್ಳೆಯ ದಿನಗಳು ಬರಲಿವೆ ಎಂದ ಅವರು ಆಟೋ ಚಾಲಕರು ಸಂಘ ಸಂಸ್ಥೆಗಳ, ನಾಗರೀಕರು ದಾನಿಗಳು ಉದಾರವಾಗಿ ಕೊಡುತ್ತಿರುವ ಸಹಾಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಪೂಜಾರ ಕರೆ ನೀಡಿದರು. 

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭಾ ಸದಸ್ಯರಾದ ಮಲ್ಲಣ್ಣ ಅಂಗಡಿ, ರಮೇಶ್ ಗುತ್ತಲ್, ವರ್ತಕ ದಯಾಲಾಲ್ ಸಂಘವಿ, ಅಭಿಮಾನಿ ಬಳಗದ ಅಧ್ಯಕ್ಷ ಅನೀಲ್ ಸಿದ್ಧಾಳಿ, ಪರಮೇಶಪ್ಪ ಗೂಳಣ್ಣನವರ, ಸೋಮಶೇಖರ ಗೌಡಶಿವಣ್ಣನವರ,  ಮಲ್ಲಿಕಾಜರ್ುನ ಪೂಜಾರ, ದೀಪಕ್ ಹರಪನಹಳ್ಳಿ, ನಂದೀಶ್ ಕೊರಿಶೆಟ್ಟರ್, ಸಂತೋಷ ಕುಂದಗೋಳ, ಬಸವರಾಜ ಆನ್ವೇರಿ, ನಾಗರಾಜ ಚಲವಾದಿ, ಮಲ್ಲಿಕಾಜರ್ುನ ಪುರಾಣಿಕಮಠ, ಅರುಣ ಹಿತ್ತಲಮನಿ, ಪ್ರಭಾವತಿ ತಿಳವಳ್ಳಿ, ಕೊಟ್ರೇಶ್ ಕೆಂಚಪ್ಪನವರ, ಪಂಚಾಕ್ಷರಿ ಮುದಗಲ್ಮಠ ಸೇರಿದಂತೆ ಅರುಣಕುಮಾರ ಪೂಜಾರ ಅಭಿಮಾನಿ ಬಳಗದ ಸದಸ್ಯರು, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.