ನವದೆಹಲಿ, ನ 14 : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಶಾಲೆಗಳಿಗೆ ಗುರುವಾರ ಮತ್ತು ಶುಕ್ರವಾರ ರಜೆ ಘೋಷಿಸಲಾಗಿದೆ.
ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದೆ ಎಂದು ಪರಿಸರ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಪ್ರಾಧಿಕಾರ ತಿಳಿಸಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕಟ್ಟಡ ನಿರ್ಣಾಣದಲ್ಲಿನ ಉಪಯೋಗಿಸುವ ಯಂತ್ರಗಳ ಬಳಕೆಗೂ ನ 15 ರವರೆಗೆ ನಿಷೇಧ ಹೇರಲಾಗಿದೆ.
ಫರಿದಾಬಾದ್, ಗುರುಗ್ರಾಮ್, ಗಜಿಯಾಬಾದ್, ನೋಯ್ಡಾ, ಬಹದುರ್ಗಾ, ಭಿವಾಡಿ, ಸೋನೆಪಟ್, ಪಾಣಿಪತ್ ಗಳಲ್ಲಿನ ಎಲ್ಲಾ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ಬಳಸದ ಇತರ ಇಂಧನ ಆಧಾರಿತ ಕೈಗಾರಿಕೆಗಳೂ ಶುಕ್ರವಾರದವರೆಗೆ ಮುಚ್ಚಿರಲಿವೆ.
ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರುತ್ತಿದ್ದು ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ನೆರೆ ರಾಜ್ಯಗಳ ಉಳಿಕೆ ಸುಡುವಿಕೆ ಕೂಡ ದೆಹಲಿ ಮೇಲೆ ಪರಿಣಾಮ ಬೀರಿದೆ. ಸಮ - ಬೆಸ ಕ್ರಮದನ್ವಯ ವಾಹನಗಳ ಸಂಚಾರಕ್ಕೆ ಮಿತಿಯೊಡ್ಡಲಾಗಿದೆ. ಆದಾಗ್ಯೂ ದೆಹಲಿಯಲ್ಲಿ ವಾಯುಗುಣಮಟ್ಟ ಹತೋಟಿಗೆ ಬಂದಿಲ್ಲ.