ದೆಹಲಿ ಅಗ್ನಿ ದುರಂತ; ತನಿಖೆಗೆ ಸಿಎಂ ಕೇಜ್ರೀವಾಲ್ ಆದೇಶ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ

 ನವದೆಹಲಿ, ಡಿ 8:   ಕನಿಷ್ಟ  43  ಮಂದಿಯನ್ನು   ಬಲಿ ಪಡೆದುಕೊಂಡಿರುವ   ದೆಹಲಿಯ  ಅನಾಜ್ ಮಂಡಿ  ಅಗ್ನಿ ದುರಂತದ  ಬಗ್ಗೆ   ನ್ಯಾಯಾಂಗ  ತನಿಖೆಗೆ   ದೆಹಲಿ ಮುಖ್ಯಮಂತ್ರಿ  ಅರವಿಂದ್  ಕೇಜ್ರಿವಾಲ್  ಭಾನುವಾರ ಆದೇಶಿಸಿದ್ದು,  ದುರ್ಘಟನೆಯಲ್ಲಿ  ಮೃತ ಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ತಲಾ 10 ಲಕ್ಷ  ಹಾಗೂ ಗಾಯಗೊಂಡವರಿಗೆ 1ಲಕ್ಷರೂಪಾಯಿ ಪರಿಹಾರ  ಪ್ರಕಟಿಸಿದ್ದಾರೆ.  ರಾಣಿ  ಝಾನ್ಸಿ ರೋಡ್   ಸಮೀಪವಿರುವ  ನಾಲ್ಕು ಹಂತಸ್ತಿನ ಅನಾಜ್ ಮಂಡಿ ಕಟ್ಟದಲ್ಲಿ  ಭಾರಿ ಅಗ್ನಿ  ಅವಗಡ ಸಂಭವಿಸಿ 43 ಮಂದಿ ಮೃತಪಟ್ಟಿದ್ದಾರೆ ಅವಗಡ  ನಡೆದ  ಸ್ಥಳಕ್ಕೆ    ಸಂಪುಟ  ಸಚಿವರಾದ ಇಮ್ರಾನ್  ಹುಸೇನ್ ಹಾಗೂ  ಸತ್ಯೇಂದ್ರ ಜೈನ್  ಅವರೊಂದಿಗೆ   ಭೇಟಿ  ನೀಡಿ ಪರಿಶೀಲಿಸಿದ   ದೆಹಲಿ ಮುಖ್ಯಮಂತ್ರಿ   ಅರವಿಂದ ಕೇಜ್ರೀವಾಲ್,  ನಂತರ ಮಾಧ್ಯಮಗಳೊಂದಿಗೆ ಮಾತನಾಡಿ,  ಇದೊಂದು ಅತ್ಯಂತ ದುಃಖದ  ಘಟನೆ, ಈ ಘಟನೆಯ ಬಗ್ಗೆ  ನ್ಯಾಯಾಂಗ   ತನಿಖೆಗೆ  ಆದೇಶಿಸಿದ್ದೇನೆ.  ದುರಂತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ  1ಲಕ್ಷ ಪರಿಹಾರ ಕಲ್ಪಿಸುವ ಜತೆಗೆ  ಚಿಕಿತ್ಸಾ ವೆಚ್ಚವನ್ನೂ ಸರ್ಕಾರ  ಭರಿಸಲಿದೆ ಎಂದರು. ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಬೇಕಿದೆ.  ಆದರೆ   ದುರಂತದಲ್ಲಿ  ಮೃತಪಟ್ಟವರ ಸಂಖ್ಯೆ 40ಕ್ಕೂ ಹೆಚ್ಚುವ ಸಾಧ್ಯತೆಯಿದೆ ಎಂಬ ಭೀತಿ ವ್ಯಕ್ತಪಡಿಸಿದರು. ಅಗ್ನಿ   ಅವಗಡಕ್ಕೆ  ಕಾರಣರಾದ ತಪ್ಪಿತಸ್ಥರನ್ನು  ನಿರ್ದುಕ್ಷಿಣ್ಯವಾಗಿ   ಶಿಕ್ಷಿಸಲಾಗುವುದು  ಎಂದು ಕೇಜ್ರೀವಾಲ್  ಎಚ್ಚರಿಕೆ ನೀಡಿದರು. ದೆಹಲಿಯ  ಇಕ್ಕಟ್ಟಾದ ಪ್ರದೇಶಗಳಲ್ಲಿ ಇಂತಹ  ಘಟನೆಗಳು ನಡೆದಾಗ,  ಸೂಕ್ತವಾಗಿ ನಿಭಾಯಿಸಲು  ದೀರ್ಘಾವಧಿಯ  ಯೋಜನೆ ರೂಪಿಸಬೇಕು  ಎಂದು  ಬಿಜೆಪಿ ನಾಯಕ  ವಿಜಯ್  ಗೋಯಲ್ ಹೇಳಿದ್ದಾರೆ. ತನಿಖೆಯಿಂದ ಯಾವುದೇ ರೀತಿಯ ನೆರವಾಗುವುದಿಲ್ಲ  ಎಂದು  ಅವರು  ಬೇಸರ ವ್ಯಕ್ತಪಡಿಸಿದ್ದಾರೆ. ಕೇಜ್ರೀವಾಲ್,  ಎಲ್ ಎನ್ ಜೆ ಪಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡವರಿಗೆ  ಕಲ್ಪಿಸಲಾಗುತ್ತಿರುವ  ಚಿಕಿತ್ಸೆ  ಪರಿಶೀಲಿಸಿದರು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ,    ಹಳೆ ದೆಹಲಿಯ  ಫಿಲ್ಮಿಸ್ಥಾನ್ ಸಿನಿಮಾ ಬಳಿ ನಡೆದಿರುವ  ದುರಂತ ಭಯಾನಕವಾಗಿದ್ದು, ತೀವ್ರ ನೋವು ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಗ್ನಿ  ದುರಂತ ನಡೆದ ಸ್ಥಳಕ್ಕೆ  ನಾನು ಭೇಟಿ ನೀಡಿದ್ದೆ.  ಸಾವು ನೋವುಗಳು  ಹೃದಯ ವಿದ್ರಾವಕವಾಗಿದ್ದು,  ಮೃತವ್ಯಕ್ತಿಗಳ ಕುಟುಂಬಗಳಿಗೆ  ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ, ಗಾಯಗೊಂಡವರು  ತ್ವರಿತವಾಗಿ ಚೇತರಿಸಿಕೊಳ್ಳಲಿ  ಎಂದು ಹಾರೈಸಿದ್ದಾರೆ. ಪೂರ್ವ ದೆಹಲಿಯ  ಬಿಜೆಪಿ ಸಂಸದ ಗೌತಮ್ ಗಂಭೀರ್,  ಅನಾಜ್ ಗಂಜ್ ನಲ್ಲಿ ನಡೆದಿರುವ  ಅಗ್ನಿ ದುರಂತ  ವಿಷಯ ತಿಳಿದು  ತೀವ್ರ ದುಃಖವಾಗಿದೆ. ಸಂತ್ರಸ್ತ ಕುಟುಂಗಳಿಗೆ  ಶಾಂತಿ ಕೋರಿ ಪ್ರಾರ್ಥಿಸುವುದಾಗಿ. ಗಾಯಗೊಂಡವರ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಅಗ್ನಿ ದುರಂತ ಸಂಭವಿಸಿರುವ    ಹ್ಯಾಂಡ್ ಬ್ಯಾಗ್  ಕಾರ್ಖಾನೆಯಲ್ಲಿ ಭಾರಿ ಪ್ರಮಾಣದ  ಕಚ್ಚಾವಸ್ತು ಸಂಗ್ರಹಿಸಿಡಲಾಗಿತ್ತು ಎಂದು  ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈವರೆಗೆ  ನಾವು  50ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಬಹುತೇಕ ಮಂದಿ ಹೊಗೆ ಸೇವಿಸಿ ತೊಂದರೆಗೊಳಗಾಗಿದ್ದಾರೆ  ಎಂದು ಆಗ್ನಿ ಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.