ನವದೆಹಲಿ, ಆ 31 : ದೆಹಲಿಯ ಚಿನಿವಾರ ಪೇಟೆಯಲ್ಲಿಂದು ಖರೀದಿ ಇಳಿಮುಖವಾದ ಕಾರಣ ಎರಡನೇ ದಿನವೂ ಸಹ ಚಿನ್ನದ ಬೆಲೆ ತಗ್ಗಿತ್ತು. ಕಳೆದೊಂದು ವಾರದಲ್ಲಿ ಹತ್ತು ಗ್ರಾಂ ಚಿನ್ನಕ್ಕೆ 39, 649 ರೂ. ಇದ್ದ ಧಾರಣೆ ಶನಿವಾರ 80 ರೂ. ಕುಸಿತ ಕಂಡಿತು
ಬೆಳ್ಳಿಯ ಬೆಲೆ ಮಾರುಕಟ್ಟೆಯಲ್ಲಿ 200 ರೂ. ಏರಿಕೆ ಕಂಡು ಪ್ರತಿ ಕೆ.ಜಿಗೆ 48,800 ರೂ. ಆಗಿದೆ.
ವಿದೇಶೀ ಮಾರುಕಟ್ಟೆಯಲ್ಲಿ ವಾರಾಂತ್ಯದಲ್ಲಿ ಹಳದಿ ಲೋಹದ ಕುಸಿತ ಮತ್ತು ಬೆಳ್ಳಿಯ ಏರಿಕೆ ಪ್ರವೃತ್ತಿ ಸ್ಥಳೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಲಂಡನ್ ಹಾಗೂ ನ್ಯೂಯಾಕರ್್ ನಿಂದ ಲಭ್ಯವಾದ ಮಾಹಿತಿ ಪ್ರಕಾರ, ವಹಿವಾಟಿನ ಕೊನೆಯ ದಿನ ಶುಕ್ರವಾರದಂದು ಚಿನ್ನ 7.35 ಡಾಲರ್ ನಷ್ಟು ಕುಸಿದು 1,519.95 ಡಾಲರ್ ಔನ್ಸ್ ಗೆ ತಲುಪಿದೆ. ಅಮೆರಿಕಾ ಹಾಗೂ ಚೀನಾ ನಡುವಣ ವಾಣಿಜ್ಯ ಸಮರದ ಪರಿಣಾಮ ಚಿನ್ನದ ಮೇಲೆ ಒತ್ತಡ ಹೇರಿಕೆ ಆಗಿದೆ.